ಕೋಲ್ ಇಂಡಿಯಾದಲ್ಲಿ 667 ಹುದ್ದೆಗಳು ಖಾಲಿ – ಜೂನಿಯರ್ ಓವರ್‌ಮ್ಯಾನ್ & ಮೈನಿಂಗ್ ಸರ್ದಾರ್ ಹುದ್ದೆಗಳಿಗೆ ಬಂಪರ್ ನೇಮಕಾತಿ!
Published by: Yallamma G | Date:6 ಎಪ್ರಿಲ್ 2026

ದೇಶದ ಪ್ರತಿಷ್ಠಿತ ಸಾರ್ವಜನಿಕ ವಲಯದ ಸಂಸ್ಥೆಯಾದ'ಕೋಲ್ ಇಂಡಿಯಾ' (Coal India)ಇದೀಗ ಬರೋಬ್ಬರಿ667 'ಜೂನಿಯರ್ ಓವರ್‌ಮ್ಯಾನ್' ಮತ್ತು 'ಮೈನಿಂಗ್ ಸರ್ದಾರ್'ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ (Notification) ಹೊರಡಿಸಿದೆ. ಉತ್ತಮ ವೇತನ ಮತ್ತು ಕೇಂದ್ರ ಸರ್ಕಾರಿ ಉದ್ಯೋಗದ ಭದ್ರತೆ ಒದಗಿಸುವ ಈ ಬಂಪರ್ ನೇಮಕಾತಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಬೇಕಾದ ವಿದ್ಯಾರ್ಹತೆ (Qualification) ಮತ್ತು ವಯೋಮಿತಿ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಬನ್ನಿ, ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಸರಳವಾಗಿ ತಿಳಿಯೋಣ.
ನವದೆಹಲಿ (KPSCVaani ಜಾಬ್ ನ್ಯೂಸ್): ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ, ವಿಶೇಷವಾಗಿ ಮೈನಿಂಗ್ (ಗಣಿಗಾರಿಕೆ) ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು ಬಯಸುವ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ! ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಬರುವ 'ಕೋಲ್ ಇಂಡಿಯಾ ಲಿಮಿಟೆಡ್' (Coal India Limited) ನ ಅಂಗಸಂಸ್ಥೆಯಾದ ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ (MCL) ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಒಟ್ಟು 667 ಜೂನಿಯರ್ ಓವರ್‌ಮ್ಯಾನ್, ಮೈನಿಂಗ್ ಸರ್ದಾರ್, ಸರ್ವೇಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಭಾರತೀಯ ನಾಗರಿಕರು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿಯ ಸಂಕ್ಷಿಪ್ತ ಮಾಹಿತಿ (Quick Overview)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕಟ್-ಆಫ್ ದಿನಾಂಕ (06/ಏಪ್ರಿಲ್/2026) ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು.
ಸಾಮಾನ್ಯ (UR) ಹಾಗೂ EWS ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷಗಳು.
ವಯೋಮಿತಿ ಸಡಿಲಿಕೆ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭರ್ಜರಿ ಮೂಲ ವೇತನ (Basic Pay) ನೀಡಲಾಗುತ್ತದೆ:
ಈ ನೇಮಕಾತಿಯಲ್ಲಿ ಯಾವುದೇ ವೈಯಕ್ತಿಕ ಸಂದರ್ಶನ (Personal Interview) ಇರುವುದಿಲ್ಲ. ಕೇವಲ ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer Based Test - CBT) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಮಾರ್ಕಿಂಗ್ (No Negative Marking) ಇರುವುದಿಲ್ಲ ಎಂಬುದು ಮತ್ತೊಂದು ಪ್ಲಸ್ ಪಾಯಿಂಟ್!
