* ಆರು ಅಣು ವಿದ್ಯುತ್ ಸ್ಥಾವರ, ನೂರು ಶತಕೋಟಿ ಡಾಲರ್ ಹೊಸ ವ್ಯಾಪಾರದ ಗುರಿ, ರಾಷ್ಟ್ರೀಯ ಕರೆನ್ಸಿ ಮೂಲಕ ದ್ವಿಪಕ್ಷೀಯ ಪಾವತಿ ವ್ಯವಸ್ಥೆ ಉತ್ತೇಜನ ' ಇವು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಮಂತ್ರಿ ಮೋದಿ ಅವರ ಮಧ್ಯೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಚರ್ಚಿಸಲ್ಪಟ್ಟ ಪ್ರಮುಖ ವಿಷಯಗಳಾಗಿವೆ. ರಷ್ಯಾದ ಮಾಸ್ಕೋದಲ್ಲಿ ಎರಡು ದಿನ ನಡೆದ 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ದ್ವಿಪಕ್ಷೀಯ ಮಾತುಕತೆಯಲ್ಲಿ ಮೋದಿ-ಪುಟಿನ್ ಈ ವಿಷಯಗಳನ್ನು ಚರ್ಚಿಸಿದ್ದಾರೆ.* ರಷ್ಯನ್ ಸ್ಟೇಟ್ ನ್ಯೂಕ್ಲಿಯರ್ ಕಾರ್ಪೊರೇಷನ್ ರೊಸ್ಯಾಟಮ್ ವು ಭಾರತದಲ್ಲಿ ಇನ್ನೂ ಆರು ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲಾಗುವುದು ಎಂದು ಹೇಳಿದೆ. ಎಲ್ಲ ಆರು ಅಣು ವಿದ್ಯುತ್ ಸ್ಥಾವರಗಳು ರಷ್ಯನ್ ತಂತ್ರಜ್ಞಾನದಲ್ಲಿ ನಿರ್ಮಾಣವಾಗಲಿದ್ದು, ಅವುಗಳಿಗೆ ಉಪಕರಣಗಳನ್ನು ರೊಸ್ಯಾಟಮ್ ಪೂರೈಸಲಿದೆ.* ತಮಿಳುನಾಡಿನ ಕೂಡಂಕುಲಂ ಅಣು ಶಕ್ತಿ ಯೋಜನೆ ಭಾರತದ ಮೊದಲ ಎರಡು ಅಣು ವಿದ್ಯುತ್ ಸ್ಥಾವರಗಳಾಗಿದ್ದು, ಇವು 2 ದಶಕಗಳ ಹಿಂದೆ ಸೋವಿಯತ್ ವಿನ್ಯಾಸದ ವಿವಿಇಆರ್-1000 ರಿಯಾಕ್ಟರ್‌ಗಳನ್ನು ಒಳಗೊಂಡು ರಷ್ಯಾ-ಭಾರತ ಯೋಜನೆಯ ಭಾಗವಾಗಿ ನಿರ್ಮಾಣಗೊಂಡಿದ್ದವು.* ದ್ವಿಪಕ್ಷಿಯ ವ್ಯಾಪರ ಮತ್ತು ಆರ್ಥಿಕ ಪಾಲುದಾರಿಗೆ ಕುರಿತು ಮಾತುಕತೆ ನಡೆಸಿದ ಉಭಯ ನಾಯಕರು 2023ರಲ್ಲಿ ಗಣನೀಯ ಪ್ರಗತಿ 2025ರ 30 ಶತಕೋಟಿ ಡಾಲರ್ ಗುರಿಯನ್ನು ದುಪ್ಪಟ್ಟಾಗಿಸಿದ್ದಾರೆ.* ದೀರ್ಘಾವಧಿಯಲ್ಲಿ ಸಮತೋಲಿತ ಮತ್ತು ಸುಸ್ಥಿರ ದ್ವಿಪಕ್ಷೀಯ ವ್ಯಾಪಾರವನ್ನು ಸಾಧಿಸಲು ಕೈಗಾರಿಕಾ ಸಹಕಾರ ಬಲಪಡಿಸುವ ಮೂಲಕ ರಷ್ಯಾಕ್ಕೆ ಭಾರತೀಯ ರಫ್ತುಗಳನ್ನು ಹೆಚ್ಚಿಸುವ ಅಗತ್ಯವನ್ನು ನಾಯಕರು ಒತ್ತಿಹೇಳಿದರು. * ಸುಧಾರಿತ ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ತಾಂತ್ರಿಕ ಮತ್ತು ಹೂಡಿಕೆ ಪಾಲುದಾರಿಕೆಗಳನ್ನು ರೂಪಿಸುವುದು. ಹೊಸ ಮಾರ್ಗಗಳು ಮತ್ತು ಸಹಕಾರದ ರೂಪಗಳನ್ನು ಗುರುತಿಸುವ ಕುರಿತು ಮಾತನಾಡಿದರು.* ದ್ವಿಪಕ್ಷೀಯ ವ್ಯಾಪಾರದ ಅಭಿವೃದ್ಧಿ ಇನ್ನಷ್ಟು ಸುಸ್ಥಿರಗೊಳಿಸಲು ಮತ್ತು 2030 ರ ವೇಳೆಗೆ  ನೂರು ಶತಕೋಟಿ ಡಾಲರ್ ವ್ಯಾಪಾರದ ಗುರಿ ಇರಿಸಿಕೊಂಡರು ಎಂದು ಅಧಿಕೃತ ಮೂಲಗಳು ತಿಳಿಸಿವೆ.