* ವಿಶ್ವ ಆರ್ಥಿಕ ವೇದಿಕೆ (WEF) ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ರಲ್ಲಿ ಭಾರತವು 119 ದೇಶಗಳಲ್ಲಿ 39 ನೇ  ಸ್ಥಾನದಲ್ಲಿದೆ. * ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ನಂ.1 ಸ್ಥಾನದಲ್ಲಿದ್ದರೆ, ಭಾರತವು ದಕ್ಷಿಣ ಏಷ್ಯಾದಲ್ಲಿ ಅಗ್ರ ಶ್ರೇಯಾಂಕದ ದೇಶವಾಗಿದೆ.* ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವು ವಿಶ್ವ ಆರ್ಥಿಕ ವೇದಿಕೆ (WEF) ಬಿಡುಗಡೆ ಮಾಡಿದ ದ್ವೈವಾರ್ಷಿಕ ವರದಿಯಾಗಿದೆ . ಮೊದಲ ಸೂಚ್ಯಂಕವನ್ನು 2022 ರಲ್ಲಿ ಬಿಡುಗಡೆ ಮಾಡಲಾಯಿತು.* 2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವನ್ನು ಇಂಗ್ಲೆಂಡ್‌ನ ಸರ್ರೆ ವಿಶ್ವವಿದ್ಯಾಲಯದ  ಸಹಯೋಗದೊಂದಿಗೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ.* 2021 ರಲ್ಲಿ ಪ್ರಕಟವಾದ ಸೂಚ್ಯಂಕದಲ್ಲಿ ಪ್ರಕಾರ ಭಾರತವು 54 ನೇ ಸ್ಥಾನದಲ್ಲಿತ್ತು. ಕೇವಲ ಮೂರು ವರ್ಷಗಳಲ್ಲಿ 15 ಸ್ಥಾನಗಳಲ್ಲಿ ಭಾರತದ ಪ್ರವಾಸೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಪ್ರದರ್ಶಿಸುತ್ತದೆ.* ಭಾರತವು ನೈಸರ್ಗಿಕ ಸಂಪನ್ಮೂಲಗಳಲ್ಲಿ 6 ನೇ ಸ್ಥಾನದಲ್ಲಿದೆ, ಸಾಂಸ್ಕೃತಿಕ ಸಂಪನ್ಮೂಲಗಳಲ್ಲಿ 9 ನೇ ಸ್ಥಾನದಲ್ಲಿದೆ ಮತ್ತು ವಿರಾಮೇತರ ಸಂಪನ್ಮೂಲಗಳಲ್ಲಿ 9 ನೇ ಸ್ಥಾನದಲ್ಲಿದೆ. * 2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ವಿಶ್ವದ ಶ್ರೇಯಾಂಕದ ದೇಶಗಳು : 1. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ -   ಸ್ಕೋರ್ 5.242. ಸ್ಪೇನ್ - ಸ್ಕೋರ್ 5.183. ಜಪಾನ್ - ಸ್ಕೋರ್ 5.094. ಫ್ರಾನ್ಸ್ - ಸ್ಕೋರ್ 5.075. ಆಸ್ಟ್ರೇಲಿಯಾ - ಸ್ಕೋರ್ 5.00 6. ಜರ್ಮನಿ - 5.007. ಯುನೈಟೆಡ್ ಕಿಂಗ್ಡಮ್ - 4.968. ಚೀನಾ - 4.949. ಇಟಲಿ - 4.9010. ಸ್ವಿಟ್ಜರ್ಲ್ಯಾಂಡ್ - 4.8139. ಇಂಡಿಯಾ - 4.25