ಅರ್ಜಿ ಶುಲ್ಕ (Application Fee)
KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ (KPSCVaani ಜಾಬ್ ನ್ಯೂಸ್): ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ, ವಿಶೇಷವಾಗಿ ಮೈನಿಂಗ್ (ಗಣಿಗಾರಿಕೆ) ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು ಬಯಸುವ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ! ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಬರುವ 'ಕೋಲ್ ಇಂಡಿಯಾ ಲಿಮಿಟೆಡ್' (Coal India Limited) ನ ಅಂಗಸಂಸ್ಥೆಯಾದ ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ (MCL) ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಒಟ್ಟು 667 ಜೂನಿಯರ್ ಓವರ್‌ಮ್ಯಾನ್, ಮೈನಿಂಗ್ ಸರ್ದಾರ್, ಸರ್ವೇಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಭಾರತೀಯ ನಾಗರಿಕರು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿಯ ಸಂಕ್ಷಿಪ್ತ ಮಾಹಿತಿ (Quick Overview)
- ಸಂಸ್ಥೆಯ ಹೆಸರು: ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ (MCL - ಕೋಲ್ ಇಂಡಿಯಾ ಲಿಮಿಟೆಡ್ ಅಧೀನ ಸಂಸ್ಥೆ)
- ಒಟ್ಟು ಹುದ್ದೆಗಳು: 667 ಹುದ್ದೆಗಳು
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮಾತ್ರ (Online Mode Only)
- ಅಧಿಕೃತ ವೆಬ್‌ಸೈಟ್: https://mahanadicoal.in
- ಹುದ್ದೆಗಳ ವಿವರಣೆ (Vacancy Details)
- ಮೈನಿಂಗ್ ಸರ್ದಾರ್ (Mining Sirdar): 448 ಹುದ್ದೆಗಳು
- ಜೂನಿಯರ್ ಓವರ್‌ಮ್ಯಾನ್ (Jr. Overman): 192 ಹುದ್ದೆಗಳು
- ಸರ್ವೇಯರ್ (Surveyor): 24 ಹುದ್ದೆಗಳು
- ಟೆಕ್ನಿಷಿಯನ್ - ಪೆಥಾಲಜಿ (Technician - Pathology): 02 ಹುದ್ದೆಗಳು
- ಭಾಷಾಂತರಕಾರರು (Translator OL): 01 ಹುದ್ದೆಗಳು
- ಮೈನಿಂಗ್ ಸರ್ದಾರ್ / ಜೂನಿಯರ್ ಓವರ್‌ಮ್ಯಾನ್ / ಸರ್ವೇಯರ್: ದ್ವಿತೀಯ ಪಿಯುಸಿ (10+2) ಅಥವಾ ಮೈನಿಂಗ್ ಇಂಜಿನಿಯರಿಂಗ್/ಸರ್ವೇಯಿಂಗ್‌ನಲ್ಲಿ ಡಿಪ್ಲೊಮಾ / ಡಿಗ್ರಿ ಪೂರ್ಣಗೊಳಿಸಿರಬೇಕು. ಇದರೊಂದಿಗೆ DGMS ನಿಂದ ಮಾನ್ಯತೆ ಪಡೆದ ಸಂಬಂಧಪಟ್ಟ Competency Certificate, ಫಸ್ಟ್ ಏಡ್ (First Aid) ಮತ್ತು ಗ್ಯಾಸ್ ಟೆಸ್ಟಿಂಗ್ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
- ಇತರೆ ಹುದ್ದೆಗಳಿಗೆ: ಹುದ್ದೆಗಳಿಗೆ ಅನುಗುಣವಾಗಿ ಬಿ.ಎ. (ಹಿಂದಿ ಮತ್ತು ಇಂಗ್ಲಿಷ್) ಅಥವಾ ಪೆಥಾಲಜಿಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕಟ್-ಆಫ್ ದಿನಾಂಕ (06/ಏಪ್ರಿಲ್/2026) ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು.
ಸಾಮಾನ್ಯ (UR) ಹಾಗೂ EWS ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷಗಳು.
ವಯೋಮಿತಿ ಸಡಿಲಿಕೆ:
- ಒಬಿಸಿ (OBC-NCL) ಅಭ್ಯರ್ಥಿಗಳಿಗೆ 3 ವರ್ಷ,
- ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷ
- ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
- ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
- ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ .
