Job Description: * ಜನೆರಿಕ್ ಔಷಧಿಗಳ ಪ್ರಯೋಜನಗಳನ್ನು ಉತ್ತೇಜಿಸಲು ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.* ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನ ಔಷಧಿ ಕೇಂದ್ರ ಆಪರೇಟರ್ ಗಳಿಗೆ ಮತ್ತು ಪಾಲುದಾರರಿಗೆ ಬಹುಮಾನ ವಿತರಣೆ.* ಜನ ಔಷಧೀಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳ ಬೆಲೆಗಿಂತ 50 % ದಿಂದ 90 % ಕಡಿಮೆ ದರದಲ್ಲಿ ದೊರೆಯುತ್ತವೆ. * ಜನ ಔಷಧಿ ಮೂಲಕ ಸಾಮಾನ್ಯ ಸಾರ್ವಜನಿಕರ 20000 ರೂ ಕೋಟಿ ಉಳಿತಾಯವಾಗಿದೆ. ದೇಶದಾದ್ಯಂತ ಸುಮಾರು 9000 ಕ್ಕೂ ಅಧಿಕ ಜನ ಔಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.* 1759 ಉತ್ಕೃಷ್ಟ ಗುಣಮಟ್ಟದ ಔಷಧಿಗಳು ಮತ್ತು 280 ಸರ್ಜಿಕಲ್ ಪರಿಕರಗಳು ಲಭ್ಯ ಇವೆ. ಡಬ್ಲ್ಯೂಎಚ್ ಓ ಮತ್ತು ಜಿಎಂಪಿ ಮಾನ್ಯತೆ ಪಡೆದಿರುವ ಪೂರೈಕೆದಾರರು ಮತ್ತು ಎನ್ ಎಬಿಎಲ್ ಪರೀಕ್ಷಿತ ಗುಣಮಟ್ಟದ ಔಷಧಿಗಳು.* ಜನ ಔಷಧಿ ಕೇಂದ್ರ ತೆರೆಯಲು 5 ಲಕ್ಷ ರೂ ಹಣಕಾಸು ನೆರವು ಹಾಗೂ ಮಹಿಳೆಯರಿಗೆ, ದಿವ್ಯಂಗಜನರಿಗೆ, ಮಾಜಿ ಮತ್ತು ಯೋಧರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ, ದ್ವೀಪ ಸಮೂಹ ಹಾಗೂ ಪರ್ವತ ಪ್ರದೇಶಗಳ ಅರ್ಜಿದಾರರಿಗೆ ಹೆಚ್ಚುವರಿ 2 ಲಕ್ಷ ರೂ ಹಣಕಾಸು ನೆರವು