Job Description: ➤ ವಿಶಾಖಪಟ್ಟಣ: ಆಂಧ್ರಪ್ರದೇಶದ ಜನತೆಯ ದಶಕಗಳ ಕಾಲದ ಬಹುದೊಡ್ಡ ಕನಸು ಕೊನೆಗೂ ಸಾಕಾರಗೊಂಡಿದೆ. ಭಾರತೀಯ ರೈಲ್ವೆ ಜಾಲಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ದಕ್ಷಿಣ ಕರಾವಳಿ ರೈಲ್ವೆ ವಲಯ ಜೂನ್ 1ರಿಂದ ತನ್ನ ಅಧಿಕೃತ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದು ಭಾರತೀಯ ರೈಲ್ವೆಯ 18ನೇ ಅಧಿಕೃತ ರೈಲ್ವೆ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ➤ ಆಂಧ್ರಪ್ರದೇಶದ ವಿಶಾಖಪಟ್ಟಣವನ್ನು ಪ್ರಧಾನ ಕಚೇರಿಯನ್ನಾಗಿ ಹೊಂದಿರುವ ನೂತನ ದಕ್ಷಿಣ ಕರಾವಳಿ ರೈಲ್ವೆ ವಲಯವು 3,532 ಕಿ.ಮೀ. ಉದ್ದದ ಜಾಲ ಮತ್ತು 385 ನಿಲ್ದಾಣಗಳೊಂದಿಗೆ ಅಧಿಕೃತವಾಗಿ ಆರಂಭವಾಗಿದ್ದು, ಇದರ ನೆನಪಿಗಾಗಿ ಭಾರತೀಯ ರೈಲ್ವೆಯು 18 ನಕ್ಷತ್ರಗಳನ್ನು ಒಳಗೊಂಡ ಹೊಸ ಅಧಿಕೃತ ಲೋಗೋವನ್ನು ಅನಾವರಣಗೊಳಿಸಿದೆ. ➤ ವಲಯದ ವಿಭಾಗಗಳು ಮತ್ತು ವ್ಯಾಪ್ತಿ: ವಿಭಾಗದ ಹೆಸರು (Divisions) ಪ್ರಮುಖ ವೈಶಿಷ್ಟ್ಯಗಳು ವಿಜಯವಾಡ ವಿಭಾಗ (Vijayawada) ಅತ್ಯಂತ ಜನದಟ್ಟಣೆ ಮತ್ತು ಪ್ರಮುಖ ಆರ್ಥಿಕ ಕಾರಿಡಾರ್‌ಗಳನ್ನು ಹೊಂದಿದೆ. ಗುಂಟಕಲ್ ವಿಭಾಗ (Guntakal) ರಾಯಲಸೀಮಾ ಭಾಗದ ಪ್ರಮುಖ ಕನೆಕ್ಟಿವಿಟಿ ಒದಗಿಸುತ್ತದೆ. ಗುಂಟೂರು ವಿಭಾಗ (Guntur) ಕೃಷಿ ಮತ್ತು ವಾಣಿಜ್ಯ ಸರಕು ಸಾಗಣೆಗೆ ಪ್ರಸಿದ್ಧಿಯಾಗಿದೆ. ವಿಶಾಖಪಟ್ಟಣಂ (ಹೊಸ ವಿಭಾಗ) ಈ ಹಿಂದೆ ವಾಲ್ಟೇರ್ (Waltair) ವಿಭಾಗದ ಭಾಗವಾಗಿದ್ದ ಇದನ್ನು ಮರುಸಂಘಟಿಸಿ ಹೊಸದಾಗಿ ಸೇರಿಸಲಾಗಿದೆ.