* ಭಾರತ 5ಜಿ ನೆಟ್ ವರ್ಕ್ ನಲ್ಲಿ ಬ್ರಿಟನ್ ಮತ್ತು ಜಪಾನನ್ನು ಹಿಂದಿಕ್ಕುದ್ದು ಜಾಗತಿಕವಾಗಿ 10ನೇ ಸ್ಥಾನ ಗಳಿಸಿದೆ. ಸ್ಪೀಡ್ಟೆಸ್ಟ್ ಗ್ಲೋಬಲ್ ಇಂಡೆಕ್ಸ್ನ 2023ರ ಮೂರನೇ ತ್ರೖೆಮಾಸಿಕದಲ್ಲಿ ಭಾರತ ಈ ಸ್ಥಾನವನ್ನು ಗಳಿಸಿದೆ.* ಸ್ಪೀಡ್ಟೆಸ್ಟ್.ನೆಟ್ನ ಊಕ್ಲಾ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ದಕ್ಷಿಣ ಕೊರಿಯಾ 5ಜಿ ನೆಟ್ವರ್ಕ್ನಲ್ಲಿ ಟಾಪ್ ಸ್ಥಾನದಲ್ಲಿವೆ.* ವಿಶೇಷವೆಂದರೆ ಸ್ಟೀಡ್ಟೆಸ್ಟ್ ಗ್ಲೋಬಲ್ ಇಂಡೆಕ್ಸ್ನ 2022ರ ಸೆಪ್ಟೆಂಬರ್ ಮತ್ತು 2023ರ ಆಗಸ್ಟ್ ನಡುವಿನ ಅಂಕಿ-ಅಂಶದ ಪ್ರಕಾರ ಭಾರತ 5ಜಿ ನೆಟ್ವರ್ಕ್ನಲ್ಲಿ 72 ಸ್ಥಾನಗಳನ್ನು ಏರಿ ಈ ಸಾಧನೆಯನ್ನು ಮಾಡಿದೆ. ಈ ವರ್ಷದ ಮೂರನೇ ತ್ರೖೆಮಾಸಿಕದಲ್ಲಿ ಭಾರತ 5ಜಿಯಲ್ಲಿ ಸರಾಸರಿ 312.26 ಎಂಬಿಪಿಎಸ್ ಡೌನ್ಲೋಡ್ ಸ್ಪೀಡ್ ಹೊಂದುವ ಮೂಲಕ ಹತ್ತನೇ ಸ್ಥಾನ ಗಳಿಸಿ ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.* 5ಜಿಯ ಐದು ವೈಶಿಷ್ಟಗಳು1 ಬೃಹತ್ ಡೇಟಾ: ಸಾರ್ವಜನಿಕ ವಲಯ, ವ್ಯಾಪಾರದಲ್ಲಿ 4ಜಿಗಿಂತ 5ಜಿ ಹೆಚ್ಚು ಭರವಸೆ ಮೂಡಿಸಿದೆ.2 ಇಂಟರ್ನೆಟ್ ಆಫ್ ಥಿಂಗ್ಸ್: ಮನೆಯೊಳಗೆ ಮೊಬೈಲ್ ನಿಂದಲೇ ಎಸಿ, ಡೋರ್ ಲಾಕರ್ ಹಾಗೂ ವಾಷಿಂಗ್ ಮಷಿನ್‌ಗಳನ್ನು ನಿಯಂತ್ರಿಸಬಹುದು.3 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ನೀರು ಮತ್ತು ವಿದ್ಯುತ್ ಸರಬರಾಜು ಹಾಗೂ ಮೂಲಸೌಲಭ್ಯಗಳನ್ನು ಸ್ಮಾರ್ಟ್ ಮೀಟ‌ರ್, ಸೆನ್ಸರ್‌ಗಳ ಮೂಲಕ ಒದಗಿಸುತ್ತದೆ.4 ಕೃಷಿಯಲ್ಲಿ ಬಳಕೆ: ಔಷಧ ಸಿಂಪಡಣೆ, ಕ್ರಿಮಿನಾಶಕದ ಅವಶ್ಯಕತೆ, ಫಸಲು ಸಷ್ಟದ ಸಮೀಕ್ಷೆಗಳನ್ನು ಡ್ರೋಣ್ ಮೂಲಕ ಮಾಡಬಹುದು.5 ಟೆಲಿ ಮೆಡಿಷಿನ್: ವೈದ್ಯರನ್ನು ನೇರವಾಗಿ ಭೇಟಿಯಾಗಿ ಚಿಕಿತ್ಸೆ ಪಡೆಯಲು ಆಗದಿದ್ದಾಗ ವಿಡಿಯೋ ಕಾಲ್ ಮೂಲಕ ಚಿಕಿತ್ಸೆ ಪಡೆಯಬಹುದು.