Loading..!

ಭಾರತ ಸರಕಾರದ ಗೃಹ ಸಚಿವಾಲಯದ ಸಶಸ್ತ್ರ ಸೀಮಾ ಬಲದಲ್ಲಿ (SSB) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Mallappa Myageri | Date:27 ನವೆಂಬರ್ 2021
not found

ಭಾರತ ಸರಕಾರದ ಗೃಹ ಸಚಿವಾಲಯದ ಸಶಸ್ತ್ರ ಸೀಮಾ ಬಲದಲ್ಲಿ (SSB) ಜೂನಿಯರ್ ಹಿಂದಿ ಅನುವಾದಕ ಇನ್‌ಸ್ಪೆಕ್ಟರ್ ಹುದ್ದೆಗಳು-03, ಪಶುವೈದ್ಯಕೀಯ ಇನ್‌ಸ್ಪೆಕ್ಟರ್ ಹುದ್ದೆಗಳು-02, ಪಶುವೈದ್ಯಕೀಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳು-07 ಮತ್ತು ರೇಡಿಯೋಗ್ರಾಫರ್ ಸಬ್ ಇನ್‌ಸ್ಪೆಕ್ಟರ್ ಹುದ್ದೆ-01 ಒಟ್ಟು 13 ಹುದ್ದೆಗಳಿಗೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕೆಳಗಿನ ಕಛೇರಿ ವಿಳಾಸಕ್ಕೆ  ದಿನಾಂಕ : 15-01-2022 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 
ಕಛೇರಿವಿಳಾಸ: 
Commandant (Pers-II), Directorate General, 
Sashastra Seema Bal, 
East Block-V, R.K. Puram, Sector-I. 
New Delhi-110066.

No. of posts:  13
Application Start Date:  26 ನವೆಂಬರ್ 2021
Application End Date:  15 ಜನವರಿ 2022
Work Location:  ALL OVER INDIA
Selection Procedure: ಇನ್‌ಸ್ಪೆಕ್ಟರ್ ಮತ್ತು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಡೆಪ್ಯುಟೇಶನ್ ಅಥವಾ ಮರು ಉದ್ಯೋಗದ ಮೂಲಕ ಆಯ್ಕೆ ಮಾಡಲಾಗುವುದು.
Age Limit:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ : 15-01-2022 ರ ಅನ್ವಯ ಗರಿಷ್ಟ 52 ವರ್ಷಗಳ ವಯಯೋಮಿತಿಯೊಳಗಿರಬೇಕು. ಜೊತೆಗೆ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆಯನ್ನು ಸಹ ನೀಡಲಾಗಿದೆ.

Pay Scale:

ಇನ್‌ಸ್ಪೆಕ್ಟರ್ ಮತ್ತು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ ಈ ಕೆಳಗಿನಂತೆ ವೇತನವನ್ನು ಪಡೆಯುವರು.
1) ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ರೂ. 44,900/- ರಿಂದ 1,42,400/- ರೂಗಳ ವೇತನವನ್ನು ಪಡೆಯುವರು.
2) ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ರೂ. 35,400/- ರಿಂದ 1,12,400/-ರೂಗಳ ವೇತನವನ್ನು ಪಡೆಯುವರು.
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

TO Download the Officeal notification

Comments