* ಅಪರೂಪದ ಮತ್ತು ಅಳಿವಿನ ಅಂಚಿನಲ್ಲಿರುವ ಬಿಳಿ ಕಡವೆ ಕಾವೇರಿ ವನ್ಯ ಜೀವಿ ವಿಭಾಗದ ಸ೦ಗಮ ಅರಣ್ಯ ಪ್ರದೇಶದ ಗಾಳಿಬೋರೆ ಬಳಿ ಪತ್ತೆಯಾಗಿದೆ.* ಗಾಳಿಬೋರೆ ಬಳಿ ಅಳವಡಿಸಿದ್ದ ಕ್ಯಾಮೆರಾ ಕಣ್ಣಿನಲ್ಲಿ ಅಪರೂಪದ ಬಿಳಿ ಕಡವೆ ಸೆರೆಯಾಗಿದೆ . ಅತ್ಯಂತ ಅಪರೂಪದ ವನ್ಯ ಜೀವಿ ಪ್ರಭೇದಗಳಲ್ಲಿ ಒಂದಾಗಿರುವಬಳಿ ಸಾಂಬಾರ್ (ಕಡವೆ) ಪ್ರಾಣಿಗಳು ಅಳಿವಿನಂಚಿನ ಹಾಗೂ ಅತಿ ಅಪರೂಪದ ತಳಿಯಾಗಿವೆ. * ಇದು ವಿಷಾ ಖಂಡದಲ್ಲಿಯೇ ಅಪರೂಪವಾಗಿರುವ ಪ್ರಭೇದವಾಗಿದೆ ಈ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಈ ಅಪರೂಪದ ಪ್ರಬೇಧ ಕಂಡುಬಂದಿತ್ತು. * ಕಾವೇರಿ ವನ್ಯಜೀವಿ ವಿಭಾಗದ ಸಂಗಮ ವಲಯದಲ್ಲಿ ಕಂಡುಬಂದಿರುವುದು ವನ್ಯ ಪ್ರಾಣಿ ಪ್ರಿಯರಲ್ಲಿ ಸಂತಸ ತಂದಿದೆ ಎಂದು ವಲಯ ಅರಣ್ಯಾಧಿಕಾರಿ ದೇವರಾಜು ಪ್ರತಿಕ್ರಿಯೆ ನೀಡಿದ್ದಾರೆ.