* ಪ್ರಸ್ತುತ 2025 - 26 ರ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6 .6 ರಷ್ಟು ಬೆಳೆಯಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿದೆ.ಈ ನಿರೀಕ್ಷೆ ಐಎಂಎಫ್ ಗೆ ಅಮೆರಿಕಾದ ಟ್ಯಾರಿಪ ಸಂಕಷ್ಟದ ನಡುವೆಯೂ ಭಾರತದ ಆರ್ಥಿಕತೆಯು,ದೃಢವಾಗಿ ಮುಂದುವರೆದಿದೆ ಎಂಬ ಅಂಶದಿಂದ ಪ್ರೇರಿತವಾಗಿದೆ.* ಖಾಸಗಿ ಅನುಬೋಗದಲ್ಲಿನ ಹೆಚ್ಚಳ ಮತ್ತು ಸೇವಾ ವಲಯದ ಉತ್ತಮ ಪ್ರಗತಿಯು ಮೊದಲ ಕ್ವಾಟರನಲ್ಲಿನ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.* ಹೀಗಿದ್ದರೂ,ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ 'ಅತಂತ್ಯ ವೇಗದ ಬೆಳವಣಿಗೆ' ಕಾಣುವ ಹೆಗ್ಗಳಿಕೆಯೂ ಭಾರತದ್ದೇ ಆಗಿರಲಿದೆ.* ಖಾಸಗಿ ಪಾಲುದಾರಿಕೆ,ಉತ್ಪಾದನೆಯ ವಿಸ್ತರಣೆ ಹಾಗೂ ಸೇವೆ,ಆರೋಗ್ಯಕರ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯಿಂದ ಈ ಬೆಳೆವಣಿಗೆ ಸಾಧ್ಯವಾಗಲಿದೆ.* ಹೆಚ್ಚುತ್ತಿರುವ ಜಾಗತಿಕ ವ್ಯಾಪಾರ ಘರ್ಷಣೆಗಳು ಹಾಗೂ ಭ್ಯಾಹ ಸುಂಕಗಳ ಹೊರತಾಗಿಯೂ ಭಾರತದ ಆರ್ಥಿಕತೆ ಮುಂಚೂಣಿಯಲ್ಲಿ ಇರಲಿದೆ.* ಭವಿಷ್ಯದಲ್ಲಿ ಎದುರಾಗುವ ವ್ಯಾಪಾರ ಉದ್ವಿಗ್ನತೆಗಳು,ದುರ್ಬಲ ಜಾಗತಿಕ ಬೇಡಿಕೆಗಳು ಬಂಡವಾಳ ಹರಿವಿಗೆ ಅಡಚಣೆಗಳಾಗಬಹುದು.ಇತರೆ ಬೃಹತ ಆರ್ಥಿಕತೆಗಳು ನಿಧಾನವಾಗಿ ಚೇತರಿಸಿಕೊಳ್ಳಬಹುದುಎಂದು ವರದಿ ತಿಳಿಸಿದೆ.* ಭಾರತವು ಇನ್ನೊಂದು ವರ್ಷದವರೆಗೆ ಇದೇ ರೀತಿ ಇದ್ದರೆ ವೇಗವಾಗಿ ಬೆಳೆಯುತ್ತಿರುವ  ಬೃಹತ ಆರ್ಥಿಕತೆಯಾಗಲಿದೆ.* ಈ ಬೆಳವಣಿಗೆಯು ಜಾಗತಿಕ ಪ್ರವೃತ್ತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ವರದಿ ಹೇಳಿದೆ.* ಈ ಆರ್ಥಿಕ ಬೆಳವಣಿಗೆ ನಿರೀಕ್ಷೆಯನ್ನು ಐಎಂಎಫ್ ವರದಿ ಅಂದಾಜಿನಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.