*ಆಫ್ರಿಕಾ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈಶಂಕರ್ ರವರು ಜೂನ್ 4 ರಂದು (ಭಾನುವಾರ) ನಮೀಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವೆ ನೆಟುಂಬೊ ನ್ಯಾಂಡಿ ಎನ್‌ದೈತ್ವ ರವರನ್ನು ಭೇಟಿ ಮಾಡಲಾಗಿದ್ದು, ಇದು ಭಾರತದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.* ನಮೀಬಿಯಾದಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ 'ಭಾರತದ ಬೆಳವಣಿಗೆಯನ್ನು ಯಾರಿಂದಲೂ ತಡೆಯಲು  ಸಾಧ್ಯವಿಲ್ಲ. ಭಾರತ ಈಗ ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆ ರಾಷ್ಟ್ರವಾಗಿದ್ದು, ಸಧ್ಯದಲ್ಲೇ ನಾವು ಮೂರನೇ ಸ್ಥಾನಕ್ಕೇರುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.