Loading..!

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ PUC ಪಾಸಾದ ಅಭ್ಯರ್ಥಿಗಳಿಂದ ಜವಾನ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Surekha Halli | Date:11 ಫೆಬ್ರುವರಿ 2021
not found
ಭಾರತದ ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬೆಂಗಳೂರು ಪೂರ್ವ, ವೃತ್ತ ಕಚೇರಿಯ ಅಡಿಯ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 25 ಜವಾನ ನೌಕರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ : 01-03-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

 

ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅರ್ಜಿಯೊಂದಿಗೆ ಸ್ವವಿವರಗಳುಳ್ಳ ಎಲ್ಲ ದಾಖಲಾತಿಗಳನ್ನು ಈ ಕೆಳಗೆ ನೀಡಿರುವ ವಿಳಾಸಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ತಾವೇ ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ :

ಪಂಜಾಬ್ ನ್ಯಾಷನಲ್ ಬ್ಯಾಂಕ್, 

ಹೆಚ್.ಆರ್.ವಿಭಾಗ, ವೃತ್ತ ಕಚೇರಿ-ಬೆಂಗಳೂರು ಪೂರ್ವ, 

ರಹೇಜಾ ಟವರ್ಸ್, ಎಂ.ಜಿ ರಸ್ತೆ, 

ಬೆಂಗಳೂರು - 560001 
No. of posts:  25
Application Start Date:  10 ಫೆಬ್ರುವರಿ 2021
Application End Date:  1 ಮಾರ್ಚ್ 2021
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12 ನೇ ತರಗತಿ (PUC) ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
Age Limit:
ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿಯನ್ನು ಹೊಂದಿರಬೇಕು.

- ಕನಿಷ್ಠ 18 ವರ್ಷ  

- ಗರಿಷ್ಠ 24 ವರ್ಷ ಮೀರಿರಬಾರದು. 

* SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ಇದರೊಂದಿಗೆ ಅವರುಗಳು ಸೈನಿಕ ಸೇವೆಯ ಅವಧಿಯನ್ನು ಪರಿಗಣಿಸಲಾಗುವುದು.
- ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.

To Download Press Notification

Comments

Chethan M.S ಫೆಬ್ರ. 12, 2021, 4:47 ಅಪರಾಹ್ನ
Manju Naik L M Manju ಫೆಬ್ರ. 20, 2021, 9:49 ಅಪರಾಹ್ನ