SSLC ಯಿಂದ ಪದವಿ ಮುಗಿಸಿದವರಿಗೆ ಬೆಂಗಳೂರು ನಿಮ್ಹಾನ್ಸ್‌ನಲ್ಲಿ ಬೃಹತ್ ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ!

SSLC ಯಿಂದ ಪದವಿ ಮುಗಿಸಿದವರಿಗೆ ಬೆಂಗಳೂರು ನಿಮ್ಹಾನ್ಸ್‌ನಲ್ಲಿ ಬೃಹತ್ ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ!
Published by Yallamma G
11 ಫೆಬ್ರವರಿ 2026 Others Important
Tags: Degree
ನಮಸ್ಕಾರ KPSCVaani ಓದುಗರಿಗೆ! ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS), ಬೆಂಗಳೂರು ಇಲ್ಲಿ ಗ್ರೂಪ್ 'ಬಿ' ಮತ್ತು 'ಸಿ' ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (Advt No. NIMH/Rect/Group B&C/ADVT-3/2025-26) ಬಿಡುಗಡೆ ಮಾಡಲಾಗಿದೆ.

ಈ ಅಧಿಸೂಚನೆಯಡಿಯಲ್ಲಿ ಬೆಂಗಳೂರಿನಲ್ಲಿ ಜೂನಿಯರ್ ಸೆಕ್ರೆಟರಿಯಲ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಗ್ರೇಡ್ -II, ಅಸಿಸ್ಟೆಂಟ್ ಇನ್ಸ್ಟ್ರಕ್ಟರ್ (ಪಂಚಕರ್ಮ), ಲೈಬ್ರರಿ ಅಸಿಸ್ಟೆಂಟ್, ಇಇಜಿ (EEG) ಟೆಕ್ನಿಷಿಯನ್ ಮತ್ತು ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 52 ಖಾಲಿ ಹುದ್ದೆಗಳಿದ್ದು, 10ನೇ ತರಗತಿ (SSLC), ಡಿಪ್ಲೊಮಾ, ಪದವಿ, ಮತ್ತು ಸ್ನಾತಕೋತ್ತರ ಪದವಿ ಮುಗಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.   

                                ಅರ್ಹತೆ ಹೊಂದಿರುವ ಮತ್ತು ಉದ್ಯೋಗ ಬಯಸುವ ಆಸಕ್ತ ಅಭ್ಯರ್ಥಿಗಳು ಈ ಅಮೂಲ್ಯ ಅವಕಾಶವನ್ನು ಬಳಸಿಕೊಂಡು ತಮ್ಮ ವೃತ್ತಿಜೀವನವನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಕಟ್ಟಿಕೊಳ್ಳಬಹುದು. ಬೆಂಗಳೂರು - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 04-03-2026 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ .

                            ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆಫ್ ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ಅಧಿಕೃತ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿ ವಿವರಗಳು: ಒಂದು ನೋಟದಲ್ಲಿ
  • ಸಂಸ್ಥೆ: NIMHANS, Bengaluru (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ).
  • ಒಟ್ಟು ಹುದ್ದೆಗಳು: 52.
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03.02.2026.
  • ಕೊನೆಯ ದಿನಾಂಕ: 04.03.2026 (ಸಂಜೆ 4:30 ರವರೆಗೆ).
  • ಅರ್ಜಿ ಸಲ್ಲಿಸುವ ವಿಧಾನ: ಕೇವಲ ಆನ್‌ಲೈನ್ (Online mode only).
ಹುದ್ದೆಗಳ ವಿವರಗಳು (Vacancy Details)
ಒಟ್ಟು 52 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನಿಮ್ಹಾನ್ಸ್ ಒಟ್ಟು 11 ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ, ಹುದ್ದೆಯ ಹೆಸರು ಮತ್ತು ಲಭ್ಯವಿರುವ ಸಂಖ್ಯೆ ಈ ಕೆಳಗಿನಂತಿದೆ:


