Job Description: * ಇಟಲಿ ದೇಶದಲ್ಲಿ ಈಗ ಆಡಳಿತವು ಇಟಲಿ ಭಾಷೆಯನ್ನು ಉತ್ತೇಜಿಸುವ ಕ್ರಮವಾಗಿ ಸರ್ಕಾರಿ ಸಂವಹನ ಇಟಲಿ ಭಾಷೆಯಲ್ಲಿಯೇ ನಡೆಯಬೇಕು ಎಂಬ ಮಹತ್ವದ ಮಸೂದೆಯನ್ನು ಶಾಸನ ಸಭೆಯಲ್ಲಿ ಮಂಡಿಸಿದೆ.* ಯಾವುದೇ ವಿದೇಶಿ ಭಾಷೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾಡುವಂತಿಲ್ಲ ಎಂಬ ನಿಯಮವನ್ನು ಒಳಗೊಂಡಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 100,000 ಯುರೋ (ಸುಮಾರು 90 ಲಕ್ಷ ರೂ.) ವರೆಗೆ ದಂಡವನ್ನು ವಿಧಿಸಲಾಗುವ ಪ್ರಸ್ತಾಪವನ್ನು ಒಳಗೊಂಡಿದೆ.* ಇಟಲಿ ದೇಶದಲ್ಲಿ ಸಾರ್ವಜನಿಕ ಸರಕು ಹಾಗೂ ಸೇವೆಗಳ ಪ್ರಚಾರ ಮತ್ತು ಬಳಕೆಗೆ ಈ ನಿಯಮ ಕಡ್ಡಾಯವಾಗಿದೆ. ಒಂದು ವೇಳೆ ಉಲ್ಲಂಘನೆಯಾದರೆ 5,000 ಯುರೋದಿಂದ 100,000 ಯುರೋ ವರೆಗೆ ದಂಡ ವಿಧಿಸುವ ಪ್ರಸ್ತಾಪವನ್ನು ಒಳಗೊಂಡಿದೆ.* ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಯುವ ಜನತೆ ಬೀಳುತ್ತಿದ್ದಾರೆ , ಇದರಿಂದಾಗಿ ಇಟಲಿಯ ಸಂಸ್ಕೃತಿ ಮತ್ತು ಆರ್ಥಿಕತೆಗೆ ಸಮಸ್ಯೆಯಾಗುತ್ತದೆ. ಈ ಕಾರಣಕ್ಕೆ ಇಂಗ್ಲಿಷ್ ಬಳಕೆಯ ಮೇಲೆ ನಿರ್ಬಂಧ ಹೇರುವ ಮಸೂದೆ ಮಂಡನೆ ಮಾಡಲಾಗಿದೆ.