ಸುಪ್ರೀಂ ಕೋರ್ಟ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ: Assistant Librarian ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ
Published by: Yallamma G | Date:21 ಫೆಬ್ರುವರಿ 2026

ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ, ಅದರಲ್ಲೂ ವಿಶೇಷವಾಗಿ ಕಾನೂನು, ಮ್ಯೂಸಿಯಾಲಜಿ (Museology) ಮತ್ತು ಗ್ರಂಥಾಲಯ ವಿಜ್ಞಾನ (Library Science) ಹಿನ್ನೆಲೆ ಹೊಂದಿರುವವರಿಗೆ ಭಾರತದ ಸುಪ್ರೀಂ ಕೋರ್ಟ್ (Supreme Court of India) ಒಂದು ಬಂಪರ್ ಅವಕಾಶವನ್ನು ಒದಗಿಸಿದೆ. ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಖಾಲಿ ಇರುವಒಟ್ಟು 22 ಹುದ್ದೆಗಳ ಭರ್ತಿಗಾಗಿ 2026ರ ಫೆಬ್ರವರಿ 18 ರಂದು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court of India) ಉನ್ನತ ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಎಡಿಟರ್, ಅಸಿಸ್ಟೆಂಟ್ ಲೈಬ್ರರಿಯನ್, ಸೀನಿಯರ್ ಕೋರ್ಟ್ ಅಸಿಸ್ಟೆಂಟ್ ಮತ್ತು ಅಸಿಸ್ಟೆಂಟ್ ಲೈಬ್ರರಿಯನ್ ಸೇರಿದಂತೆ ಒಟ್ಟು 22 ಹುದ್ದೆಗಳನ್ನು ತುಂಬಲು ಅಧಿಕೃತ ಅಧಿಸೂಚನೆಯನ್ನು (No. F.6/RC-2025) ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08/03/2026.ಆಕರ್ಷಕ ವೇತನ ಶ್ರೇಣಿ ಹೊಂದಿರುವ ಈ ಕೇಂದ್ರ ಸರ್ಕಾರಿ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಈ ಉದ್ಯೋಗದ ಕುರಿತಾದ ಸಂಪೂರ್ಣ ವಿವರಗಳನ್ನು KPSC Vaani ಓದುಗರಿಗಾಗಿ ಇಲ್ಲಿ ವಿವರಿಸಲಾಗಿದೆ.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ಸುಪ್ರೀಂ ಕೋರ್ಟ್ ಹುದ್ದೆಗಳು 2026
ಹುದ್ದೆಗಳ ವಿವರ :
.png)
ಶೈಕ್ಷಣಿಕ ಅರ್ಹತೆ ಮತ್ತು ಕಡ್ಡಾಯ ಅನುಭವ :
ಪ್ರತಿ ಹುದ್ದೆಗೂ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಅನುಭವವನ್ನು ನಿಗದಿಪಡಿಸಲಾಗಿದೆ:
ಅಸಿಸ್ಟೆಂಟ್ ಡೈರೆಕ್ಟರ್:
ಸೀನಿಯರ್ ಕೋರ್ಟ್ ಅಸಿಸ್ಟೆಂಟ್:
ಅಸಿಸ್ಟೆಂಟ್ ಲೈಬ್ರರಿಯನ್:
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ ಮತ್ತು ಸಡಿಲಿಕೆ
ಗಮನಿಸಿ: ವಯೋಮಿತಿಯನ್ನು ಮಾರ್ಚ್ 01, 2026 ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ.
ಅರ್ಜಿ ಶುಲ್ಕ:
ಮಾಸಿಕ ವೇತನ :
.png)
ಆಯ್ಕೆಯ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Test), ಹುದ್ದೆಗೆ ತಕ್ಕಂತೆ ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (Computer Test) ಮತ್ತು ಅಂತಿಮವಾಗಿ 25 ಅಂಕಗಳ ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನವು ಕೇವಲ ದೆಹಲಿಯಲ್ಲಿ ನಡೆಯಲಿದ್ದು, ಲಿಖಿತ ಪರೀಕ್ಷೆಯು ದೆಹಲಿ/ಎನ್‌ಸಿಆರ್ (Delhi/NCR), ಮುಂಬೈ (Mumbai), ಕೋಲ್ಕತ್ತಾ (Kolkata) ಮತ್ತು ಚೆನ್ನೈ (Chennai) ಕೇಂದ್ರಗಳಲ್ಲಿ ನಡೆಯಲಿದೆ.
ಶಾರ್ಟ್‌ಲಿಸ್ಟಿಂಗ್ ಮಾನದಂಡ
ಪರೀಕ್ಷಾ ಕೇಂದ್ರಗಳು (Selection Process)
ಅರ್ಜಿ ಸಲ್ಲಿಸುವ ವಿಧಾನ (How to Apply)
ಗಮನಿಸಿ: ಭಾರತ ಸರ್ಕಾರದ ನಿಯಮಾನುಸಾರ SC, ST, OBC, ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಾಮಾನ್ಯ ವಯೋಮಿತಿ ಸಡಿಲಿಕೆ (Age Relaxation) ಅನ್ವಯಿಸುತ್ತದೆ. ಆದರೆ ಇತರ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಸಡಿಲಿಕೆ ಇರುವುದಿಲ್ಲ.
ಅಗತ್ಯ ದಾಖಲೆಗಳು
ಪ್ರಮುಖ ದಿನಾಂಕಗಳು (Important Dates)
ಸೂಚನೆ: 2025ರ ಜುಲೈ 25 ರಂದು ಹೊರಡಿಸಲಾದ ಹಳೆಯ ಅಧಿಸೂಚನೆಗೆ ಈ ನಾಲ್ಕು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

ಆರಂಭಿಕ ಹೆಸರು : ಭಾರತದ ಸುಪ್ರೀಂ ಕೋರ್ಟ್ ಹುದ್ದೆಗಳು 2026
ನೇಮಕಾತಿ ಸಂಸ್ಥೆ : ಭಾರತದ ಸರ್ವೋಚ್ಚ ನ್ಯಾಯಾಲಯ
ಒಟ್ಟು ಖಾಲಿ ಹುದ್ದೆಗಳು : 22
ಅಪ್ಲಿಕೇಶನ್ ಮೋಡ್ : ಆನ್‌ಲೈನ್
ಕೆಲಸದ ಸ್ಥಳ : ಅಧಿಕೃತ ಅಧಿಸೂಚನೆಯ ಪ್ರಕಾರ
ಸಂಬಳ / ವೇತನ ಮಟ್ಟ : ಹಂತ 8, 11 ಮತ್ತು 12 (7ನೇ CPC)
ಹುದ್ದೆಗಳ ವಿವರ :
.png)
ಶೈಕ್ಷಣಿಕ ಅರ್ಹತೆ ಮತ್ತು ಕಡ್ಡಾಯ ಅನುಭವ :
ಪ್ರತಿ ಹುದ್ದೆಗೂ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಅನುಭವವನ್ನು ನಿಗದಿಪಡಿಸಲಾಗಿದೆ:
ಅಸಿಸ್ಟೆಂಟ್ ಎಡಿಟರ್:
ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (Degree in Law) ಹೊಂದಿರಬೇಕು.
ಕಂಪ್ಯೂಟರ್ ಆಪರೇಷನ್ ಜ್ಞಾನ ಕಡ್ಡಾಯ.
ಅನುಭವ: ಕನಿಷ್ಠ 3 ವರ್ಷಗಳ ಕಾಲ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು, ಅಥವಾ ನ್ಯಾಯಾಂಗ ಹುದ್ದೆ, ಕಾನೂನು ಸಂಶೋಧನೆ, ಲಾ ರಿಪೋರ್ಟರ್ ಅಥವಾ ಲೆಕ್ಚರರ್ ಆಗಿ 3 ವರ್ಷಗಳ ಅನುಭವವಿರಬೇಕು.
ಅಸಿಸ್ಟೆಂಟ್ ಡೈರೆಕ್ಟರ್:
ಮ್ಯೂಸಿಯಾಲಜಿ (Museology) ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ.
ಅನುಭವ: ವಸ್ತುಸಂಗ್ರಹಾಲಯದಲ್ಲಿ ಕನಿಷ್ಠ 5 ವರ್ಷಗಳ ಸಂಶೋಧನಾ ಅನುಭವ ಮತ್ತು ಪ್ರಕಟಿತ ಕೃತಿಗಳನ್ನು ಹೊಂದಿರಬೇಕು.
ಭಾರತೀಯ ಪ್ರಾಚ್ಯವಸ್ತುಗಳು, ಮ್ಯೂಸಿಯಂ ತಂತ್ರಗಳು ಹಾಗೂ ಕಂಪ್ಯೂಟರ್ ಜ್ಞಾನ ಇರಬೇಕು.
ಸೀನಿಯರ್ ಕೋರ್ಟ್ ಅಸಿಸ್ಟೆಂಟ್:
ಮ್ಯೂಸಿಯಾಲಜಿಯಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹಾಗೂ ಕಂಪ್ಯೂಟರ್ ಜ್ಞಾನ.
