Loading..!

ವಿದ್ಯುತ್ ಹಾಗೂ ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ l ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:25 ಜೂನ್ 2025
not found

ವಾಟರ್ ಅಂಡ್ ಪವರ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್‌ (WAPCOS) ಸಂಸ್ಥೆ 2025ರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 19 ಎಕ್ಸ್‌ಪರ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇವು ಅಖಿಲ ಭಾರತೀಯ ಮಟ್ಟದಲ್ಲಿ ನಿಗದಿಯಾಗಿರುವ ಹುದ್ದೆಗಳಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಇಮೇಲ್ ಮೂಲಕ 2025ರ ಜುಲೈ 8ರೊಳಗೆ ಕಳುಹಿಸಬೇಕು.


ನೇಮಕಾತಿ ಸಂಸ್ಥೆ :ವಾಟರ್ ಅಂಡ್ ಪವರ್ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್‌ (WAPCOS)
ಒಟ್ಟು ಹುದ್ದೆಗಳ ಸಂಖ್ಯೆ : 19
ಹುದ್ದೆ ಹೆಸರು : ಎಕ್ಸ್‌ಪರ್ಟ್ಸ್ (Experts)
ಉದ್ಯೋಗ ಸ್ಥಳ : ಅಖಿಲ ಭಾರತ
ವೇತನ : ಸಂಸ್ಥೆಯ ನಿಯಮಾನುಸಾರ


ಹುದ್ದೆಗಳ ವಿಭಾಗವಾರು ವಿವರ :
ವಾಟರ್ ರಿಸೋರ್ಸ್ ಎಕ್ಸ್‌ಪರ್ಟ್‌ಗಳು   : 5               
ಟೀಮ್ ಲೀಡರ್ ಮತ್ತು IEC ಎಕ್ಸ್‌ಪರ್ಟ್‌ : 1               
ಮಾಥಮೆಟಿಕಲ್ ಮಾದೆಲರ್      : 1               
ಗುಣಮಟ್ಟ ಪರಿಶೀಲನಾ ತಜ್ಞರು : 2               
ಐಟಿ ಎಕ್ಸ್‌ಪರ್ಟ್‌ಗಳು     : 2               
ಡಾಕ್ಯುಮೆಂಟೇಶನ್ ಮತ್ತು ನಾಲೆಜ್ ಮ್ಯಾನೇಜ್‌ಮೆಂಟ್ ಎಕ್ಸ್‌ಪರ್ಟ್ : 1               
ಎಂಐಎಸ್ ಎಕ್ಸ್‌ಪರ್ಟ್     : 1               
ಡ್ರಾಫ್ಟ್ಸ್‌ಮನ್     : 4               
ಡಿಸೈನ್ ಮತ್ತು ಮಲ್ಟಿಮೀಡಿಯಾ ಎಕ್ಸ್‌ಪರ್ಟ್  : 1               
ಡೇಟಾ ಮ್ಯಾನೇಜ್‌ಮೆಂಟ್ ಮತ್ತು ಜಿಐಎಸ್ ಎಕ್ಸ್‌ಪರ್ಟ್  : 1               


ಶೈಕ್ಷಣಿಕ ಅರ್ಹತೆ :
ಹುದ್ದೆಗನುಸಾರ ವಿದ್ಯಾರ್ಹತೆಗಳಾದ ಪದವಿ, ಸ್ನಾತಕೋತ್ತರ ಪದವಿ, ITI, ಡಿಪ್ಲೊಮಾ, BE/B.Tech, MCA, MBA ಇತ್ಯಾದಿಗಳನ್ನು ಹೊಂದಿರಬೇಕು. ವಿವರವಾದ ಅರ್ಹತೆಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.


ವಯೋಮಿತಿ :
* ಸಂಸ್ಥೆಯ ನಿಯಮಾನುಸಾರ ನಿಗದಿಯಲ್ಲಿದೆ.
* ಅನುಭವ ಮತ್ತು ಅರ್ಹತೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.


ಆಯ್ಕೆ ವಿಧಾನ :
1. ಶೈಕ್ಷಣಿಕ ಅರ್ಹತೆ
2. ಅನುಭವ
3. ವೈಯಕ್ತಿಕ ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಫಾರ್ಮ್ ಮತ್ತು ಅಗತ್ಯ ದಾಖಲೆಗಳನ್ನು prescribed format ನಲ್ಲಿ ತಯಾರಿಸಿ, ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು:


📧 Email: [wapcoskolkatacv@gmail.com](mailto:wapcoskolkatacv@gmail.com)
📅 ಅರ್ಜಿ ಕಳುಹಿಸಲು ಕೊನೆಯ ದಿನಾಂಕ : 08-ಜುಲೈ-2025
📢 ಅಧಿಸೂಚನೆ ಬಿಡುಗಡೆಯ ದಿನಾಂಕ : 09-ಮೇ-2025


ಸರ್ಕಾರಿ ಮಟ್ಟದ ತಂತ್ರಜ್ಞರು, ತಜ್ಞರು, IT, ಡ್ರಾಫ್ಟಿಂಗ್, ಡೇಟಾ ವಿಶ್ಲೇಷಣೆ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತರು ಈ ನೇಮಕಾತಿ ಮೂಲಕ ಉತ್ತಮ ಉದ್ಯೋಗಾವಕಾಶ ಪಡೆದುಕೊಳ್ಳಬಹುದು.


ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯನ್ನು ಭೇಟಿ ನೀಡಿ.

Application End Date:  8 ಜುಲೈ 2025
To Download Official Notification

Comments