ರೈಲ್ವೇ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ 434 ಹುದ್ದೆಗಳ ನೇರ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ

ರೇಲ್ವೆ ಇಲಾಖೆಯಲ್ಲಿ 400ಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿಗೆ ಸಿದ್ಧವಾಗುತ್ತಿವೆ. ಅದೂ ನೇರ ನೇಮಕಾತಿ! ಇದು ಕೇವಲ ಉದ್ಯೋಗಾವಕಾಶವಲ್ಲ, ಭದ್ರ ಭವಿಷ್ಯಕ್ಕೆ ಒಂದು ದಾರಿ. ರೈಲ್ವೇ ನೇಮಕಾತಿ ಮಂಡಳಿ (RRB) ಅಖಿಲ ಭಾರತ ಮಟ್ಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ indianrailways.gov.in ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ, ಅಭ್ಯರ್ಥಿಗಳು ಸೆಪ್ಟೆಂಬರ್ 08, 2025 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹೌದು ಉದ್ಯೋಗ ಆಕಾಂಕ್ಷಿಗಳಿಗೆ ಇದು ಸುವರ್ಣ ಅವಕಾಶವಾಗಿದೆ, ರೈಲ್ವೆ ನೇಮಕಾತಿ ಮಂಡಳಿಯು 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಸರ್ಕಾರಿ ಉದ್ಯೋಗ ಎಂದರೆ ಸ್ಥಿರತೆ, ಭದ್ರತೆ ಮತ್ತು ಸಮಾಜದಲ್ಲಿ ಗೌರವ.
ರೈಲ್ವೆ ನೇಮಕಾತಿ ಮಂಡಳಿಯು ಜುಲೈ 2025 ರ RRB ಅಧಿಕೃತ ಅಧಿಸೂಚನೆಯಡಿಯಲ್ಲಿ ನರ್ಸಿಂಗ್ ಸೂಪರಿಂಟೆಂಡೆಂಟ್, ಡಯಾಲಿಸಿಸ್ ತಂತ್ರಜ್ಞ, ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕರು, ಔಷಧಿಕಾರ, ರೇಡಿಯೋಗ್ರಾಫರ್ ಮತ್ತು ಪ್ರಯೋಗಾಲಯ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 434 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ.
ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇಲ್ಲಿ ನಾವು ಪ್ರತಿ ಹುದ್ದೆಯ ವಿವರ, ಅರ್ಹತೆಗಳು, ವೇತನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಿದ್ದೇವೆ. ಆದರೆ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ ಮತ್ತು ನಿಮಗೆ ಯಾವುದು ಸರಿಹೊಂದುತ್ತದೆ ಎಂಬುದನ್ನು ತಿಳಿಯುವ ಮುನ್ನ, ಈ ನೇಮಕಾತಿಗೆ ಇರುವ ಒಂದು ವಿಶೇಷ ನಿಯಮದ ಬಗ್ಗೆ ತಿಳಿಯಬೇಕಿದೆ...
📌RRB ಹುದ್ದೆಯ ಅಧಿಸೂಚನೆ
🏛️ ಸಂಸ್ಥೆಯ ಹೆಸರು : ರೈಲ್ವೆ ನೇಮಕಾತಿ ಮಂಡಳಿ ( RRB )
🧾 ಹುದ್ದೆಗಳ ಸಂಖ್ಯೆ: 434
📍 ಉದ್ಯೋಗ ಸ್ಥಳ: ಭಾರತದಾದ್ಯಂತ
👨💼 ಹುದ್ದೆಯ ಹೆಸರು: ಫಾರ್ಮಾಸಿಸ್ಟ್, ನರ್ಸಿಂಗ್ ಸೂಪರಿಂಟೆಂಡೆಂಟ್
💰 ಸ್ಟೈಫಂಡ್: ರೈಲ್ವೆ ನೇಮಕಾತಿ ಮಂಡಳಿ ( RRB ) ನಿಯಮಗಳ ಪ್ರಕಾರ
📌 ಹುದ್ದೆಗಳ ವಿವರ : 434
🔹 ನರ್ಸಿಂಗ್ ಸೂಪರಿಂಟೆಂಡೆಂಟ್ : 272
🔹 ಡಯಾಲಿಸಿಸ್ ತಂತ್ರಜ್ಞ : 4
🔹 ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕರು : 33
🔹 ಔಷಧಿಕಾರ : 105
🔹 ರೇಡಿಯೋಗ್ರಾಫರ್ : 4
🔹 ಇಸಿಜಿ ತಂತ್ರಜ್ಞ : 4
🔹 ಪ್ರಯೋಗಾಲಯ ಸಹಾಯಕ : 12
💰 ಮಾಸಿಕ ವೇತನ :ರೈಲ್ವೆ ನೇಮಕಾತಿ ಮಂಡಳಿ ( RRB ) ನಿಯಮಗಳ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
=> ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ : ರೂ.44900/-
=> ಡಯಾಲಿಸಿಸ್ ತಂತ್ರಜ್ಞ ಮತ್ತು ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕರು ಹುದ್ದೆಗಳಿಗೆ : ರೂ.35400/-
=> ಔಷಧಿಕಾರ matuರೇಡಿಯೋಗ್ರಾಫರ್ ಹುದ್ದೆಗಳಿಗೆ : ರೂ.29200/-
=> ಇಸಿಜಿ ತಂತ್ರಜ್ಞ ಹುದ್ದೆಗಳಿಗೆ : ರೂ.25500/-
=> ಪ್ರಯೋಗಾಲಯ ಸಹಾಯಕ ಹುದ್ದೆಗಳಿಗೆ : ರೂ.21700/-
💼 ಆಯ್ಕೆ ಪ್ರಕ್ರಿಯೆ :
✅ ಆನ್‌ಲೈನ್ ಲಿಖಿತ ಪರೀಕ್ಷೆ (CBT)
✅ ಪ್ರಾಯೋಗಿಕ/ಶಾರೀರಿಕ ತೇರ್ಗಡೆ (ಹುದ್ದೆ ಪ್ರಕಾರ)
✅ ದಾಖಲೆ ಪರಿಶೀಲನೆ
✅ ಮೆರಿಟ್ ಪಟ್ಟಿ ಆಧಾರದ ನೇಮಕಾತಿ
🎂 ವಯೋಮಿತಿ :ರೈಲ್ವೆ ನೇಮಕಾತಿ ಮಂಡಳಿಯ ನಿಯಮಗಳ ಪ್ರಕಾರ ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.
📝 ಅರ್ಜಿ ಸಲ್ಲಿಸುವ ವಿಧಾನ :
=> ಮೊದಲನೆಯದಾಗಿ RRB ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
=> ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
=> RRB ಫಾರ್ಮಾಸಿಸ್ಟ್, ನರ್ಸಿಂಗ್ ಸೂಪರಿಂಟೆಂಡೆಂಟ್ ಅರ್ಜಿ ಆನ್‌ಲೈನ್ - ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
=> ಆರ್‌ಆರ್‌ಬಿ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
=> ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
=> ಕೊನೆಗೆ RRB ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಅಥವಾ ಹೆಚ್ಚಿನ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.
📅 ಪ್ರಮುಖ ದಿನಾಂಕಗಳು :
✅ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09-08-2025
✅ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-ಸೆಪ್ಟೆಂಬರ್-2025
📢 ಈ ನೇಮಕಾತಿಯು ಸಂಪೂರ್ಣ ನೇರ ನೇಮಕಾತಿ (Direct Recruitment) ಆಗಿದ್ದು, ಲಘು ಅರ್ಹತೆಯೊಂದಿಗೆ ಉದ್ಯೋಗ ಪಡೆಯುವ ಅಪರೂಪದ ಅವಕಾಶವಾಗಿದೆ.
🎯 ಸೂಚನೆ: ನೇಮಕಾತಿಗೆ ಸಿದ್ಧತೆ ಪ್ರಾರಂಭಿಸಿ, ಹಿಂದಿನ ಪ್ರಶ್ನೆಪತ್ರಿಕೆ, ಸಿಲೆಬಸ್ ಅಧ್ಯಯನ ಮಾಡಿ. ಅಧಿಕೃತ ಅಧಿಸೂಚನೆ ಪ್ರಕಟವಾದ ತಕ್ಷಣ ಅರ್ಜಿ ಸಲ್ಲಿಸಿ.
Comments