ಅನುಭವ: ಮ್ಯೂಸಿಯಾಲಜಿ ಕ್ಷೇತ್ರದಲ್ಲಿ, ಪ್ರದರ್ಶನಗಳನ್ನು ಆಯೋಜಿಸುವಲ್ಲಿ ಕನಿಷ್ಠ 2 ವರ್ಷಗಳ ಸಂಶೋಧನಾ ಅನುಭವ, ಅಥವಾ ಅಸಿಸ್ಟೆಂಟ್ ಕ್ಯುರೇಟರ್ (Assistant Curator) ಹುದ್ದೆಯಲ್ಲಿ ಕನಿಷ್ಠ 2 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.
ಅಸಿಸ್ಟೆಂಟ್ ಲೈಬ್ರರಿಯನ್:
ಲೈಬ್ರರಿ ಸೈನ್ಸ್‌ನಲ್ಲಿ ಪದವಿ (Degree in Library Science).
AICTE/DOEACC ಮಾನ್ಯತೆ ಪಡೆದ ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಅಥವಾ ಲೈಬ್ರರಿ ಆಟೊಮೇಷನ್ ಕೋರ್ಸ್ ಪೂರ್ಣಗೊಳಿಸಿರಬೇಕು.
ಅನುಭವ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾನೂನು ಲೈಬ್ರರಿಯಲ್ಲಿ ಕನಿಷ್ಠ 2 ವರ್ಷಗಳ ಪ್ರಾಯೋಗಿಕ ಅನುಭವ.
ಲೈಬ್ರರಿ ಕೆಲಸದಲ್ಲಿ ಕಂಪ್ಯೂಟರ್ ಕಾರ್ಯಾಚರಣೆ, ಕ್ಯಾಟಲಾಗಿಂಗ್ (cataloging), ಹಾಗೂ ಆನ್‌ಲೈನ್ ಮತ್ತು ಆಫ್‌ಲೈನ್ ಡೇಟಾಬೇಸ್‌ಗಳ ಸರ್ಚ್ ಎಂಜಿನ್ ಬಳಕೆ ತಿಳಿದಿರಬೇಕು.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ವಯೋಮಿತಿ ಮತ್ತು ಸಡಿಲಿಕೆ
ಗಮನಿಸಿ: ವಯೋಮಿತಿಯನ್ನು ಮಾರ್ಚ್ 01, 2026 ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ.
- ಅಸಿಸ್ಟೆಂಟ್ ಎಡಿಟರ್ & ಅಸಿಸ್ಟೆಂಟ್ ಡೈರೆಕ್ಟರ್: ಕನಿಷ್ಠ 30 ವರ್ಷಗಳಿಂದ ಗರಿಷ್ಠ 40 ವರ್ಷಗಳವರೆಗೆ.
- ಸೀನಿಯರ್ ಕೋರ್ಟ್ ಅಸಿಸ್ಟೆಂಟ್: ಗರಿಷ್ಠ 35 ವರ್ಷಗಳು.
- ಅಸಿಸ್ಟೆಂಟ್ ಲೈಬ್ರರಿಯನ್: ಗರಿಷ್ಠ 30 ವರ್ಷಗಳು.
- SC, ST, OBC, ವಿಶೇಷಚೇತನರು ಹಾಗೂ ಮಾಜಿ ಸೈನಿಕರಿಗೆ ಭಾರತ ಸರ್ಕಾರದ ನಿಯಮಾವಳಿಯಂತೆ ವಯೋಮಿತಿ ಸಡಿಲಿಕೆ ಲಭ್ಯವಿದೆ.
ಅರ್ಜಿ ಶುಲ್ಕ:
- ಸಾಮಾನ್ಯ (General) / OBC ಅಭ್ಯರ್ಥಿಗಳಿಗೆ: ₹1500/- (ಪ್ಲಸ್ ಬ್ಯಾಂಕ್ ಶುಲ್ಕ)
- SC / ST / Ex-Servicemen / PwD ಅಭ್ಯರ್ಥಿಗಳಿಗೆ: ₹750/- (ಪ್ಲಸ್ ಬ್ಯಾಂಕ್ ಶುಲ್ಕ)
- ಶುಲ್ಕವನ್ನು ಕೇವಲ ಆನ್‌ಲೈನ್ ಪೇಮೆಂಟ್ ಗೇಟ್‌ವೇ (UCO ಬ್ಯಾಂಕ್) ಮೂಲಕ ಮಾತ್ರ ಪಾವತಿಸಬೇಕು.
