Loading..!

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Hanamant Katteppanavar | Date:29 ನವೆಂಬರ್ 2020
not found
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ವಿವಿಧ ಜಿಲ್ಲೆಯಲ್ಲಿ ಖಾಲಿಯಿರುವ 25 ಸಮಾಲೋಚಕ ಮತ್ತು ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 30,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಮೇಲಿನ ಎಲ್ಲಾ ಹುದ್ದೆಗಳು ಗುತ್ತಿಗೆ ಆಧಾರದ ಒಂದು ವರ್ಷದ ತಾತ್ಕಾಲಿಕ ಹುದ್ದೆಗಳಾಗಿವೆ. ಹಾಗೂ ಅಭ್ಯರ್ಥಿಗಳ ಕಾರ್ಯ ವೈಖರಿಯನ್ನಾಧರಿಸಿ ಮುಂದೆ ಕೆಲಸದ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯಿರುತ್ತದೆ.
No. of posts:  25
Application End Date:  30 ನವೆಂಬರ್ 2020
Selection Procedure:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:

- ಹುದ್ದೆಗಳಿಗೆ ಅನುಸಾರವಾಗಿ ಪದವಿ, ಸ್ನಾತಕೋತ್ತರ ಪದವಿ, ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್/ಸಿವಿಲ್ ಇಂಜಿನಿಯರಿಂಗ್, ಎಂಸಿಎ/ಎಂ.ಎಸ್ಸಿ/ಬಿ.ಇ, ಎಂ.ಎಸ್.ಡಬ್ಲ್ಯೂ/ಎಂಎ  

ವಿದ್ಯಾರ್ಹತೆಯನ್ನು ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- ಹುದ್ದೆಗಳಿಗೆ ತಕ್ಕಂತೆ 3 ರಿಂದ 8 ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.

Age Limit:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ- 45 ವರ್ಷ ವಯೋಮಿತಿಯನ್ನು ಮೀರಿರಬಾರದು
Employment Type: FULL_TIME
Hiring Organization: KPSC Vaani https://www.kpscvaani.com
Work Location: ಕರ್ನಾಟಕ, KA,
To Download the official notification
Related Tags: Degree PG

Comments