*ಭಾರತ ತಂಡದ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ,ಮೊಹಮದ್ ಶಮಿ ಸೇರಿದಂತೆ ಇತರ ಆರು ಭಾರತೀಯ ಆಟಗಾರರನ್ನು ಒಳಗೊಂಡ 2023ರ ಏಕದಿನ ತಂಡವನ್ನು ಐಸಿಸಿ ಇದೀಗ ಪ್ರಕಟಿಸಿದೆ.*ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಸತತ 10 ಪಂದ್ಯಗಳಲ್ಲಿ ಗೆಲುವಿನತ್ತ ಮುನ್ನಡೆಸಿದ ರೋಹಿತ್ ಶರ್ಮಾ 2023ರ ಐಸಿಸಿ ವರ್ಷದ ಏಕದಿನ ತಂಡದ ನಾಯಕರಾಗಿ  ಮಂಗಳವಾರ ಆಯ್ಕೆಯಾದರು.*ಐಸಿಸಿ ವರ್ಷದ ಏಕದಿನ ತಂಡದ ಅಗ್ರ ಕ್ರಮಾಂಕದಲ್ಲಿ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಸೇರಿದ್ದಾರೆ. ಭಾರತ ತಂಡದ ನಾಯಕ ಕಳೆದ ವರ್ಷ 52ರ ಸರಾಸರಿಯಲ್ಲಿ ಒಟ್ಟು1,255 ರನ್ ಗಳಿಸಿದರೆ, ದ್ವಿಶತಕದೊಂದಿಗೆ ವರ್ಷವನ್ನು ಆರಂಭಿಸಿದ ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಅಮೋಘ 208 ರನ್ ಕಲೆಹಾಕಿದ್ದಾರೆ ಮತ್ತು ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು ರನ್ (1,584) ಗಳಿಸಿದ ಆಟಗಾರ ಎನಿಸಿಕೊಂಡರು.