ಮಾಸಿಕ ವೇತನ :
.png)
ಆಯ್ಕೆಯ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Test), ಹುದ್ದೆಗೆ ತಕ್ಕಂತೆ ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (Computer Test) ಮತ್ತು ಅಂತಿಮವಾಗಿ 25 ಅಂಕಗಳ ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಸಂದರ್ಶನವು ಕೇವಲ ದೆಹಲಿಯಲ್ಲಿ ನಡೆಯಲಿದ್ದು, ಲಿಖಿತ ಪರೀಕ್ಷೆಯು ದೆಹಲಿ/ಎನ್‌ಸಿಆರ್ (Delhi/NCR), ಮುಂಬೈ (Mumbai), ಕೋಲ್ಕತ್ತಾ (Kolkata) ಮತ್ತು ಚೆನ್ನೈ (Chennai) ಕೇಂದ್ರಗಳಲ್ಲಿ ನಡೆಯಲಿದೆ.
ಶಾರ್ಟ್‌ಲಿಸ್ಟಿಂಗ್ ಮಾನದಂಡ
- ಸಹಾಯಕ ಸಂಪಾದಕ: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:3 ಅನುಪಾತದಲ್ಲಿ (ಅಂದರೆ, ಪ್ರತಿ ಖಾಲಿ ಹುದ್ದೆಗೆ 3 ಅಭ್ಯರ್ಥಿಗಳು) ಸಂದರ್ಶನಕ್ಕೆ ಕರೆಯಲಾಗುವುದು.
- ಇತರ ಹುದ್ದೆಗಳು: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:10 ಅನುಪಾತದಲ್ಲಿ ಕಂಪ್ಯೂಟರ್ ಪರೀಕ್ಷೆಗೆ ಕರೆಯಲಾಗುತ್ತದೆ. ಎರಡೂ ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರನ್ನು 1:3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಪರೀಕ್ಷಾ ಕೇಂದ್ರಗಳು (Selection Process)
ಲಿಖಿತ ಪರೀಕ್ಷೆಗಳು ದೆಹಲಿ/ಎನ್‌ಸಿಆರ್ (Delhi/NCR), ಮುಂಬೈ (Mumbai), ಕೋಲ್ಕತ್ತಾ (Kolkata) ಮತ್ತು ಚೆನ್ನೈ (Chennai) ನಗರಗಳಲ್ಲಿ ನಡೆಯಲಿವೆ.
ಆದರೆ, ಅಂತಿಮ ಹಂತದ ಸಂದರ್ಶನವು (Interview) ದೆಹಲಿಯಲ್ಲಿ ಮಾತ್ರ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ (How to Apply)
- ಮೊದಲಿಗೆ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ www.sci.gov.in ಗೆ ಭೇಟಿ ನೀಡಿ.
- ಅಲ್ಲಿ ಅರ್ಜಿ ಲಿಂಕ್ ಲಭ್ಯವಾದಾಗ, ನಿಮ್ಮಗೆ ಬೇಕಾದ ಹುದ್ದೆಗೆ ಪ್ರತ್ಯೇಕವಾಗಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಿ.
- ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ದಾಖಲೆಗಳು, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಸೂಚನೆಗಳ ಅನುಸಾರ ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅರ್ಜಿಯನ್ನು ಅಂತಿಮವಾಗಿ 'Submit' ಮಾಡಿದ ನಂತರ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟೌಟ್ (Printout) ತೆಗೆದಿಟ್ಟುಕೊಳ್ಳಿ. (ಇದನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸುವ ಅಗತ್ಯವಿಲ್ಲ).
ಗಮನಿಸಿ: ಭಾರತ ಸರ್ಕಾರದ ನಿಯಮಾನುಸಾರ SC, ST, OBC, ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಾಮಾನ್ಯ ವಯೋಮಿತಿ ಸಡಿಲಿಕೆ (Age Relaxation) ಅನ್ವಯಿಸುತ್ತದೆ. ಆದರೆ ಇತರ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಸಡಿಲಿಕೆ ಇರುವುದಿಲ್ಲ.
ಅಗತ್ಯ ದಾಖಲೆಗಳು
- ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ
- ಸಹಿ
- ಶೈಕ್ಷಣಿಕ ಪ್ರಮಾಣಪತ್ರಗಳು
- ಅನುಭವ ಪ್ರಮಾಣಪತ್ರಗಳು
- ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ)
- ಗುರುತಿನ ಚೀಟಿ
- ಕಂಪ್ಯೂಟರ್ ಅರ್ಹತಾ ಪ್ರಮಾಣಪತ್ರ
ಪ್ರಮುಖ ದಿನಾಂಕಗಳು (Important Dates)
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 23.02.2026.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.03.2026.
ಸೂಚನೆ: 2025ರ ಜುಲೈ 25 ರಂದು ಹೊರಡಿಸಲಾದ ಹಳೆಯ ಅಧಿಸೂಚನೆಗೆ ಈ ನಾಲ್ಕು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
Application End Date: 8 ಮಾರ್ಚ್ 2026

Comments