SBI ನೇಮಕಾತಿ 2026: ಎಸ್ಬಿಐನಲ್ಲಿ 116 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ನೇರ ಸಂದರ್ಶನದ ಮೂಲಕ ಆಯ್ಕೆ.. ಇಂದೇ ಅರ್ಜಿ ಸಲ್ಲಿಸಿ!
Published by: Heena Sheregar | Date:25 ಫೆಬ್ರುವರಿ 2026

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ State Bank of India (SBI) 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಬ್ಯಾಂಕ್ನ ಸ್ಪೆಷಲಿಸ್ಟ್ ಕ್ಯಾಡರ್ ಆಫೀಸರ್ (Specialist Cadre Officers – SCO) ಹುದ್ದೆಗಳಿಗಾಗಿ ಒಟ್ಟು 116 ತಜ್ಞ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಅಧಿಕೃತ ಅಧಿಸೂಚನೆಯ ಪ್ರಕಾರ, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ/ಪಿಜಿ ಪದವಿ ಪಡೆದಿರಬೇಕು. ಜೊತೆಗೆ, ಅನುಭವ ಮತ್ತು ಇತರ ಅರ್ಹತೆಗಳ ವಿವರಗಳನ್ನು ಅಧಿಕೃತ ಪ್ರಕಟಣೆಯಲ್ಲಿ ಪರಿಶೀಲಿಸಬೇಕು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ವೃತ್ತಿಜೀವನ ನಿರ್ಮಿಸಲು ಬಯಸುವವರಿಗೆ SBI ನೇಮಕಾತಿ 2026 ಒಂದು ಸುವರ್ಣಾವಕಾಶವಾಗಿದೆ. ಆಸಕ್ತರು ಅಂತಿಮ ದಿನಾಂಕ: ಮಾರ್ಚ್ 15, 2026 ದೊಳಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸುವುದು ಅಗತ್ಯ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
SBI ನೇಮಕಾತಿ ಅಧಿಸೂಚನೆಯ ವಿವರ :
ಹುದ್ದೆಗಳ ವರ್ಗೀಕರಣ:
ವಿದ್ಯಾರ್ಹತೆ ಮತ್ತು ಅನುಭವ
ವಯೋಮಿತಿ ವಿವರ (Age Limit as on 01.01.2026)
ಆಯ್ಕೆ ಪ್ರಕ್ರಿಯೆಯ ಹಂತಗಳು:
ಪ್ರಮುಖ ದಿನಾಂಕಗಳು:
ಅಭ್ಯರ್ಥಿಗಳಿಗೆ ಸೂಚನೆ:
ಅಧಿಕೃತ ಅಧಿಸೂಚನೆಯ ಪ್ರಕಾರ, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ/ಪಿಜಿ ಪದವಿ ಪಡೆದಿರಬೇಕು. ಜೊತೆಗೆ, ಅನುಭವ ಮತ್ತು ಇತರ ಅರ್ಹತೆಗಳ ವಿವರಗಳನ್ನು ಅಧಿಕೃತ ಪ್ರಕಟಣೆಯಲ್ಲಿ ಪರಿಶೀಲಿಸಬೇಕು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ವೃತ್ತಿಜೀವನ ನಿರ್ಮಿಸಲು ಬಯಸುವವರಿಗೆ SBI ನೇಮಕಾತಿ 2026 ಒಂದು ಸುವರ್ಣಾವಕಾಶವಾಗಿದೆ. ಆಸಕ್ತರು ಅಂತಿಮ ದಿನಾಂಕ: ಮಾರ್ಚ್ 15, 2026 ದೊಳಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸುವುದು ಅಗತ್ಯ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
SBI ನೇಮಕಾತಿ ಅಧಿಸೂಚನೆಯ ವಿವರ :
- ಸಂಸ್ಥೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India - SBI)
- ಒಟ್ಟು ಹುದ್ದೆಗಳು: 116 ಹುದ್ದೆಗಳು
- ಉದ್ಯೋಗ ಸ್ಥಳ: ಭಾರತದಾದ್ಯಂತ ಇರುವ ಎಸ್ಬಿಐನ ವಿವಿಧ ಪ್ರಾದೇಶಿಕ ಕಚೇರಿಗಳು ಮತ್ತು ಕೇಂದ್ರ ಕಚೇರಿ (ಮುಂಬೈ ಸೇರಿ).
