Job Description: ➤ ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತದ 'ಮೇಕ್ ಇನ್ ಇಂಡಿಯಾ' (Make in India) ಉಪಕ್ರಮಕ್ಕೆ ಭಾರಿ ಯಶಸ್ಸು ಸಿಕ್ಕಿದೆ. ಸಿಂಗಪುರದಲ್ಲಿ ನಡೆದ ಪ್ರತಿಷ್ಠಿತ ‘ಶಾಂಗ್ರಿ-ಲಾ ಸಂವಾದ’ದಲ್ಲಿ (Shangri-La Dialogue) ಪಾಲ್ಗೊಂಡಿದ್ದ ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು, ಭಾರತ ಮತ್ತು ವಿಯೆಟ್ನಾಂ ನಡುವೆ ಅತ್ಯಾಧುನಿಕ ಬ್ರಹ್ಮೋಸ್(BrahMos) ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಖರೀದಿ ಒಪ್ಪಂದ ಅಧಿಕೃತವಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.➤ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಗೆ ಪೆಟ್ಟು ನೀಡಲು ಮತ್ತು ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳಲು ವಿಯೆಟ್ನಾಂ ಈ ನಿರ್ಧಾರಕ್ಕೆ ಬಂದಿದೆ. ಇದರೊಂದಿಗೆ ಇಂಡೊನೇಷ್ಯಾ ದೇಶದೊಂದಿಗೂ ಒಪ್ಪಂದದ ಮಾತುಕತೆಗಳು ಅಂತಿಮ ಹಂತ ತಲುಪಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.➤ ಬ್ರಹ್ಮೋಸ್ರಫ್ತು ಒಪ್ಪಂದಗಳ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿ:ಫಿಲಿಪ್ಪೀನ್ಸ್: 2022 (ಸಹಿ ಹಾಕಲಾಗಿದೆ): 375 ಮಿಲಿಯನ್ ಡಾಲರ್ (ಸುಮಾರು ₹3,500 ಕೋಟಿ): ಬ್ರಹ್ಮೋಸ್ ಖರೀದಿಸಿದ ವಿಶ್ವದ ಮೊದಲ ವಿದೇಶಿ ರಾಷ್ಟ್ರ.ವಿಯೆಟ್ನಾಂ: 2026 (ಈಗ ಅಧಿಕೃತ ಘೋಷಣೆ): ಮೊತ್ತ ಬಹಿರಂಗಪಡಿಸಿಲ್ಲ: ಆಗ್ನೇಯ ಏಷ್ಯಾದಲ್ಲಿ ಭಾರತದ ವ್ಯೂಹಾತ್ಮಕ ಪಾಲುದಾರಿಕೆ ಬಲವರ್ಧನೆ.ಇಂಡೊನೇಷ್ಯಾ: ಅಂತಿಮ ಹಂತದಲ್ಲಿದೆ (2026): ಮಾತುಕತೆ ಪ್ರಗತಿಯಲ್ಲಿದೆ: ಕರಾವಳಿ ರಕ್ಷಣಾ ವ್ಯವಸ್ಥೆಗಾಗಿ ಭಾರತದ ತಂತ್ರಜ್ಞಾನ ಬಳಕೆ.➤ಬ್ರಹ್ಮೋಸ್ ಕ್ಷಿಪಣಿ ಎಂಬುದು ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೋಸ್ಕ್ವಾ ನದಿಗಳ ಹೆಸರಿನಿಂದ ಕರೆಯಲ್ಪಡುವ, DRDO ಮತ್ತು ರಷ್ಯಾದ NPO ಜಂಟಿಯಾಗಿ ಅಭಿವೃದ್ಧಿಪಡಿಸಿದ ವಿಶ್ವದ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಇದನ್ನು 'ಫೈರ್ ಅಂಡ್ ಫಾರ್ಗೆಟ್' ತತ್ವದಡಿ ಭೂಮಿ, ಸಮುದ್ರ, ಆಕಾಶ ಮತ್ತು ಸಬ್‌ಮೆರಿನ್‌ಗಳಿಂದಲೂ ಉಡಾವಣೆ ಮಾಡಬಹುದಾಗಿದೆ.➤ ವಿಯೆಟ್ನಾಂ ಜೊತೆಗಿನ ಬ್ರಹ್ಮಸ್ ಒಪ್ಪಂದದಿಂದ ಭಾರತದ 'ಆಕ್ಟ್ ಈಸ್ಟ್ ಪಾಲಿಸಿ' ಬಲಗೊಳ್ಳುವುದಲ್ಲದೆ, ದೇಶದ ರಕ್ಷಣಾ ರಫ್ತು ಗುರಿಗಳಿಗೆ ದೊಡ್ಡ ಉತ್ತೇಜನ ಸಿಗಲಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಏಕಸ್ವಾಮ್ಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಗೆ ನೆರವಾಗುವ ಮೂಲಕ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ.