SSB ಯಲ್ಲಿರುವ ವಿವಿಧ ಕಾನ್ ಸ್ಟೇಬಲ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
| Date:15 ಜೂನ್ 2019

ಭಾರತೀಯ ಸೇನೆಯ ಸಶಸ್ತ್ರ ಪಡೆಗಳಲ್ಲಿ ಒಂದಾದ ಸಶಸ್ತ್ರ ಸೀಮಾ ಬಲ ಕಂಬ್ಯಾ ಮತ್ತು ಸಿಟಿ ಕಾನ್ಸ್ಟೇಬಲ್ ಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ತಮ್ಮ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜುಲೈ 18,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
* ಪರಿಶಿಷ್ಟ ಜಾತಿಯವರಿಗೆ -43
* ಪರಿಶಿಷ್ಟ ಪಂಗಡದವರಿಗೆ- 22
* ಸಾಮಾನ್ಯರಿಗೆ- 225
* ಪರಿಶಿಷ್ಟ ಜಾತಿಯವರಿಗೆ -43
* ಪರಿಶಿಷ್ಟ ಪಂಗಡದವರಿಗೆ- 22
* ಸಾಮಾನ್ಯರಿಗೆ- 225
No. of posts: 290
Application Start Date: 17 ಮೇ 2019
Application End Date: 7 ಜೂನ್ 2019
Work Location: ಭಾರತೀಯ ಸೇನೆಯ ಸಶಸ್ತ್ರ ಪಡೆ
Selection Procedure: ದೈಹಿಕ ಫಿಟ್ನೆಸ್ ಪರೀಕ್ಷೆ ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೊದಲಿಗೆ ಎತ್ತರ ಪರೀಕ್ಷೆ ನಿರ್ವಹಿಸಲಾಗುತ್ತದೆ.ಪರೀಕ್ಷೆಯಲ್ಲಿ ಉತ್ತೀರ್ಣ ಗೊಂಡ ಅವರನ್ನು ಡಾಕ್ಯುಮೆಂಟೇಶನ್ ಗೆ ಆಹ್ವಾನಿಸಲಾಗುತ್ತದೆ.ಈ ಹಂತದಲ್ಲಿ ಅಭ್ಯರ್ಥಿಗಳು ಶೈಕ್ಷಣಿಕ ಹಾಗೂ ಇತರೆ ಅಗತ್ಯ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ಒದಗಿಸಬೇಕು.ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ ನಿರ್ವಹಿಸಲಾಗುತ್ತದೆ. ಇದರಲ್ಲಿ ಪುರುಷರು 5 K.M ದೂರವನ್ನು 24 ನಿಮಿಷ, ಮಹಿಳೆಯರು1.6 K.M ದೂರವನ್ನು 8:೩೦ ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಬೇಕು.ನಂತರ ಪುರುಷ ಅಭ್ಯರ್ಥಿಗಳಿಗೆ ಎದೆ ಸುತ್ತಳತೆ ಹಾಗೂ ತೂಕ ಪರೀಕ್ಷೆ ನಿರ್ವಹಿಸಲಾಗುತ್ತದೆ. ಸಾಮಾನ್ಯವಾಗಿದ್ದಾಗ 80 C.M ವಿಸ್ತರಿಸಿದಾಗ 85 C.M ಎದೆ ಸುತ್ತಳತೆ ಹೊಂದಿರಬೇಕು.ಅಭ್ಯರ್ಥಿಗಳ ವಯೋಮಿತಿ ಹಾಗೂ ಎತ್ತರಕ್ಕೆ ಅನುಗುಣವಾಗಿ ತೂಕ ಹೊಂದಿರಬೇಕು. ಹಾಗೂ ಡಾಕ್ಯುಮೆಂಟೇಶನ್ ಗಳಲ್ಲಿ ಅರ್ಹತೆ ಗಳಿಸಿದವರಿಗೆ ಲಿಖಿತ ಪರೀಕ್ಷೆ ನಿರ್ವಹಿಸಲಾಗುತ್ತದೆ.ಪರೀಕ್ಷೆಯಲ್ಲಿ ಕನಿಷ್ಠ ಶೇ.35 ಅಂಕ ಪಡೆಯಬೇಕು. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದವರಿಗೆ ಡೀಟೈಲ್ಡ್ ಮೆಡಿಕಲ್ ಎಕ್ಸಾಮಿನೇಷನ್ ನಿರ್ವಹಿಸಲಾಗುತ್ತದೆ.DMC ನಲ್ಲಿ ಅರ್ಹತೆ ಗಳಿಸಿದವರು ಅಂತಿಮವಾಗಿ ಹುದ್ದೆಗೆ ಆಯ್ಕೆಯಾಗುತ್ತಾರೆ.
Qualification: ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.ಕನಿಷ್ಠ 3 ವರ್ಷ ನಿಯತವಾಗಿ ಸಶಸ್ತ್ರ ಸೀಮಾ ಬಲ ದಲ್ಲಿ ಕಾರ್ಯನಿರ್ವಹಿಸಿರಬೇಕು.
*SHAPE-2 ವೈದ್ಯಕೀಯ ವ್ಯಾಪ್ತಿಗೊಳಪಟ್ಟಿರಬೇಕು.
* 3 ವರ್ಷಗಳ ಸೇವಾ ಅವಧಿಯಲ್ಲಿ ಯಾವುದೇ ವಿವಾದಗಳಿಗೆ ಒಳಗಾಗಿರಬಾರದು.
* ಪುರುಷ ಅಭ್ಯರ್ಥಿಗಳು 170 cm,ಮಹಿಳಾ ಅಭ್ಯರ್ಥಿಗಳು 157 cm ಎತ್ತರ ಹೊಂದಿರಬೇಕು.
*SHAPE-2 ವೈದ್ಯಕೀಯ ವ್ಯಾಪ್ತಿಗೊಳಪಟ್ಟಿರಬೇಕು.
* 3 ವರ್ಷಗಳ ಸೇವಾ ಅವಧಿಯಲ್ಲಿ ಯಾವುದೇ ವಿವಾದಗಳಿಗೆ ಒಳಗಾಗಿರಬಾರದು.
* ಪುರುಷ ಅಭ್ಯರ್ಥಿಗಳು 170 cm,ಮಹಿಳಾ ಅಭ್ಯರ್ಥಿಗಳು 157 cm ಎತ್ತರ ಹೊಂದಿರಬೇಕು.
Age Limit: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷದೊಳಗಿರಬೇಕು. ಆದರೆ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಕಲ್ಪಿಸಲಾಗಿದೆ.






Comments