ಗ್ರಂಥಪಾಲಕರ ಹುದ್ದೆಗೆ ಅರ್ಜಿ ಆಹ್ವಾನ: Bharat Electronics Limited (BEL) ಮತ್ತು ಬೆಂಗಳೂರು ವಿಶ್ವವಿದ್ಯಾಲಯ ನಲ್ಲಿ 2026ರ ನೇಮಕಾತಿ – ಅರ್ಹ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ!
Published by: Heena Sheregar | Date:20 ಫೆಬ್ರುವರಿ 2026

ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗ ಅಥವಾ ತರಬೇತಿ ನಿರೀಕ್ಷಿಸುತ್ತಿರುವ ಗ್ರಂಥಾಲಯ ವಿಜ್ಞಾನ ಪದವೀಧರರಿಗೆ ಸುವರ್ಣಾವಕಾಶ ಒದಗಿಬಂದಿದೆ. ಪ್ರತಿಷ್ಠಿತ ಭಾರತೀಯ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು ಬೆಂಗಳೂರು ವಿಶ್ವವಿದ್ಯಾಲಯ (BU) ಪ್ರತ್ಯೇಕವಾಗಿ ಗ್ರಂಥಾಲಯ ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿವೆ.
ಭಾರತೀಯ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಗ್ರಂಥಪಾಲಕ ಹುದ್ದೆಗಳು ತಾಂತ್ರಿಕ ಹಾಗೂ ಸಂಶೋಧನಾ ವಾತಾವರಣದಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶವನ್ನು ನೀಡುತ್ತವೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ನಿರ್ವಹಿಸುವ ಜವಾಬ್ದಾರಿ ಈ ಹುದ್ದೆಯ ವಿಶೇಷತೆ. ಉತ್ತಮ ವೇತನ, ಕೇಂದ್ರ ಸರ್ಕಾರದ ಸೌಲಭ್ಯಗಳು ಮತ್ತು ಭದ್ರ ಭವಿಷ್ಯ – ನಿಮ್ಮ ವೃತ್ತಿಗೆ ಇದು ಸುವರ್ಣ ಹೆಜ್ಜೆ.
ಬೆಂಗಳೂರು ವಿಶ್ವವಿದ್ಯಾಲಯ (BU) ನಲ್ಲಿ ಸಹಾಯಕ ಗ್ರಂಥಪಾಲಕ ಮತ್ತು ಲೈಬ್ರರಿ ತರಬೇತುದಾರ ಹುದ್ದೆಗಳ ಅವಕಾಶ ಲಭ್ಯ. ವಿದ್ಯಾರ್ಥಿಗಳು ಮತ್ತು ಸಂಶೋಧಕರೊಂದಿಗೆ ಕೆಲಸ ಮಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಭದ್ರ ಭವಿಷ್ಯ ಕಟ್ಟಿಕೊಳ್ಳಲು ಇದು ಸೂಕ್ತ ವೇದಿಕೆ.ಇದನ್ನು ತಪ್ಪಿಸಿಕೊಳ್ಳಬೇಡಿ – ಜ್ಞಾನ ಕ್ಷೇತ್ರದಲ್ಲಿ ನಿಮ್ಮ ಕನಸಿನ ವೃತ್ತಿಗೆ ಇಂದೇ ಮೊದಲ ಹೆಜ್ಜೆ ಇಡಿ.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
BEL ಮತ್ತು BU ನೇಮಕಾತಿ ಅಧಿಸೂಚನೆಗಳ ವಿವರ:
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ KPSC Vaani ಗೆ ಭೇಟಿ ನೀಡಿ.

