* ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ ಬ್ಯಾಂಡ್ ಎಂಬ ಖ್ಯಾತಿಗೆ ಟಾಟಾ ಪವರ್ ಕಂಪನಿ ಪಾತ್ರವಾಗಿದ್ದು, ಅಮೆಜಾನ್ ಎರಡನೆಯ ಸ್ಥಾನದಲ್ಲಿದ್ದರೆ, ಟಾಟಾ ಸ್ಟೀಲ್ ಮೂರನೆಯ ಸ್ಥಾನದಲ್ಲಿದೆ ಎಂದು ರಾಂಡ್‌ಸ್ಟಾಡ್ ಇಂಡಿಯಾದ ಸಂಶೋಧನಾ ವರದಿ ಬಹಿರಂಗಪಡಿಸಿದೆ..*  ರಾಂಡ್‌ಸ್ಟಾಡ್ ಇಂಡಿಯಾ ಕಂಪನಿಯ ವಾರ್ಷಿಕ ವರದಿಯು ಮಾನವ ಸಂಪನ್ಮೂಲ ಸೇವೆ ಒದಗಿಸುವ ಈ ಮೂರು ಕಂಪನಿಗಳು ಆರ್ಥಿಕ ಸ್ಥಿತಿಗತಿ, ಒಳ್ಳೆಯ ಹೆಸರು, ವೃತ್ತಿಯಲ್ಲಿ ಮುನ್ನಡೆ ಮಾನದಂಡಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿವೆ ಎಂದು ತಿಳಿಸಿದೆ.* ನಾಲ್ಕನೆಯ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ನಂತರದ ಸ್ಥಾನದಲ್ಲಿ ಮೈಕ್ರೋಸಾಫ್ಟ್, ಸ್ಯಾಮ್ಸ್ಂಗ್ ಇಂಡಿಯಾ, ಇನ್ಫೋಸಿಸ್, ಟಾಟಾ ಮೋಟಾರ್ಸ್, ಐಬಿಎಂ ಆಕರ್ಷಕ ಉದ್ಯೋಗದಾತ ಸ್ಥಾನದಲ್ಲಿವೆ.