* 1950ರಲ್ಲಿ ರಚಿಸಲಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ 2011ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ* ಮತ ಚಲಾವಣೆಯ ಮಹತ್ವವನ್ನು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯ ಮಹತ್ವದ ಬಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ  ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.* ಭಾರತ ಸರಕಾರವು ನಾಗರಿಕರಿಗೆ ಮತದಾನದ ಮಹತ್ವವನ್ನು ಒತ್ತಿ ಹೇಳಲು ಈ ದಿನವನ್ನು ಆಚರಿಸಲಾಗುತ್ತದೆ. ಚುನಾವಣೆಗಳಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನೂ ತನ್ನ ಮತದಾನದ ಹಕ್ಕನ್ನು ಚಲಾಯಿಸಬಹುದು.* ದಿನದ ಉದ್ದೇಶ: ಸಾರ್ವಜನಿಕರನ್ನು ಚುನಾವಣೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಮತದಾರರ ದಿನದ ಪ್ರಮುಖ ಉದ್ದೇಶ. ವಯಸ್ಸು, ಲಿಂಗ, ಜನಾಂಗೀಯ ಅಥವಾ ಇನ್ನಿತರ ಯಾವುದೇ ತಾರತಮ್ಯಗಳನ್ನು ಮಾಡದೆ ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರತಿಯೊಬ್ಬ ಭಾರತೀಯನಿಗೂ ಅವಕಾಶ ಮಾಡಿ ಕೊಡುವುದು.* ಈ ರಾಷ್ಟ್ರೀಯ ಮತದಾರರ ಕಾರ್ಯಕ್ರಮದಲ್ಲಿ ಮಾಲ್ಡೀವ್ಸ್‌, ಫಿಲಿಪ್ಪೈನ್ಸ್‌, ರಷ್ಯಾ, ಶ್ರೀಲಂಕಾ ಹಾಗೂ ಉಜ್ಬೇಕಿಸ್ತಾನದ ಚುನವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.* ಪ್ರತಿ ವರ್ಷ ಈ ರಾಷ್ಟ್ರೀಯ ಮತದಾರರ ದಿನವನ್ನು ಒಂದು ಥೀಮ್ ನ ಅಡಿಯಲ್ಲಿ ಆಚರಿಸಲಾಗುತ್ತದೆ, 2023ರ ಥೀಮ್ "ಮಾತಾನಾದ ಹಕ್ಕು ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು" ಎಂಬುವುದಾಗಿತ್ತು.  * 2024ರ ರಾಷ್ಟ್ರೀಯ ಮತದಾರರ ದಿನದ ಥೀಮ್ : "ಪ್ರತಿಯೊಬ್ಬರು ಮತ ಚಲಾಯಿಸುವಂತೆ ಮಾಡುವುದು; ಮತದಾನದಿಂದ ಯಾರೊಬ್ಬರೂ ದೂರ ಉಳಿಯದಂತೆ ನೋಡಿಕೊಳ್ಳುವುದು".