* ಆಸ್ಟ್ರೇಲಿಯಾದ ಸ್ಟಾರ್‌ ಕ್ರಿಕೆಟರ್‌ ಡೇವಿಡ್ ವಾರ್ನರ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಜನವರಿ 3 ರಂದು ಪ್ರಾರಂಭವಾಗಲಿರುವ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ಗೂ ಮುನ್ನ ನಿವೃತ್ತಿ ಘೋಷಿಸಿದ್ದಾರೆ.* ವಾರ್ನರ್ ತಮ್ಮ ವೃತ್ತಿ ಜೀವನದಲ್ಲಿ 161 ODI ಗಳಲ್ಲಿ ಆಡಿದ್ದು, 45.30 ರ ಸರಾಸರಿಯಲ್ಲಿ 6,932 ಆಸ್ಟ್ರೇಲಿಯಾದ ಸ್ಟಾರ್‌ ಕ್ರಿಕೆಟರ್‌ ಡೇವಿಡ್ ವಾರ್ನರ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಜನವರಿ 3 ರಂದು ಪ್ರಾರಂಭವಾಗಲಿರುವ ಪಾಕಿಸ್ತಾನದ ವಿರುದ್ಧದ ಟೆಸ್ಟ್‌ಗೂ ಮುನ್ನ ನಿವೃತ್ತಿ ಘೋಷಿಸಿದ್ದಾರೆ. ಒಟ್ಟು 22 ಶತಕಗಳು ಮತ್ತು 33 ಅರ್ಧ ಶತಕಗಳೊಂದಿಗೆ ವಾರ್ನರ್ ಬೌಲರ್‌ಗಳನ್ನು ದುಸ್ವಪ್ನದಂತೆ ಕಾಡುತ್ತಿದ್ದರು. ವಾರ್ನರ್ ಗರಿಷ್ಠ ಸ್ಕೋರ್ 179 ರನ್ ಆಗಿದೆ.* "ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ವಿಶ್ವಕಪ್‌ ನನ್ನ ಕೊನೆಯ ಪಂದ್ಯ. ಆ ಗೆಲುವನ್ನು ಸಾಧಿಸಿದ್ದೇನೆ ಮತ್ತು ಭಾರತದಲ್ಲಿ ವಿಶ್ವಕಪ್‌ ಅನ್ನು ಗೆದ್ದಿದ್ದೇನೆ. ಇದು ಒಂದು ದೊಡ್ಡ ಸಾಧನೆ ಅಂತ ಭಾವಿಸುವೆ" ಎಂದು ಡೇವಿಡ್‌ ವಾರ್ನರ್ ಹೇಳಿದ್ದಾರೆ. ವಾರ್ನರ್ ಅವರು SCG ಅಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಲು ನಿರ್ಧರಿಸಿದ್ದಾರೆ. * ವಾರ್ನರ್ ಅವರು "ನಾನು ಕುಟುಂಬದೊಂದಿಗೆ ಕಾಲ ಕಳೆಯಬೇಕಿದೆ. ಈ ಹಿನ್ನೆಲೆಯಲ್ಲಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತೇನೆ" ಎಂದು ಸಿಡ್ನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.