* ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಎತ್ತರದ ಸಾರ್ವಜನಿಕ ರಸ್ತೆಗಳಲ್ಲಿ ಫ್ಯೂಚರಿಸ್ಟಿಕ್ ತಂತ್ರಜ್ಞಾನದ ಮೊದಲ ವಾಣಿಜ್ಯ ಪ್ರಯೋಗದೊಂದಿಗೆ ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಸೇವೆಯು ಲೇಹ್‌ನಲ್ಲಿ ಪ್ರಾರಂಭವಾಗುತ್ತಿದೆ. * ಭಾರತದ ಅತೀ ದೊಡ್ಡ ಇಂಧನ ಉತ್ಪಾದನಾ ಕಂಪನಿ ಎನ್‌ ಟಿಪಿಸಿ ಯಿಂದ ಈ ಯೋಜನೆಯನ್ನು ಜಾರಿಗೊಳಿಸಿದೆ.* ಹೈಡ್ರೋಜನ್‌ ಬಸ್ಸನ್ನು ಒಂದು ರೀತಿಯಲ್ಲಿ ಎಲೆಕ್ಟ್ರಿಕ್‌ ಬಸ್ಸು ಎಂದೇ ಹೇಳಬಹುದು. ಏಕೆಂದರೆ ಇದೂ ಕೂಡ ಬ್ಯಾಟರಿ ಆಧಾರಿತವಾಗಿರುತ್ತದೆ. ಈ ಬಸ್ಸಿಗೆ ಹೈಡ್ರೋಜನ್‌ ಹಾಕಿದರೆ ಅದು ಆಮ್ಲಜನಕದ ಕಣಗಳೊಂದಿಗೆ ಸೇರಿಕೊಂಡು ವಿದ್ಯುತ್‌ ತಯಾರಿಸುತ್ತದೆ. ಇದರಿಂದಾಗಿ ಬಸ್‌ನಲ್ಲಿರುವ ಬ್ಯಾಟರಿ ಚಾರ್ಜ್‌ ಆಗುತ್ತದೆ.* 2020 ರ ಏಪ್ರಿಲ್‌ನಲ್ಲಿ ಜಾಗತಿಕ ಆಸಕ್ತಿಯ ಅಭಿವ್ಯಕ್ತಿಯಡಿಯಲ್ಲಿ ಅಶೋಕ್ ಲೇಲ್ಯಾಂಡ್ ತಲಾ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಡ್ರೋಜನ್ ಇಂಧನದಾರಿತ ಬಸ್‌ಗಳನ್ನು ಪೂರೈಸುತ್ತಿದೆ.