NCERT ಯಲ್ಲಿ ಕೆಲಸ ಮಾಡುವ ಸುವರ್ಣಾವಕಾಶ! 117 ಬೋಧಕ ಹುದ್ದೆಗಳ ಭರ್ತಿ; ಲಕ್ಷಕ್ಕೂ ಅಧಿಕ ವೇತನ - ಇಂದೇ ಅರ್ಜಿ ಸಲ್ಲಿಸಿ.

ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಗ್ರಂಥಾಲಯ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಸೇರಿದಂತೆ ಒಟ್ಟು 117 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬೋಧನಾ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಅಪರೂಪದ ಸುವರ್ಣಾವಕಾಶವಾಗಿದೆ.
ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಅಗತ್ಯ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪ್ರತಿಷ್ಠಿತ ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಲು ಅಥವಾ ಉನ್ನತಿಗೇರಿಸಲು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.
NCERT ಹುದ್ದೆಯ ಅಧಿಸೂಚನೆ:
ಸಂಸ್ಥೆ : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)
ಹುದ್ದೆಗಳ ಹೆಸರು : ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಲೈಬ್ರೇರಿಯನ್
ಒಟ್ಟು ಹುದ್ದೆಗಳು : 117
ಅರ್ಜಿ ಸಲ್ಲಿಸಲು ಕೊನೆಯ ದಿನ : 20 ಫೆಬ್ರವರಿ 2026 (ಸಂಜೆ 5:00 ರವರೆಗೆ)
ಉದ್ಯೋಗ ಸ್ಥಳ: ನವದೆಹಲಿ ಕೇಂದ್ರ ಕಚೇರಿ ಸೇರಿದಂತೆ ಮೈಸೂರು, ಅಜ್ಮೀರ್, ಭೋಪಾಲ್, ಭುವನೇಶ್ವರ ಮತ್ತು ಶಿಲ್ಲಾಂಗ್‌ನಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳಿಗೆ (RIE) ಸಂಬಂಧಿಸಿದೆ.
ಹುದ್ದೆಗಳ ವಿವರ :
ಪ್ರೊಫೆಸರ್ (Professor)
ಅಸೋಸಿಯೇಟ್ ಪ್ರೊಫೆಸರ್ (Associate Professor)
ಅಸಿಸ್ಟೆಂಟ್ ಪ್ರೊಫೆಸರ್ (Assistant Professor)
ಡೆಪ್ಯುಟಿ ಲೈಬ್ರೇರಿಯನ್ (Deputy Librarian)
ಅಸಿಸ್ಟೆಂಟ್ ಲೈಬ್ರೇರಿಯನ್ (Assistant Librarian)
ವಿಷಯಗಳು: ಗಣಿತ, ಇತಿಹಾಸ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಮಾಜಶಾಸ್ತ್ರ, ಕನ್ನಡ (ತೆಲುಗು ಸೇರಿದಂತೆ ಇತರ ಭಾಷೆಗಳು), ಕಲಾ ಶಿಕ್ಷಣ, ಕಂಪ್ಯೂಟರ್ ವಿಜ್ಞಾನ ಇತ್ಯಾದಿ.
ಶೈಕ್ಷಣಿಕ ಅರ್ಹತೆ ಮತ್ತು ಮಾನದಂಡಗಳು:
1. ಅಸಿಸ್ಟೆಂಟ್ ಪ್ರೊಫೆಸರ್:ಸಂಬಂಧಿತ ವಿಷಯದಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತುNET/SLET/SETಉತ್ತೀರ್ಣರಾಗಿರಬೇಕು ಅಥವಾ Ph.D. ಹೊಂದಿರಬೇಕು.
2.ಅಸೋಸಿಯೇಟ್ ಪ್ರೊಫೆಸರ್:Ph.D. ಜೊತೆಗೆ ಕನಿಷ್ಠ 8 ವರ್ಷಗಳ ಬೋಧನಾ/ಸಂಶೋಧನಾ ಅನುಭವ ಅಗತ್ಯ.
3.ಪ್ರೊಫೆಸರ್:Ph.D. ಮತ್ತು ಕನಿಷ್ಠ 10 ವರ್ಷಗಳ ಉನ್ನತ ಮಟ್ಟದ ಬೋಧನಾ ಅನುಭವ ಹಾಗೂ ಸಂಶೋಧನಾ ಪ್ರಬಂಧಗಳ ಪ್ರಕಟಣೆ ಕಡ್ಡಾಯ.
ವೇತನ ಶ್ರೇಣಿ (Salary Structure):
ಆಯ್ಕೆಯಾದ ಅಭ್ಯರ್ಥಿಗಳಿಗೆ ಯುಜಿಸಿ (UGC) ಮತ್ತು 7ನೇ ವೇತನ ಆಯೋಗದ ಅನ್ವಯ ಆಕರ್ಷಕ ವೇತನ ದೊರೆಯಲಿದೆ:
ಪ್ರೊಫೆಸರ್: ರೂ. 1,44,200 (ಲೆವೆಲ್ 14)
ಅಸೋಸಿಯೇಟ್ ಪ್ರೊಫೆಸರ್ / ಡೆಪ್ಯುಟಿ ಲೈಬ್ರೇರಿಯನ್: ರೂ. 1,31,400 (ಲೆವೆಲ್ 13A)
ಅಸಿಸ್ಟೆಂಟ್ ಪ್ರೊಫೆಸರ್ / ಅಸಿಸ್ಟೆಂಟ್ ಲೈಬ್ರೇರಿಯನ್: ರೂ. 57,700 (ಲೆವೆಲ್ 10)
ಆಯ್ಕೆ ವಿಧಾನ (Selection Process)
ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ (Shortlisting) ಮಾಡಲಾಗುತ್ತದೆ.
ಶಾರ್ಟ್‌ಲಿಸ್ಟ್ ಆದವರಿಗೆ ಮಾತ್ರ ನೇರ ಸಂದರ್ಶನ (Interview) ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ (Application Fee)
ಸಾಮಾನ್ಯ (UR), OBC, EWS ಅಭ್ಯರ್ಥಿಗಳಿಗೆ: ರೂ. 1000/-
ಮಹಿಳೆಯರು, SC, ST ಮತ್ತು PwD ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ (ಉಚಿತ).
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 31 ಜನವರಿ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಫೆಬ್ರವರಿ 2026 (ಸಂಜೆ 5 ಗಂಟೆ)
ಅರ್ಹತೆಯ ಅಂತಿಮ ದಿನಾಂಕ: ನಿಮ್ಮ ಎಲ್ಲಾ ವಿದ್ಯಾರ್ಹತೆ ಮತ್ತು ದಾಖಲೆಗಳು 20-02-2026 ರ ಒಳಗೆ ಪೂರ್ಣಗೊಂಡಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:
1. ಎನ್‌ಸಿಇಆರ್‌ಟಿಯ ಅಧಿಕೃತ ವೆಬ್‌ಸೈಟ್ www.ncert.nic.in ಗೆ ಭೇಟಿ ನೀಡಿ.
2. 'Announcements' → 'Vacancy' → 'Academic' ವಿಭಾಗಕ್ಕೆ ಹೋಗಿ.
3. 'Apply Online' ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಿ.
4. ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿ.
5. ಅರ್ಜಿಯನ್ನು submit ಮಾಡಿದ ನಂತರ ಅದರ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಿರಂತರವಾಗಿKPSCVaani.comಗಮನಿಸುತ್ತಿರಿ.





Comments