- ಹುದ್ದೆಯ ಹೆಸರುಗಳು: 1. ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (IS Audit) - [Assistant Vice President] 2. ಡೆಪ್ಯುಟಿ ಮ್ಯಾನೇಜರ್ (IS Audit) - [Deputy Manager] 3. ಡೆಪ್ಯುಟಿ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್) - [Deputy Manager - CA]
ಹುದ್ದೆಗಳ ವರ್ಗೀಕರಣ:
- ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (IS Audit) 12
- ಡೆಪ್ಯುಟಿ ಮ್ಯಾನೇಜರ್ (IS Audit) 43
- ಡೆಪ್ಯುಟಿ ಮ್ಯಾನೇಜರ್ (Chartered Accountant) 61
ವಿದ್ಯಾರ್ಹತೆ ಮತ್ತು ಅನುಭವ
- ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (IS Audit): BE/B.Tech/M.Sc (CS/IT/Electronics) ಅಥವಾ MCA ( 6 ವರ್ಷಗಳ ಕನಿಷ್ಠ ಅನುಭವ )
- ಡೆಪ್ಯುಟಿ ಮ್ಯಾನೇಜರ್ (IS Audit): BE/B.Tech/M.Sc (CS/IT/Electronics) ಅಥವಾ MCA ( 3 ವರ್ಷಗಳ ಕನಿಷ್ಠ ಅನುಭವ )
- ಡೆಪ್ಯುಟಿ ಮ್ಯಾನೇಜರ್ (Chartered Accountant): CA (ICAI ಸದಸ್ಯತ್ವ ಕಡ್ಡಾಯ) ( 1 ವರ್ಷಗಳ ಕನಿಷ್ಠ ಅನುಭವ )
ವಯೋಮಿತಿ ವಿವರ (Age Limit as on 01.01.2026)
- ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್: 27 ವರ್ಷ ರಿಂದಾ 45 ವರ್ಷ
- ಡೆಪ್ಯುಟಿ ಮ್ಯಾನೇಜರ್ (IS Audit): 25 ವರ್ಷ ರಿಂದಾ 35 ವರ್ಷ
- ಡೆಪ್ಯುಟಿ ಮ್ಯಾನೇಜರ್ (CA): 21 ವರ್ಷ ರಿಂದಾ 35 ವರ್ಷ
ಆಯ್ಕೆ ಪ್ರಕ್ರಿಯೆಯ ಹಂತಗಳು:
- ಸ್ಕ್ರೀನಿಂಗ್ (Screening): ಅಭ್ಯರ್ಥಿ ಸಲ್ಲಿಸಿದ ಮಾಹಿತಿ, ಅನುಭವ ಮತ್ತು ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಸಮಿತಿಯು ಅರ್ಹರನ್ನು ಆಯ್ಕೆ ಮಾಡುತ್ತದೆ.
- ಸಂದರ್ಶನ (Interview): ಇದು 100 ಅಂಕಗಳಿಗೆ ನಡೆಯುತ್ತದೆ. ಬ್ಯಾಂಕ್ ನಿಗದಿಪಡಿಸುವ ಕನಿಷ್ಠ ಅಂಕಗಳನ್ನು (Qualifying Marks) ಪಡೆಯುವುದು ಕಡ್ಡಾಯ.
- ಮೆರಿಟ್ ಪಟ್ಟಿ (Merit List): ಕೇವಲ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನ ಅಂಕ ಪಡೆದರೆ, ವಯಸ್ಸಿನಲ್ಲಿ ಹಿರಿಯರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಹಂತ 1: ವೆಬ್ಸೈಟ್ಗೆ ಭೇಟಿ ನೀಡಿ
ಎಸ್ಬಿಐ ಅಧಿಕೃತ ಲಿಂಕ್ sbi.bank/careers ಗೆ ಹೋಗಿ.
ಮುಖಪುಟದಲ್ಲಿರುವ 'Current Openings' ಮೇಲೆ ಕ್ಲಿಕ್ ಮಾಡಿ.
ಹಂತ 2: ನೋಂದಣಿ (Registration)
'SCO Recruitment' ಅಧಿಸೂಚನೆ ಆರಿಸಿ 'Apply Online' ಕ್ಲಿಕ್ ಮಾಡಿ.
'New Registration' ಮಾಡಿ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಪಡೆಯಿರಿ.
ಹಂತ 3: ವಿವರ ಭರ್ತಿ
ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಮೂದಿಸಿ.
ಕೆಲಸದ ಅನುಭವದ (Experience) ವಿವರಗಳನ್ನು ನಿಖರವಾಗಿ ತುಂಬಿರಿ.
ಹಂತ 4: ದಾಖಲೆ ಅಪ್ಲೋಡ್
ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
ಆಧಾರ್, ಪದವಿ ಪ್ರಮಾಣಪತ್ರ ಮತ್ತು ಅನುಭವದ ಪತ್ರಗಳನ್ನು (PDF) ಅಪ್ಲೋಡ್ ಮಾಡಿ.
ನಿಮ್ಮ ಇತ್ತೀಚಿನ ಬಯೋಡೇಟಾ (Resume) ಲಗತ್ತಿಸಿ.
ಹಂತ 5: ಶುಲ್ಕ ಪಾವತಿ
ಸಾಮಾನ್ಯ/OBC ಅಭ್ಯರ್ಥಿಗಳು ₹750 ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ.
SC/ST/ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಹಂತ 6: ಅಂತಿಮ ಸಲ್ಲಿಕೆ
ಅರ್ಜಿಯನ್ನು ಒಮ್ಮೆ ಮರುಪರಿಶೀಲಿಸಿ (Preview).
'Final Submit' ನೀಡಿ, ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ: 23 ಫೆಬ್ರವರಿ 2026
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನ: 15 ಮಾರ್ಚ್ 2026
- ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನ: 31 ಮಾರ್ಚ್ 2026
ಅಭ್ಯರ್ಥಿಗಳಿಗೆ ಸೂಚನೆ:
ಒಮ್ಮೆ ಶುಲ್ಕ ಪಾವತಿಸಿದರೆ ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ. ಹಾಗಾಗಿ, ಅರ್ಜಿ ಸಲ್ಲಿಸುವ ಮುನ್ನ ನೀವು ಎಲ್ಲಾ ಅರ್ಹತೆಗಳನ್ನು ಹೊಂದಿದ್ದೀರಾ ಎಂದು ಅಧಿಸೂಚನೆಯಲ್ಲಿ ಮತ್ತೊಮ್ಮೆ ಪರಿಶೀಲಿಸಿ.
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
Application End Date: 15 ಮಾರ್ಚ್ 2026





Comments