ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ವಿಜಯಪುರ ಇಲ್ಲಿ ಖಾಲಿ ಇರುವ 71 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ವಿಜಯಪುರ ಇಲ್ಲಿ ಖಾಲಿ ಇರುವ 71 ಹಿರಿಯ ವ್ಯವಸ್ಥಾಪಕ,ಕಿರಿಯ ವ್ಯವಸ್ಥಾಪಕ, ಕ್ಷೇತ್ರಾಧಿಕಾರಿ, ಪ್ರಥಮ ದರ್ಜೆ ಸಹಾಯಕ, ಸೇರಿದಂತ್ತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 05/03/2022 ಸಂಜೆ 5:00 ರೊಳಗೆ ಅರ್ಜಿಯನ್ನು ಕಚೇರಿಗೆ ಸಲ್ಲಿಸಬಹುದು.
ಕಚೇರಿಯ ವಿಳಾಸ:
ಸಂಚಾಲಕ ಸದಸ್ಯರು,
ಸಿಬ್ಬಂದಿ ನೇಮಕಾತಿ ಸಮಿತಿ ಹಾಗು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಗಮ,
ಸೋಲಾಪುರ ರಸ್ತೆ,ವಿಜಯಪುರ.
ಹುದ್ದೆಗಳ ವಿವರ :71
ಹಿರಿಯ ವ್ಯವಸ್ಥಾಪಕ: 3
ಕಿರಿಯ ವ್ಯವಸ್ಥಾಪಕ : 5
ಕಂಪ್ಯೂಟರ್ ಇಂಜಿನಿಯರ್ : 1
ಕ್ಷೇತ್ರಾಧಿಕಾರಿ : 14
ಕೃಷಿ ಅಭಿವೃದ್ಧಿಅಧಿಕಾರಿ : 1
ಪ್ರಥಮ ದರ್ಜೆ ಸಹಾಯಕ : 20
ಜವಾನ : 21
ಸೆಕ್ಯೂರಿಟಿ ಗಾರ್ಡ್ : 2
ಹೈದರಾಬಾದ ಕರ್ನಾಟಕ
ಕ್ಷೇತ್ರಾಧಿಕಾರಿ : 1
ಪ್ರಥಮ ದರ್ಜೆ ಸಹಾಯಕ : 1
ಜವಾನ : 2
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಅಂಗೀಕೃತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಕನಿಷ್ಠ ಶೇ.60ರಷ್ಟು ಅಂಕ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
* ಹಿರಿಯ ವ್ಯವಸ್ಥಾಪಕ,ಕಿರಿಯ ವ್ಯವಸ್ಥಾಪಕ, ಕ್ಷೇತ್ರಾಧಿಕಾರಿ, ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ : ಪದವಿ ವಿದ್ಯಾರ್ಹತೆ
* ಕಂಪ್ಯೂಟರ್ ಇಂಜಿನಿಯರ್ ಹುದ್ದೆಗೆ : ಬಿ.ಇ/ಎಮ್.ಸಿ.ಎ ವಿದ್ಯಾರ್ಹತೆ
* ಕೃಷಿ ಅಭಿವೃದ್ಧಿಅಧಿಕಾರಿ ಹುದ್ದೆಗೆ : ಬಿ.ಎಸ್ಸಿ ವಿದ್ಯಾರ್ಹತೆ
* ಜವಾನ ಮತ್ತು ಸೆಕ್ಯೂರಿಟಿ ಹುದ್ದೆಗಳಿಗೆ : SSLC ವಿದ್ಯಾರ್ಹತೆ ಹೊಂದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗಿನಂತೆ ಅರ್ಜಿ ಶುಲ್ಕ ಪಾವತಿಸಬೇಕು.
* ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 500/-
* ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 250/-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಆರಂಭಗೊಂಡು ಗರಿಷ್ಠ 35 ವರ್ಷಗಳವರೆಗೂ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
SC/ST ಅಭ್ಯರ್ಥಿಗಳಿಗೆ :5 ವರ್ಷ
OBC ಅಭ್ಯರ್ಥಿಗಳಿಗೆ : 3 ವರ್ಷ
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,500/- ರಿಂದ 88,300/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.
- ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.





Comments