* 2023 ರಲ್ಲಿ ಭಾರತವು ವಿಶ್ವಾದ್ಯಂತ ಕೃಷಿ ಉತ್ಪನ್ನಗಳ ಎಂಟನೇ ಅತಿದೊಡ್ಡ ರಫ್ತುದಾರನಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. * ಭಾರತದ ಕೃಷಿ ರಫ್ತು 2022 ರಲ್ಲಿ $ 55 ಶತಕೋಟಿಯಿಂದ $ 51 ಶತಕೋಟಿಗೆ ಇಳಿದಿದೆ. ಈ ಕುಸಿತವು ಅನೇಕ ಇತರ ಪ್ರಮುಖ ದೇಶಗಳು ತಮ್ಮ ಕೃಷಿ ರಫ್ತುಗಳಲ್ಲಿ ಇಳಿಕೆಯನ್ನು ಕಂಡ ಸಮಯದಲ್ಲಿ ಸಂಭವಿಸಿದೆ.* "ಕೃಷಿ ಉತ್ಪನ್ನಗಳ ಪ್ರಮುಖ ರಫ್ತುದಾರರಲ್ಲಿ ಬ್ರೆಜಿಲ್, ಯುರೋಪಿಯನ್ ಯೂನಿಯನ್ ಮತ್ತು ಥೈಲ್ಯಾಂಡ್ 2023 ರಲ್ಲಿ ರಫ್ತುಗಳನ್ನು ಕ್ರಮವಾಗಿ ಶೇಕಡಾ 6, 5 ಮತ್ತು 0.2 ರಷ್ಟು ಹೆಚ್ಚಿಸಿವೆ. * ಭಾರತವು ಮೇ 2022 ರಲ್ಲಿ ಗೋಧಿ ರಫ್ತು, ಜುಲೈ 2023 ರಲ್ಲಿ ಬಾಸ್ಮತಿ ಅಲ್ಲದ ಅಕ್ಕಿ ಮತ್ತು ಅಕ್ಟೋಬರ್ 2023 ರಿಂದ ಸಕ್ಕರೆಯ ಮೇಲೆ ನಿಷೇಧ ಹೇರಿತ್ತು.* ಅಗ್ರ ಹತ್ತು ಕೃಷಿ ರಫ್ತುದಾರರಲ್ಲಿ ಕೆನಡಾ, ಮೆಕ್ಸಿಕೋ, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿವೆ.* ಬ್ರೆಜಿಲ್‌ನ ಕೃಷಿ ರಫ್ತು 2022 ರಲ್ಲಿ $148 ಶತಕೋಟಿಯಿಂದ 2023 ರಲ್ಲಿ $157 ಶತಕೋಟಿಗೆ ಏರಿತು ಮತ್ತು ಅದು ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.