* ಅಸಂಘಟಿತ ಮೀನುಗಾರಿಕೆ ಕ್ಷೇತ್ರವನ್ನು ಔಪಚಾರಿಕಗೊಳಿಸಲು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಂಸ್ಥಿಕ ಹಣಕಾಸು ಒದಗಿಸಲು ಮತ್ತು ಜಲಚರ ಸಾಕಣೆ ವಿಮೆಯನ್ನು ಉತ್ತೇಜಿಸಲು ಸರ್ಕಾರ 6,000 ಕೋಟಿ ರೂ. ಗಳ ಯೋಜನೆಯನ್ನು ಘೋಷಿಸಿದೆ. ಇದರೊಂದಿಗೆ, ಈಗಾಗಲೇ 7,522.48 ಕೋಟಿ ರೂ. ಅನುಮೋದಿತವಾಗಿದೆ.* 'ಮೀನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿ' (ಎಫ್‌ಐಡಿಎಫ್) ಅನ್ನು 2025-26ರ ಹಣಕಾಸು ವರ್ಷದವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.* ಈಗಾಗಲೇ ಅನುಮೋದಿತ 7,522.48 ಕೋಟಿ ರೂ.ಗಳ ನಿಧಿ ಮತ್ತು 939.48 ಕೋಟಿ ರೂ.ಗಳ ಬಜೆಟ್ ಬೆಂಬಲದೊಂದಿಗೆ ಮುಂದಿನ ಮೂರು ವರ್ಷಗಳವರೆಗೆ ‘ಮೀನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿ’ (ಎಫ್‌ಐಡಿಎಫ್) ಅನ್ನು 2025-26ರ ಹಣಕಾಸು ವರ್ಷದವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಂ.ಎಂ.ಎಸ್.ವೈ.) ಅಡಿಯಲ್ಲಿ ಕೇಂದ್ರ ಉಪ ಯೋಜನೆಯಾದ ‘ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ’ (ಪಿ.ಎಂ.ಎಂ.ಕೆ.ಎಸ್.ಎಸ್.ವೈ)ಗೆ ತನ್ನ ಅನುಮೋದನೆ ನೀಡಿದೆ.