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭರ್ಜರಿ ಮೂಲ ವೇತನ (Basic Pay) ನೀಡಲಾಗುತ್ತದೆ:
- ಸರ್ವೇಯರ್ ಹುದ್ದೆಗಳಿಗೆ ಮಾಸಿಕ ₹51,103.12/-
- ಜೂನಿಯರ್ ಓವರ್‌ಮ್ಯಾನ್, ಮೈನಿಂಗ್ ಸರ್ದಾರ್ ಹಾಗೂ ಟೆಕ್ನಿಷಿಯನ್ ಹುದ್ದೆಗಳಿಗೆ ಮಾಸಿಕ ₹47,330.25/-
- ಭಾಷಾಂತರಕಾರರ ಹುದ್ದೆಗಳಿಗೆ ಮಾಸಿಕ ₹41,966.51/-
ಈ ನೇಮಕಾತಿಯಲ್ಲಿ ಯಾವುದೇ ವೈಯಕ್ತಿಕ ಸಂದರ್ಶನ (Personal Interview) ಇರುವುದಿಲ್ಲ. ಕೇವಲ ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer Based Test - CBT) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಮಾರ್ಕಿಂಗ್ (No Negative Marking) ಇರುವುದಿಲ್ಲ ಎಂಬುದು ಮತ್ತೊಂದು ಪ್ಲಸ್ ಪಾಯಿಂಟ್!
ಅರ್ಜಿ ಶುಲ್ಕ (Application Fee)
- ಸಾಮಾನ್ಯ (UR), OBC ಮತ್ತು EWS ಅಭ್ಯರ್ಥಿಗಳಿಗೆ: ₹1180/- (₹1000 ಶುಲ್ಕ + ₹180 GST).
- SC/ST, ವಿಕಲಚೇತನರು (PwBD), ಮಾಜಿ ಸೈನಿಕರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ (ಉಚಿತ).
- ಮೊದಲನೆಯದಾಗಿ MCL ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
- ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- MCL ಜೂನಿಯರ್ ಓವರ್‌ಮ್ಯಾನ್, ಮೈನಿಂಗ್ ಸಿರ್ದಾರ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ – ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- MCL ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಕೊನೆಯದಾಗಿ MCL ನೇಮಕಾತಿ 2026 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಅಥವಾ ಹೆಚ್ಚಿನ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/ಮಾರ್ಚ್/2026 (ಬೆಳಿಗ್ಗೆ 10:00 ಗಂಟೆಗೆ)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/ಏಪ್ರಿಲ್/2026 (ರಾತ್ರಿ 11:50 ರವರೆಗೆ)
- ಕೇಂದ್ರ ಸರ್ಕಾರದ ಶಾಶ್ವತ ಉದ್ಯೋಗ
- ಉತ್ತಮ ವೇತನ + ಭದ್ರ ಭವಿಷ್ಯ
- ತಾಂತ್ರಿಕ ಅಭ್ಯರ್ಥಿಗಳಿಗೆ ಗೋಲ್ಡನ್ ಅವಕಾಶ
- ಯಾವುದೇ ಸಂದರ್ಶನ ಇಲ್ಲ
KPSCVaani ವಿಶೇಷ ಸೂಚನೆ
ಈ MCL ನೇಮಕಾತಿ 2026 ಕುರಿತಂತೆ ಅರ್ಜಿ ಲಿಂಕ್, ಸಿಲಬಸ್, ಪರೀಕ್ಷಾ ಮಾದರಿ ಮತ್ತು ಮುಂದಿನ ಅಪ್‌ಡೇಟ್ಸ್ ಪಡೆಯಲು KPSCVaani ಅನ್ನು ನಿರಂತರವಾಗಿ ಫಾಲೋ ಮಾಡಿ.KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ
Application End Date: 6 ಎಪ್ರಿಲ್ 2026
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download Official Notification
Related Tags: Degree

Comments