ಕೇಂದ್ರ ಲೋಕಸೇವಾ ಆಯೋಗ (UPSC) ದಿಂದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:5 ಜನವರಿ 2021

ಕೇಂದ್ರ ಲೋಕಸೇವಾ ಆಯೋಗ (UPSC) ಭಾರತದ ಸರ್ಕಾರದ ಪ್ರಮುಖ ನೇಮಕಾತಿಯ ಸಂಸ್ಥೆಯಾಗಿದ್ದು, ಪ್ರಸ್ತುತ ಖಾಲಿ ಇರುವ 400 ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 19 2021 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
* ಹುದ್ದೆಗಳ ವಿವರ :
- ರಾಷ್ಟ್ರೀಯ ರಕ್ಷಣಾ ಅಕಾಡೆಮಿ - 370 ಹುದ್ದೆಗಳು
- ನೇವಲ್ ಅಕಾಡೆಮಿ (10+2) - 30 ಹುದ್ದೆಗಳು
* ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-01-2021
- ಶುಲ್ಕ ಪಾವತಿಗೆ ಕೊನೆಯ ದಿನಾಂಕ : 19-01-2021
- ಆನ್‌ಲೈನ್ ಅರ್ಜಿಯನ್ನು ಹಿಂತೆಗೆದುಕೊಳ್ಳುವ ದಿನಾಂಕ: 27-01-2021 ರಿಂದ 02-02-2021
- ಪರೀಕ್ಷೆಯ ದಿನಾಂಕ: 18-04-2021
- ಪರೀಕ್ಷೆಯ ಫಲಿತಾಂಶ ಘೋಷಣೆ : ಜೂನ್ 2021
- ಸಂದರ್ಶನದ ದಿನಾಂಕ: ಜುಲೈ, 2021 ರಿಂದ ಸೆಪ್ಟೆಂಬರ್, 2021
No. of posts: 400
Application End Date: 19 ಜನವರಿ 2021
Last Date for Payment: 19 ಜನವರಿ 2021
Work Location: Across India
Selection Procedure: - ಹುದ್ದೆಗೆ ಅಭ್ಯರ್ಥಿಗಳನ್ನು ವಿವಿಧ ಹಂತದ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.
Qualification: ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ / ಮಂಡಳಿಯಿಂದ ಪಿಯುಸಿ (10+2) ವಿದ್ಯಾರ್ಹತೆಯನ್ನು ಹೊಂದಿರಬೇಕು, ನವಲ್ ಅಕಾಡೆಮಿ ಹುದ್ದೆಗಳಿಗೆ ಅಭ್ಯರ್ಥಿಗಳು PUC ಯಲ್ಲಿ Physics, Chemistry & Mathematics ವಿಷಯಗಳನ್ನು ಅಭ್ಯಸಿಸಿರಬೇಕು.
Fee:
- ಎಲ್ಲ ಅಭ್ಯರ್ಥಿಗಳು 100/- ರೂ.ಗಳ ಅರ್ಜಿ ಶುಲ್ಕವನ್ನು ತುಂಬಬೇಕು ಮತ್ತು ಪ,ಜಾ/ ಪ,ಪಂ ದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
Age Limit: ದಿನಾಂಕ 02-07-2002 ರಿಂದ 01-07-2005 ರೊಳಗೆ ಜನಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
Pay Scale: ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 56,100/- ದಿಂದ 2,25,000/- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.





Comments