ಶೈಕ್ಷಣಿಕ ಅರ್ಹತೆ (Educational Qualification)
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:
  • JSA/ಸ್ಟೆನೋಗ್ರಾಫರ್: ಯಾವುದೇ ಪದವಿ ಮತ್ತು ಕಂಪ್ಯೂಟರ್ ತರಬೇತಿ.
  • ಹಾಸ್ಪಿಟಲ್ ಅಸಿಸ್ಟೆಂಟ್/ಬಾರ್ಬರ್: SSLC ಅಥವಾ 10ನೇ ತರಗತಿ ತೇರ್ಗಡೆ.
  • ತಾಂತ್ರಿಕ ಹುದ್ದೆಗಳು: ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಅಥವಾ ಪದವಿ/ಸ್ನಾತಕೋತ್ತರ ಪದವಿ.
ವಯೋಮಿತಿ: ಗರಿಷ್ಠ ವಯೋಮಿತಿ ಹುದ್ದೆಗಳಿಗನುಸಾರ 27, 30, ಮತ್ತು 35 ವರ್ಷಗಳಾಗಿವೆ.
ವಯೋಮಿತಿ ಸಡಿಲಿಕೆ: ಸರ್ಕಾರದ ನಿಯಮಾವಳಿಗಳ ಪ್ರಕಾರ 
  • ಒಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷ
  • ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. 
  • PwBD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಶುಲ್ಕದ ವಿವರ (Application Fee)
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು:


ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಎರಡು ಹಂತಗಳಲ್ಲಿ ನಡೆಯಲಿದೆ:
ಹಂತ 1 (Stage-I): 100 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳ (MCQ) ಆಧಾರಿತ ಪರೀಕ್ಷೆ (ಸಮಯ: 90 ನಿಮಿಷಗಳು). ತಪ್ಪು ಉತ್ತರಗಳಿಗೆ 0.25 ಅಂಕಗಳ ನಕಾರಾತ್ಮಕ ಮೌಲ್ಯಮಾಪನ (Negative marking) ಇರುತ್ತದೆ.
ಹಂತ 2 (Stage-II): ಕೌಶಲ್ಯ ಪರೀಕ್ಷೆ (Skill Test) ಹಾಗೂ ದಾಖಲಾತಿ ಪರಿಶೀಲನೆ (Document Verification).

ಅರ್ಜಿ ಸಲ್ಲಿಸುವ ಹಂತಗಳು : 
ಹಂತ 1: ಅಧಿಕೃತ ಲಿಂಕ್‌ಗೆ ಭೇಟಿ ನೀಡಿ
ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಈ ಅಧಿಕೃತ ಲಿಂಕ್: https://nimhans.Intedutech.com/job-openings/recruitment-section ಗೆ ಭೇಟಿ ನೀಡಿ.
ಹಂತ 2: ಸೂಚನೆಗಳನ್ನು ಓದಿ ಮತ್ತು ಅರ್ಹತೆ ಪರಿಶೀಲಿಸಿ
ಹಂತ 3: ಆನ್‌ಲೈನ್ ಅರ್ಜಿ ಭರ್ತಿ
ಹಂತ 4: ಅಗತ್ಯ ದಾಖಲೆಗಳ ಅಪ್‌ಲೋಡ್ (ಅನ್ವಯಿಸಿದರೆ)
ಹಂತ 5: ಅರ್ಜಿ ಶುಲ್ಕ ಪಾವತಿ
ಹಂತ 6: ಅರ್ಜಿಯ ಪ್ರಿಂಟ್ ಔಟ್ ಮತ್ತು ದಾಖಲೆಗಳ ಕಾಯ್ದಿರಿಸುವಿಕೆ : ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಭರ್ತಿ ಮಾಡಿದ ಅರ್ಜಿಯ ಕಾಪಿ (Application Form) ಮತ್ತು ಶುಲ್ಕ ಪಾವತಿಸಿದ ರಸೀದಿಯನ್ನು (Proof of payment) ನಿಮ್ಮ ಮುಂದಿನ ರೆಫರೆನ್ಸ್‌ಗಾಗಿ ಕಾಯ್ದಿರಿಸಿಕೊಳ್ಳಿ.

