* ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್‌ನಲ್ಲಿ (Gaganyaan Mission) ವ್ಯೋಮಿತ್ರ (Vyommitra) ಹೆಸರಿನ ಮಹಿಳಾ ರೋಬೋಟ್‌ (Female Robot) ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ ಎಂದು ಆಗಸ್ಟ್ 26 ರಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh) ತಿಳಿಸಿದ್ದಾರೆ.* ಮಹಿಳಾ ರೋಬೋಟ್ ಎಲ್ಲಾ ಮಾನವ ಚಟುವಟಿಕೆಗಳನ್ನು ಅನುಕರಿಸಲಿದೆ. ಈ ಪ್ರಯೋಗ ಯಶಸ್ವಿಯಾದ ಬಳಿಕ ನಾವು ಈ ಯೋಜನೆಯಲ್ಲಿ ಮುಂದುವರಿಯಬಹುದು ಎಂದು ಹೇಳಿದರು.* ಗಗನಯಾನ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. * ಗಗನಯಾನ ಮಿಷನ್‌ನಲ್ಲಿ ಮೂವರು ಗಗನಯಾನಿಗಳನ್ನು ಮೂರು ದಿನ 400 ಕಿ.ಮೀ ಎತ್ತರದ ಕಕ್ಷೆಗೆ ಕಳುಹಿಸಿ ನಂತರ ಸಮುದ್ರದ ನೀರಿನ ಮೇಲೆ ಇಳಿಸಲಾಗುತ್ತದೆ.