Job Description: * 2023 ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಲೋಗೊವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬಿಡುಗಡೆಗೊಳಿಸಿದೆ.* ಮಾಹೆದ್ರ ಸಿಂಗ್ ಧೋನಿ ನೇತೃತ್ವ ಭಾರತ ತಂಡ ಏಕದಿನ ವಿಶ್ವಕಪ್ ಜಯಿಸಿದ 12 ನೇ ವರ್ಷಾಚರಣೆ ಸಂದರ್ಭದಲ್ಲೇ 2023 ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಲೋಗೊ ಬಿಡುಗಡೆ ಮಾಡಲಾಗಿದೆ. * ಈ ಲೋಗೋ ಸಂತಸ, ಶಕ್ತಿ, ನಿರಾಸೆ, ಗೌರವ, ಹೆಮ್ಮೆ, ಧೈರ್ಯ, ವೈಭವ, ವಿಸ್ಮಯ ಮತ್ತು ಉತ್ಸಾಹ ಹೀಗೆ ‘ನವರಸ’ದಿಂದ ಕೂಡಿದ್ದು, ಅಭಿಮಾನಿಗಳು ವಿಶ್ವಕಪ್‌ ಪಂದ್ಯಗಳ ವೇಳೆ ಎಲ್ಲಾ 9 ರೀತಿಯ ಭಾವನೆಗಳನ್ನು ಅನುಭವಿಸಲಿದ್ದಾರೆ.* 10 ತಂಡಗಳ ಟೂರ್ನಿಗೆ ಈಗಾಗಲೇ 7 ತಂಡಗಳು ಅರ್ಹತೆ ಪಡೆದಿದ್ದು, ಸೂಪರ್‌ ಲೀಗ್‌ ಮುಕ್ತಾಯದ ಬಳಿಕ ಇನ್ನೊಂದು ತಂಡಕ್ಕೆ ನೇರ ಅರ್ಹತೆ ಸಿಗಲಿದೆ. ಬಾಕಿ 2 ಸ್ಥಾನಗಳಿಗೆ 10 ತಂಡಗಳನ್ನು ಒಳಗೊಂಡ ಅರ್ಹತಾ ಟೂರ್ನಿಯು ಜೂನ್‌-ಜುಲೈನಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.