ಪ್ರಮುಖ ದಿನಾಂಕಗಳು (Important Dates)
  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 03.02.2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04.03.2026 (ಸಂಜೆ 4:30ರವರೆಗೆ).
  • ಪರೀಕ್ಷಾ ದಿನಾಂಕ: ಏಪ್ರಿಲ್ ಅಥವಾ ಮೇ 2026 (ತಾತ್ಕಾಲಿಕ).
ಪ್ರಮುಖ ಮಾಹಿತಿ : 
  • ಆನ್‌ಲೈನ್ ಮೂಲಕ ಮಾತ್ರ: ಅರ್ಹ ಅಭ್ಯರ್ಥಿಗಳು ಕೇವಲ ಆನ್‌ಲೈನ್ (ON-LINE) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
  • ವೆಬ್‌ಸೈಟ್ ಲಿಂಕ್: ಅರ್ಜಿ ಸಲ್ಲಿಸಲು ಈ ಅಧಿಕೃತ ಲಿಂಕ್‌ಗೆ ಭೇಟಿ ನೀಡಿ: https://nimhans.Intedutech.com/job-openings/recruitment-section.
  • ಅರ್ಜಿ ಸಲ್ಲಿಕೆ ದಿನಾಂಕ: ಆನ್‌ಲೈನ್ ಅರ್ಜಿ ಸಲ್ಲಿಕೆಯು 03.02.2026 ರಂದು ಪ್ರಾರಂಭವಾಗಿದ್ದು, 04.03.2026 ರ ಸಂಜೆ 4:30 ರವರೆಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶವಿರುತ್ತದೆ.
  • ಭೌತಿಕ ದಾಖಲೆಗಳು ಬೇಡ: ಆನ್‌ಲೈನ್ ಅರ್ಜಿ ನಮೂನೆ ಸೇರಿದಂತೆ ಯಾವುದೇ ದಾಖಲೆಗಳನ್ನು ಭೌತಿಕವಾಗಿ (Physical form) ಕಚೇರಿಗೆ ಅಂಚೆ ಮೂಲಕ ಕಳುಹಿಸುವ ಅಗತ್ಯವಿಲ್ಲ.
  • ಶುಲ್ಕ ಪಾವತಿ: ನಿಗದಿತ ಅರ್ಜಿ ಶುಲ್ಕವನ್ನು ಅರ್ಜಿ ನಮೂನೆಯಲ್ಲಿ ಒದಗಿಸಲಾದ ಆನ್‌ಲೈನ್ ವಿಧಾನದ ಮೂಲಕವೇ ಪಾವತಿಸಬೇಕು.
  • ಪ್ರತಿ ಇಟ್ಟುಕೊಳ್ಳಿ: ಅರ್ಜಿ ಸಲ್ಲಿಸಿದ ನಂತರ, ಆನ್‌ಲೈನ್ ಅರ್ಜಿಯ ಪ್ರತಿಯನ್ನು (Application Form copy) ಮತ್ತು ಶುಲ್ಕ ಪಾವತಿಸಿದ ರಸೀದಿಯನ್ನು (Proof of payment) ನಿಮ್ಮ ಮುಂದಿನ ಉಪಯೋಗಕ್ಕಾಗಿ ಕಡ್ಡಾಯವಾಗಿ ಕಾಯ್ದಿರಿಸಿಕೊಳ್ಳಿ.
ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ! ಹೆಚ್ಚಿನ ಉದ್ಯೋಗ ಸುದ್ದಿಗಳಿಗಾಗಿ KPSCVaani ಫಾಲೋ ಮಾಡಿ.
Job Overview
End Date
4 ಮಾರ್ಚ್ 2026
Employment Type
FULL_TIME
Organization
KPSC Vaani (Website)
Location
KA,
To download official notification
Related Tags: Degree
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.