UAS ಧಾರವಾಡ ನೇಮಕಾತಿ: ಕೃಷಿ ವಿವಿಯಲ್ಲಿ ಕೆಲಸ ಬೇಕೇ? ತಿಂಗಳಿಗೆ ₹30,000 ಸಂಬಳ! ಪರೀಕ್ಷೆ ಇಲ್ಲ, ನೇರ ಸಂದರ್ಶನ!

ಧಾರವಾಡ: ಕೃಷಿ ಕ್ಷೇತ್ರದಲ್ಲಿ ಪದವಿ ಪಡೆದು ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಧಾರವಾಡದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯವು (UAS Dharwad) ಗುತ್ತಿಗೆ ಆಧಾರದ ಮೇಲೆ "ಯಂಗ್ ಪ್ರೊಫೆಷನಲ್-I" ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.
ಈ ನೇಮಕಾತಿ ಅಡಿಯಲ್ಲಿ 2 "ಯಂಗ್ ಪ್ರೊಫೆಷನಲ್-I" ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (UAS) ಧಾರವಾಡದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಬಹುದಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 04-ಜ02-2026 ರಂದು ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಸಂದರ್ಶನಕ್ಕೆ ಹಾಜರಾಗುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿರುತ್ತದೆ. ಧಾರವಾಡ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಸಂಬಂಧಿಸಿದ ವೇತನ, ವಿದ್ಯಾರ್ಹತೆ ಮತ್ತು ಸಂದರ್ಶನದ ಸಂಪೂರ್ಣ ಮಾಹಿತಿ ಇಲ್ಲಿದೆ.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
✅ ಹುದ್ದೆಯ ಸಂಕ್ಷಿಪ್ತ ವಿವರ (Job Overview)
ಸಂಸ್ಥೆಯ ಹೆಸರು: ಕೃಷಿ ವಿಶ್ವವಿದ್ಯಾಲಯ, ಧಾರವಾಡ (UAS Dharwad)
ಹುದ್ದೆಯ ಹೆಸರು: ಯಂಗ್ ಪ್ರೊಫೆಷನಲ್ - I (Young Professional-I)
ಒಟ್ಟು ಹುದ್ದೆಗಳು: 02
ಕೆಲಸದ ಸ್ಥಳ: ಕೃಷಿ ವಿವಿ, ಧಾರವಾಡ
ವೇತನ: ಮಾಸಿಕ ₹30,000/- (ಏಕೀಕೃತ ವೇತನ)
🎓ಶೈಕ್ಷಣಿಕ ಅರ್ಹತೆ (Educational Qualification) :
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಕಂಡ ವಿಷಯಗಳಲ್ಲಿ B.Sc ಪದವಿ ಪಡೆದಿರಬೇಕು:
ಬಿ.ಎಸ್ಸಿ ಕೃಷಿ (Agriculture)
ತೋಟಗಾರಿಕೆ (Horticulture)
ಪಶುಸಂಗೋಪನೆ (Animal Husbandry)
ಮೀನುಗಾರಿಕೆ (Fishery)
ಗೃಹ ವಿಜ್ಞಾನ / ಸಮುದಾಯ ವಿಜ್ಞಾನ (Home Science/Community Science)
ಆದ್ಯತೆ: ಎಂ.ಎಸ್. ಆಫೀಸ್ (MS Office) ಬಳಕೆ, ಡೇಟಾ ಎಂಟ್ರಿ ಮತ್ತು ಸಮೀಕ್ಷೆ ಕಾರ್ಯದಲ್ಲಿ 2 ವರ್ಷಗಳ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.
🎂 ವಯೋಮಿತಿ (Age Limit)
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 45 ವರ್ಷ ಮೀರಬಾರದು (ನಿಯಮಾನುಸಾರ ಸಡಿಲಿಕೆ ಇರುತ್ತದೆ).
💰 ವೇತನ ಶ್ರೇಣಿ (Salary Details) :ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ₹ 30,000/- ವೇತನ ನೀಡಲಾಗುತ್ತದೆ.
📅 ಸಂದರ್ಶನ ಯಾವಾಗ? ಎಲ್ಲಿ? (Interview Details)
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ನೇರ ಸಂದರ್ಶನ (Walk-in-Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
ದಿನಾಂಕ: 04 ಫೆಬ್ರವರಿ 2026 (ಬುಧವಾರ)
ಸಮಯ: ಬೆಳಿಗ್ಗೆ 09:30 ಕ್ಕೆ ಹಾಜರಿರಬೇಕು (ಸಂದರ್ಶನ 10:00ಕ್ಕೆ ಆರಂಭ)
ಸ್ಥಳ: ಸಹ ಸಂಶೋಧನಾ ನಿರ್ದೇಶಕರ ಕೊಠಡಿ (Associate Director of Research HQ), ಕೃಷಿ ವಿಶ್ವವಿದ್ಯಾಲಯ, ಧಾರವಾಡ - 580005
📝 ಅರ್ಜಿ ಸಲ್ಲಿಸುವುದು ಹೇಗೆ? (How to Apply):
- ಅಭ್ಯರ್ಥಿಗಳು ಮುಂಚಿತವಾಗಿ ಅರ್ಜಿಯನ್ನು ಕಳುಹಿಸುವಂತಿಲ್ಲ.
- ನಿಗದಿತ ನಮೂನೆಯಲ್ಲಿ (ಅಧಿಸೂಚನೆಯಲ್ಲಿ ನೀಡಲಾದ ಪ್ರೊಫಾರ್ಮಾ ಪ್ರಕಾರ) ಅರ್ಜಿಯನ್ನು ಭರ್ತಿ ಮಾಡಿ.
- ಬಯೋಡೇಟಾ ಮತ್ತು ಅಗತ್ಯ ದಾಖಲೆಗಳ ನಕಲು ಪ್ರತಿಗಳ (2 ಸೆಟ್) ಜೊತೆಗೆ ಮೂಲ ದಾಖಲೆಗಳನ್ನು (Original Documents) ತೆಗೆದುಕೊಂಡು ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು.
📅 ಪ್ರಮಖ ದಿನಾಂಕಗಳು :
ಅಧಿಸೂಚನೆ ಹೊರಬಂದ ದಿನ: 21-01-2026
ಸಂದರ್ಶನ ದಿನಾಂಕ: 04-02-2026
📌 ಪ್ರಮುಖ ಸೂಚನೆಗಳು:
* ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, 31-03-2026 ರವರೆಗೆ ಅಥವಾ ಯೋಜನೆ ಮುಗಿಯುವವರೆಗೆ ಇರುತ್ತದೆ.
* ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ (TA/DA) ನೀಡಲಾಗುವುದಿಲ್ಲ.
* ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ಸುರೇಖಾ ಸಂಕನಗೌಡರ್ (ಮೊಬೈಲ್: 9986429861).
💡 ಗಮನಿಸಿ :ಕೃಷಿ ಪದವೀಧರರಿಗೆ ಇದೊಂದು ಉತ್ತಮ ಅವಕಾಶ. ನಿಮ್ಮ ಸ್ನೇಹಿತರಿಗೂ ಈ ವಿಷಯವನ್ನು ಶೇರ್ ಮಾಡಿ!
📢 KPSC Vaani ವಿಶೇಷ : ಇಂತಹ ಇತ್ತೀಚಿನ ಸರ್ಕಾರಿ ಉದ್ಯೋಗ ಸುದ್ದಿಗಳು, ಅಧಿಸೂಚನೆ ವಿಶ್ಲೇಷಣೆ, ಮತ್ತು ಪರೀಕ್ಷಾ ಮಾರ್ಗದರ್ಶನಕ್ಕಾಗಿ KPSC Vaaniಯನ್ನು ನಿರಂತರವಾಗಿ ಅನುಸರಿಸಿ.





Comments