- ಸಂಸ್ಥೆಯ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು ಬೆಂಗಳೂರು ವಿಶ್ವವಿದ್ಯಾಲಯ (BU)
- ಹುದ್ದೆಯ ಹೆಸರು: ಟ್ರೈನಿ ಆಫೀಸರ್ (ಲೈಬ್ರರಿ) - I , ಲೈಬ್ರರಿ ಅಪ್ರೆಂಟಿಸ್ ಟ್ರೈನಿ
- ಒಟ್ಟು ಹುದ್ದೆಗಳು: 20 ಹುದ್ದೆಗಳು ಪ್ಲಸ್
- ಉದ್ಯೋಗ ಸ್ಥಳ : ಬೆಂಗಳೂರು
- BEL ಟ್ರೈನಿ ಆಫೀಸರ್ (ಲೈಬ್ರರಿ) - I: ಅಧಿಕೃತವಾಗಿ ಘೋಷಿತವಾಗಿಲ್ಲ
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ: 20 ಹುದ್ದೆಗಳು
- BEL ಟ್ರೈನಿ ಆಫೀಸರ್ (ಲೈಬ್ರರಿ) - I: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ (M.Lib.Sc) ಅಥವಾ ಲೈಬ್ರರಿ ಮತ್ತು ಇನ್ಫರ್ಮೇಷನ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ: ಲೈಬ್ರರಿ ಮತ್ತು ಇನ್ಫರ್ಮೇಷನ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ (M.Lib.I.Sc).
- BEL ಟ್ರೈನಿ ಆಫೀಸರ್ (ಲೈಬ್ರರಿ) - I: 01.02.2026 ಕ್ಕೆ ಅನ್ವಯವಾಗುವಂತೆ ಗರಿಷ್ಠ 28 ವರ್ಷಗಳು. SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ PWD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ:ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ ಮತ್ತು ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 40 ವರ್ಷಗಳಾಗಿದ್ದು, ವಿಕಲಚೇತನರಿಗೆ ನಿಯಮಾನುಸಾರ 10 ವರ್ಷಗಳ ಸಡಿಲಿಕೆ ಇರುತ್ತದೆ.
- BEL ಟ್ರೈನಿ ಆಫೀಸರ್ (ಲೈಬ್ರರಿ) - I :ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ: ನೇರ ಸಂದರ್ಶನ
- BEL ಟ್ರೈನಿ ಆಫೀಸರ್ (ಲೈಬ್ರರಿ) - I: ಗೌರವಧನ 1ನೇ ವರ್ಷ: ₹30,000 ಪ್ರತಿ ತಿಂಗಳು, 2ನೇ ವರ್ಷ: ₹35,000 ಪ್ರತಿ ತಿಂಗಳು, 3ನೇ ವರ್ಷ: ₹40,000 ಪ್ರತಿ ತಿಂಗಳು
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ: ಪ್ರತಿ ತಿಂಗಳು ₹15,000/- ನೀಡಲಾಗುತ್ತದೆ.
- BEL ಟ್ರೈನಿ ಆಫೀಸರ್ (ಲೈಬ್ರರಿ) - I: ಅರ್ಜಿಗಳನ್ನು ಆಫ್‌ಲೈನ್ (ಅಂಚೆ) ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ: ಮ್ಯಾನೇಜರ್ (HR/CSG), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಜಾಲಹಳ್ಳಿ ಪೋಸ್ಟ್, ಬೆಂಗಳೂರು – 560013.
- ಲಕೋಟೆಯ ಮೇಲೆ ಬರೆಯಿರಿ: ಅರ್ಜಿಯನ್ನು ಕಳುಹಿಸುವ ಲಕೋಟೆಯ (Envelope) ಮೇಲೆ “Application for the post of Trainee Officer (Library) – BEL Bengaluru Complex” ಎಂದು ದಪ್ಪ ಅಕ್ಷರಗಳಲ್ಲಿ ಕಡ್ಡಾಯವಾಗಿ ಬರೆಯಿರಿ.
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ: ನೇರ ಸಂದರ್ಶನ
- ದಿನಾಂಕ: 23.02.2026ಸಮಯ: ಬೆಳಿಗ್ಗೆ 11:00 ಗಂಟೆಸ್ಥಳ: ಬೋರ್ಡ್ ರೂಂ - 1, ಆಡಳಿತ ವಿಭಾಗ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು - 560056.
- BEL ಟ್ರೈನಿ ಆಫೀಸರ್ (ಲೈಬ್ರರಿ) - I: ಇದು ಆರಂಭದಲ್ಲಿ 2 ವರ್ಷಗಳ ಅವಧಿಯದ್ದಾಗಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಒಟ್ಟು 3 ವರ್ಷಗಳವರೆಗೆ ವಿಸ್ತರಿಸಬಹುದು.
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ: 1 ವರ್ಷ ಮಾತ್ರ.
- BEL ಟ್ರೈನಿ ಆಫೀಸರ್ (ಲೈಬ್ರರಿ) - I: ಸಾಮಾನ್ಯ, ಓಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ₹177 ಅರ್ಜಿ ಶುಲ್ಕ SC / ST / PwBD (ವಿಕಲಚೇತನ) / ಮಾಜಿ ಸೈನಿಕ ಯಾವುದೇ ಶುಲ್ಕವಿಲ್ಲ ( ಶುಲ್ಕವನ್ನು SBI Collect ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು.ಪಾವತಿಸಿದ ನಂತರ ಬರುವ 'ಶುಲ್ಕದ ರಸೀದಿ'ಯನ್ನು (Fee Receipt) ಅರ್ಜಿಯೊಂದಿಗೆ ಲಗತ್ತಿಸುವುದು ಕಡ್ಡಾಯ.)
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ: ಯಾವುದೇ ಶುಲ್ಕವಿಲ್ಲ
- BEL ಟ್ರೈನಿ ಆಫೀಸರ್ (ಲೈಬ್ರರಿ) - I: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:07 ಮಾರ್ಚ್ 2026
- BU ಲೈಬ್ರರಿ ಅಪ್ರೆಂಟಿಸ್ ಟ್ರೈನಿ: ನೇರ ಸಂದರ್ಶನದ ದಿನಾಂಕ: 23 ಫೆಬ್ರವರಿ 2026 (ಬೆಳಿಗ್ಗೆ 11:00)
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ KPSC Vaani ಗೆ ಭೇಟಿ ನೀಡಿ.
Application End Date: 23 ಫೆಬ್ರುವರಿ 2026
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To download official notification
Related Tags: Degree

Comments