Job Description: * ದೇಶದ ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರವು ತನ್ನ ಇತ್ತೀಚಿನ ವರದಿಯಲ್ಲಿ ಪ್ಯಾರಸಿಟಮಾಲ್, ಪ್ಯಾನ್ ಡಿ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಪೂರಕಗಳು ಮತ್ತು ಮಧುಮೇಹ ವಿರೋಧಿ ಮಾತ್ರೆಗಳು ಸೇರಿದಂತೆ 50 ಕ್ಕೂ ಹೆಚ್ಚು ಔಷಧಗಳ ಮಾದರಿಗಳನ್ನು "ಪ್ರಮಾಣಿತ ಗುಣಮಟ್ಟ ಇಲ್ಲ" ಎಂದು ಪಟ್ಟಿ ಮಾಡಿದೆ.* ಔಷಧಗಳ ಗುಣಮಟ್ಟಕ್ಕೆ ಸಂಬಂಧಿಸಿ ಸಿಡಿಎಸ್‌ಸಿಒ, ಪ್ರತಿ ತಿಂಗಳು ವರದಿ ಬಿಡುಗಡೆ ಮಾಡುತ್ತದೆ.* ಔಷಧಗಳ ಕುರಿತು ಆಗಸ್ಟ್ ತಿಂಗಳಿಗೆ ಸಂಬಂಧಿಸಿದ ವರದಿಯನ್ನು ಸಿಡಿಎಸ್‌ಸಿಒ ಬಿಡುಗಡೆ ಮಾಡಿದ್ದು, ಈ ಔಷಧಗಳ ಬಗ್ಗೆ ಎಚ್ಚರಿಕೆ ಅವಶ್ಯಕ ಎಂದು ಹೇಳಿದೆ.* ಕ್ಯಾಲಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆಗಳ ಮಾದರಿಗಳು ಕೂಡ ಪ್ರಮಾಣಿತ ಗುಣಮಟ್ಟ ಹೊಂದಿಲ್ಲ. ಅಲೈಮ್ ಲ್ಯಾಬರೋಟರೀಸ್ ಹಿಂದೂಸ್ತಾನ ಆ್ಯಂಟಿಬಯೋಟಿಕ್ಸ್ ಲಿಮಿಟೆಡ್, ಹೆಟರೊಲ್ಯಾಬ್ ಲಿಮಿಟೆಡ್, ಕರ್ನಾಟಕ ಆ್ಯಂಟಿಬಯೋಟಿಕ್ಸ್ ಹಾಗೂ ಫಾರ್ಮಾಸ್ಕೂಟಿಕಲ್ಸ್ ಲಿಮಿಟೆಡ್, ಪ್ರಿಯಾ ಫಾರ್ಮಾಸ್ಕೂಟಿಕಲ್ಸ್ ಲಿಮಿಟೆಡ್ ಹಾಗೂ ಸ್ಕಾಟ್-ಎಡಿಲ್ ಫಾರ್ಮಾಸಿಯಾ ಕಂಪನಿಗಳು ಉತ್ಪಾದಿಸುವ ಔಷಧಗಳ ಕುರಿತು ಈ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.* ಅಧಿಕ ರಕ್ತದೊತ್ತಡ ಚಿಕಿತ್ಸೆಗೆ ಬಳಸುವ ಟೆಲಿಸರ್ಟಾನ್ ಮತ್ತು ಆಟ್ರೊಪೈನ್ ಸಲ್ವೇಟ್, ಆ್ಯಂಟಿಬಯೋಟಿಕ್ ಮಾತ್ರೆಗಳಾದ ಅಮಾಕ್ಸಿಲಿನ್ ಮತ್ತು ಪೊಟ್ಯಾಶಿಯಂ ಕ್ಲಾವುಲನೇಟ್ ಮಾತ್ರೆಗಳು 'ಪ್ರಮಾಣಿತ ಗುಣಮಟ್ಟ' ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.