Loading..!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಯಂಗ್ ಪ್ರೊಫೆಶನಲ್ಸ್ (Young Professionals) ಹುದ್ದೆಗಳ ನೇಮಕಾತಿ
Published by: Basavaraj Halli | Date:8 ಫೆಬ್ರುವರಿ 2020
not found
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ Young Professionals ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೇಮಕಾತಿ ಷರತ್ತುಗಳು:
1. ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ಯಾವುದೇ ಭಾಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
2. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಚೆನ್ನಾಗಿ ತಿಳಿದಿರಬೇಕು.
3. ಉತ್ತಮ ಶೈಕ್ಷಣಿಕ ಹಿನ್ನಲೆ ಹೊಂದಿರಬೇಕು ಮತ್ತು ತಂಡವಾಗಿ ಕಾರ್ಯನಿರ್ವಹಿಸಲು ಸಾಮಥ್ರ್ಯ ಹೊಂದಿರಬೇಕು.
4. ಗರಿಷ್ಠ ಗುತ್ತಿಗೆ ಅವಧಿಯು ಮೂರು ವರ್ಷಗಳು. ಗುತ್ತಿಗೆಯು ಪ್ರಾರಂಭದಲ್ಲಿ ಎರಡು ವರ್ಷಗಳು ಆಗಿರುತ್ತದೆ. ಕಾರ್ಯನಿರ್ವಹಣೆ ಮತ್ತು ಅಗತ್ಯತೆಯನ್ನು ಆಧರಿಸಿ ಗರಿಷ್ಠ ಒಂದು ವರ್ಷದ ಅವಧಿಗೆ ವಿಸ್ತರಿಸಬಹುದಾಗಿದೆ.

ನೇಮಕಾತಿ ವಿಧಾನ:
1. ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
2. ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ 1:10 ಅನುಪಾತದಲ್ಲಿ ಲಿಖಿತ ಪರೀಕ್ಷೆಗಾಗಿ ShortList ಮಾಡಲಾಗುವುದು.
3. ಲಿಖಿತ ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳನ್ನು ಆಯುಕ್ತರು, ಗ್ರಾಮೀಣಾಭಿವೃದ್ಧಿ ರವರ ನೇತೃತ್ವದ ಸಮಿತಿಯು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಲಾಗುವುದು.
No. of posts:  7
Application Start Date:  8 ಫೆಬ್ರುವರಿ 2020
Application End Date:  20 ಫೆಬ್ರುವರಿ 2020
Work Location:  ಕರ್ನಾಟಕ
Pay Scale: ಸಂಭಾವನೆ :
ಆಯ್ಕೆಯಾದ ಮಾಸಿಕ Young Professionals ಗಳಿಗೆ ಮಾಸಿಕ ರೂ.50,000/-ಗಳ ಸಂಭಾವನೆ ನೀಡಲಾಗುವುದು.

* ಅರ್ಜಿ ಸಲ್ಲಿಸಲು ಕಡೆಯ ದಿನಾಂಕ:20-02-2020 ನಿಗದಿಪಡಿಸಿದ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
* ಅರ್ಜಿಗಳನ್ನು ಆನ್‍ಲೈನ್ ಮೂಲಕ ಮಾತ್ರವೇ ಸಲ್ಲಿಸತಕ್ಕದ್ದು ಮತ್ತು ಆಯುಕ್ತಾಲಯದಲ್ಲಿ ಯಾವುದೇ ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗುವುದಿಲ್ಲ.
* ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು(ಆಡಳಿತ), ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ (ದೂರವಾಣಿ ಸಂಖ್ಯೆ:080-22342163)ರವರನ್ನು ಸಂಪರ್ಕಿಸಬಹುದಾಗಿದೆ.
to download official notification Young Professionals Recruitment 2020
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments