Loading..!

ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ 2019-20 ನೇ ಸಾಲಿಗೆ 2 ವರ್ಷದ ಡಿಪ್ಲೋಮಾ (ಕೃಷಿ) ಹಾಗೂ ಡಿಪ್ಲೋಮಾ (ಅರಣ್ಯ) ಕೋರ್ಸುಗಳಿಗೆ ಪ್ರವೇಶ ಕುರಿತು.
| Date:15 ಜೂನ್ 2019
not found
ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ 2019-20 ನೇ ಸಾಲಿಗೆ 2 ವರ್ಷದ ಡಿಪ್ಲೋಮಾ (ಕೃಷಿ) ಹಾಗೂ ಡಿಪ್ಲೋಮಾ (ಅರಣ್ಯ) ಕೋರ್ಸುಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2 ವರ್ಷದ ಡಿಪ್ಲೋಮಾ ಕಾರ್ಯಕ್ರಮ :
ಡಿಪ್ಲೋಮಾ ಡಿಪ್ಲೋಮಾ ಡಿಪ್ಲೋಮಾ(ಕೃಷಿ) : ಧಾರವಾಡ (ಧಾರವಾಡ ಜಿಲ್ಲೆ), ವಿಜಯಪುರ (ವಿಜಯಪುರ ಜಿಲ್ಲೆ), ಕುಮಟಾ (ಉತ್ತರ ಕನ್ನಡ ಜಿಲ್ಲೆ), ಜಮಖಂಡಿ (ಬಾಗಲಕೋಟಿ ಜಿಲ್ಲೆ), ನಿಪ್ಪಾಣಿ (ಬೆಳಗಾವಿ ಜಿಲ್ಲೆ), ಹನುಮನಮಟ್ಟಿ (ಹಾವೇರಿ ಜಿಲ್ಲೆ) ಹಾಗೂ ಕೊಣ್ಣೂರು (ಗದಗಜಿಲ್ಲೆ)
ಡಿಪ್ಲೋಮಾ ಡಿಪ್ಲೋಮಾ(ಅರಣ್ಯ) : ಮಳಗಿ (ಉತ್ತರ ಕನ್ನಡ ಜಿಲ್ಲೆ)

ಡಿಪ್ಲೋಮಾ (ಕೃಷಿ/ಅರಣ್ಯ) ಪ್ರವೇಶ ವೇಳಾಪಟ್ಟಿ :
1. ಪ್ರವೇಶಾತಿಗೆ ಅದಿಸೂಚನೆ ಪ್ರಕಟಣೆ 31.05.2019
2. ಅರ್ಜಿ ನಮೂನೆ ಮತ್ತು ವಿವರಣಾ ಪತ್ರಿಕೆಯನ್ನು ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವೈಬ್‍ಸೈಟ್ ಮುಖಾಂತರ ಪಡೆಯುವ ದಿನಾಂಕ 04.06.2019
3. ಅರ್ಜಿ ಪಡೆಯಲು ಕೊನೆಯ ದಿನಾಂಕ 26.06.2019
4. ಭರ್ತಿಮಾಡಿದ ಅರ್ಜಿಗಳನ್ನು ಕುಲಸಚಿವರ ಕಾರ್ಯಾಲಯಕ್ಕೆ ಸಲ್ಲಿಸುವ ಕೊನೆಯ ದಿನಾಂಕ 26.06.2019
5. ವಿಶೇಷ ವರ್ಗಗಳ ಅಭ್ಯರ್ಥಿಗಳ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಗಾಗಿ ಈ ಕೆಳಕಾಣಿಸಿದ ಅಭ್ಯರ್ಥಿಗಳು ಸಂಬಂಧಪಟ್ಟ ದಿನಾಂಕಗಳಂದು ಕುಲಸಚಿವರ ಕಾರ್ಯಾಲಯ, ಕೃವಿವಿ, ಧಾರವಾಡ ಇವರಲ್ಲಿ ಕಛೇರಿಯ ಸಮಯದಲ್ಲಿ ಪ್ರಮಾಣಪತ್ರಗಳನ್ನು ಪರಿಶೀಲನೆ ಮಾಡಿಸಬೇಕು.
(ಎ). ಎನ್.ಸಿ.ಸಿ/ ಕ್ರೀಡೆ/ ಸ್ಕೌಟ್ಸ್ & ಗೈಡ್ಸ್/ ಅಂಗ ವಿಕಲರು/ ಆಂಗ್ಲೊ ಇಂಡಿಯನ್ 02.07.2019
(ಬಿ). ಡಿಫೆನ್ಸ್/ ಮಾಜಿ ಸೈನಿಕ/ ಕೇಂದ್ರೀಯ ಸಶಸ್ತ್ರ ಪೋಲೀಸ್ ದಳ 03.07.2019
6. ಅರ್ಹತಾ ಪಟ್ಟಿ ಪ್ರಕಟಣೆ ಕೌನ್ಸ್‍ಲಿಂಗ್ ವೇಳಾ ಪಟ್ಟಿ 05.07.2019
7. 2019-20 ರ ಮೊದಲನೇ ಸೆಮಿಸ್ಟರ್ ಪ್ರಾರಂಭವಾಗುವ ದಿನಾಂಕ 19.08.2019
No. of posts:  225
Application Start Date:  4 ಜೂನ್ 2019
Application End Date:  26 ಜೂನ್ 2019
Selection Procedure: ಡಿಪ್ಲೋಮಾ (ಕೃಷಿ/ಅರಣ್ಯ) ಕೋರ್ಸ್‍ಗೆ ಪ್ರವೇಶವನ್ನು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇರೆಗೆ ಸರಕಾರದ ಮೀಸಲಾತಿ ಆದೇಶದಂತೆ ಕೌನ್ಸಿಲಿಂಗ್ ಮೂಲಕ ಮೆರಿಟ್ ಆಧರಿಸಿ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದು
Qualification: ವಿದ್ಯಾರ್ಹತೆ: ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಡಿಪ್ಲೋಮಾ (ಕೃಷಿ) ಹಾಗೂ ಡಿಪ್ಲೋಮಾ (ಅರಣ್ಯ) ಕೋರ್ಸುಗಳಿಗೆ ಪ್ರವೇಶವನ್ನು ಕೋರುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯೊಂದಿಗೆ ಕನ್ನಡ ಒಂದು ವಿಷಯವನ್ನು ಕಡ್ಡಾಯವಾಗಿ ಓದಿ ಕನಿಷ್ಠ ಶೇ. 45 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. (ಪ.ಜಾತಿ/ಪ.ಪಂಗಡ/ಪ್ರ.ವರ್ಗ-1 ರ ಅಭ್ಯರ್ಥಿಗಳು ಶೇ. 40 ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು).
Fee: ಅರ್ಜಿ ಶುಲ್ಕ ಡಿಪ್ಲೋಮಾ ಕೋರ್ಸಿಗೆ ರೂ. 400/- (ಪ.ಜಾತಿ/ಪ.ಪಂಗಡ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.200/-).

ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲೆಗಳೊಂದಿಗೆ ಹಾಗೂ ನಿಗದಿತ ಶುಲ್ಕದ ಡಿಡಿ ಯನ್ನು
‘‘ The Comptroller, UAS, Dharwad ’’ ಇವರ ಹೆಸರಿನಲ್ಲಿ ಪಡೆದು,
ಕುಲಸಚಿವರು,
ಕೃಷಿ ಕುಲಸಚಿವರು,
ಕೃಷಿ ವಿಶ್ವವಿದ್ಯಾಲಯ, ಕೃಷಿನಗರ,
ಧಾರವಾಡ – 580 005
ಇವರಿಗೆ ದಿನಾಂಕ 26.06.2019 ರ ಸಾಯಂಕಾಲ 5.00 ಘಂಟೆ ಒಳಗೆ ತಲುಪುವಂತೆ ಸಲ್ಲಿಸಬೇಕು ಹಾಗೂ ತಾವು ಅರ್ಜಿಯಲ್ಲಿ ನಮೂದಿಸಿದ ಪ್ರಮಾಣ ಪತ್ರಗಳ ನಕಲು ಪ್ರತಿ ಮತ್ತು ಮೂಲ (Original) DD ಯನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
Age Limit: ದಿನಾಂಕ 26.06.2019 ರಂದು ಅಭ್ಯರ್ಥಿಗಳ ವಯಸ್ಸು 19 ವರ್ಷಗಳನ್ನು ಮೀರಿರಬಾರದು.
to download official notification
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments