Job Description: ➤ ಭಾರತೀಯ ರಕ್ಷಣಾ ವಲಯದಲ್ಲಿ ಮಹತ್ವದ ಬದಲಾವಣೆಯಾಗಿದೆ. ಭಾರತೀಯ ನೌಕಾಪಡೆಯ 27ನೇ ಮುಖ್ಯಸ್ಥರಾಗಿ (Chief of the Naval Staff - CNS) ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಮೇ 31, 2026 ರಂದು ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹುದ್ದೆಯಲ್ಲಿದ್ದ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು 41 ವರ್ಷಗಳ ಸುದೀರ್ಘ ಸೇವೆ ಮುಗಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ, ನೌಕಾಪಡೆಯ ಚುಕ್ಕಾಣಿ ಈಗ ಕೃಷ್ಣ ಸ್ವಾಮಿನಾಥನ್ ಅವರ ಕೈಸೇರಿದೆ.➤ ವಿಶೇಷವೆಂದರೆ, ನೂತನ ನೌಕಾಪಡೆ ಮುಖ್ಯಸ್ಥರಾದ ಕೃಷ್ಣ ಸ್ವಾಮಿನಾಥನ್ ಅವರು ನಮ್ಮ ಕರ್ನಾಟಕದ ಬೆಂಗಳೂರಿನ ಮೂಲದವರು. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದ್ದು, ಮುಂಬರುವ KPSC ಪರೀಕ್ಷೆಗಳಲ್ಲಿ ಇದರ ಮೇಲಿನ ಪ್ರಶ್ನೆಗಳನ್ನು ನಿರೀಕ್ಷಿಸಬಹುದಾಗಿದೆ.➤ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್: ಅವರು ಬೆಂಗಳೂರಿನ ಬಸವನಗುಡಿಯ ಎನ್.ಆರ್ ಕಾಲೋನಿಯಲ್ಲಿ ಜನಿಸಿದರು. ಇವರ ಪೋಷಕರಾದ ಡಿ. ಸ್ವಾಮಿನಾಥನ್ ಮತ್ತು ಶಾಂತಾ ಸ್ವಾಮಿನಾಥನ್ ಇಬ್ಬರೂ ಶಿಕ್ಷಕರಾಗಿದ್ದರು. ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು, ನಂತರ ವಿಜಯಪುರದ ಸೈನಿಕ ಶಾಲೆ (Sainik School, Vijayapura) ಸೇರಿದರು. ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಪದವೀಧರರಾದ ಇವರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ. ಕೊಚ್ಚಿನ್ ವಿವಿಯಿಂದ ಟೆಲಿಕಮ್ಯೂನಿಕೇಶನ್‌ನಲ್ಲಿ ಎಂಎಸ್ಸಿ, ಲಂಡನ್‌ನ ಕಿಂಗ್ಸ್ ಕಾಲೇಜ್‌ನಿಂದ ಡಿಫೆನ್ಸ್ ಸ್ಟಡೀಸ್‌ನಲ್ಲಿ ಎಂಎ ಹಾಗೂ ಮುಂಬೈ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಅಧ್ಯಯನದಲ್ಲಿ ಪಿಎಚ್‌ಡಿ (PhD) ಪದವಿ ಪಡೆದಿದ್ದಾರೆ. ➤ ನೌಕಾಪಡೆಯಲ್ಲಿನ ಸುದೀರ್ಘ ಸೇವೆ ಮತ್ತು ಸಾಧನೆಗಳು: ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಜುಲೈ 1, 1987 ರಂದು ಭಾರತೀಯ ನೌಕಾಪಡೆಗೆ ಅಧಿಕಾರಿಯಾಗಿ ಸೇರ್ಪಡೆಯಾದರು. ಇವರು ಕಮ್ಯುನಿಕೇಶನ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ (ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನ) ವಿಷಯದಲ್ಲಿ ತಜ್ಞರಾಗಿದ್ದಾರೆ. ತಮ್ಮ 39 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಇವರು ನೌಕಾಪಡೆಯ ಪ್ರಮುಖ ಯುದ್ಧನೌಕೆಗಳ ಕಮಾಂಡರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ: ಐಎನ್ಎಸ್ ವಿಕ್ರಮಾದಿತ್ಯ (INS Vikramaditya): ಭಾರತದ ಹೆಮ್ಮೆಯ ವಿಮಾನವಾಹಕ ಯುದ್ಧನೌಕೆಯಾದ ಐಎನ್ಎಸ್ ವಿಕ್ರಮಾದಿತ್ಯದ 2ನೇ ಕಮಾಂಡಿಂಗ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇತರ ಪ್ರಮುಖ ಯುದ್ಧನೌಕೆಗಳು: ಕ್ಷಿಪಣಿ ನೌಕೆಗಳಾದ ಐಎನ್ಎಸ್ ವಿದ್ಯುತ್, ಐಎನ್ಎಸ್ ವಿನಾಶ್, ಐಎನ್ಎಸ್ ಕುಲಿಶ್ ಮತ್ತು ಗೈಡೆಡ್ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್ಎಸ್ ಮೈಸೂರು (INS Mysore) ಗಳ ನೇತೃತ್ವ ವಹಿಸಿದ್ದರು. ಪ್ರಮುಖ ಹುದ್ದೆಗಳು: ಈ ನೇಮಕಾತಿಗೂ ಮುನ್ನ ಇವರು ಪಶ್ಚಿಮ ನೌಕಾ ಕಮಾಂಡ್‌ನ (Western Naval Command) ಮುಖ್ಯಸ್ಥರಾಗಿ ಹಾಗೂ ನೌಕಾಪಡೆಯ ಉಪ ಮುಖ್ಯಸ್ಥರಾಗಿ (Vice Chief of Naval Staff) ಸೇವೆ ಸಲ್ಲಿಸಿದ್ದರು. ➤ ಲಭಿಸಿರುವ ಪ್ರಮುಖ ಮಿಲಿಟರಿ ಗೌರವಗಳು: ಪರಮ ವಿಶಿಷ್ಟ ಸೇವಾ ಪದಕ (PVSM) ಅತಿ ವಿಶಿಷ್ಟ ಸೇವಾ ಪದಕ (AVSM) ವಿಶಿಷ್ಟ ಸೇವಾ ಪದಕ (VSM)