Job Description: * ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಳು ಕ್ಯಾಲೆಂಡರ್ ವರ್ಷಗಳಲ್ಲಿ 2,000ಕ್ಕೂ ಹೆಚ್ಚು ರನ್ ಗಳಿಸಿದ ವಿಶಿಷ್ಟ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ* ದಕ್ಷಿಣ ಆಫ್ರಿಕಾ ವಿರುದ್ಧ ಪ್ರಥಮ ಟೆಸ್ಟ್ನ ಎರಡನೇ ಇನಿಂಗ್ಸ್‌ನಲ್ಲಿ ವೇಗಿಗಳಾದ ಕಾಗಿಸೊ ರಬಾಡ, ಮಾರ್ಕೊ ಜಾನ್ಸನ್ ಹಾಗೂ ನಾಂಡ್ರೆ ಬರ್ಗೆರ್ ಬೌಲಿಂಗ್ ದಾಳಿಗೆ ಭಾರತದ ಬ್ಯಾಟರ್ಗಳು ತರಗೆಲೆಗಳಂತೆ ಉದುರಿ ಹೋಗಿದ್ದರು. ಆಗ 82 ಎಸೆತಗಳಲ್ಲಿ 76 ರನ್ ಗಳಿಸಿದ ಕೊಹ್ಲಿ ಏಕಾಂಗಿ ಹೋರಾಟ ನೀಡಿದ್ದರು. 2023ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 2,048 ರನ್ ಗಳಿಸಿದರು.* ವಿರಾಟ್ ಕೊಹ್ಲಿ ಈ ವರ್ಷ 36 ಇನಿಂಗ್ಸ್‌ ಗಳಲ್ಲಿ 66.06 ಸರಾಸರಿಯಲ್ಲಿ 8 ಶತಕ ಹಾಗೂ 10 ಅರ್ಧಶತಕಗಳ ಸಹಿತ 2,048 ರನ್ ಗಳಿಸಿದ್ದಾರೆ.* ಅಧಿಕೃತ ದಾಖಲೆಯ ಪ್ರಕಾರ 1877ರಲ್ಲಿ ಮೊದಲ ಬಾರಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ ಯಾವೊಬ್ಬ ಆಟಗಾರನು ಈ ಸಾಧನೆ ಮಾಡಿಲ್ಲ.