Loading..!

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT) ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
| Date:6 ನವೆಂಬರ್ 2019
not found
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯಲ್ಲಿ (NCERT) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ

✍ ಹುದ್ದೆಗಳ ವಿವರ
# ಪಬ್ಲಿಕೇಷನ್ ಮುಖ್ಯಸ್ಥರು : 01
# ಸಂಪಾದಕರು : 02
# ಸಹಾಯಕ ಸಂಪಾದಕರು : 03
# ಸಂಪಾದಕೀಯ ಸಹಾಯಕರು : 01
# ಪ್ರೊಫೆಶನಲ್ ಅಸಿಸ್ಟಂಟ್ : 01
# ಕಂಪ್ಯೂಟರ್ ಆಪರೇಟರ್ : 01
# ಸ್ಟೋರ್ ಕೀಪರ್ : 04
# ಪ್ರೂಫ್‌ ರೀಡರ್ : 02
ಒಟ್ಟು ಹುದ್ದೆಗಳ ಸಂಖ್ಯೆ: 15

ಅರ್ಜಿ ಸಲ್ಲಿಕೆ ವಿಧಾನ : ಆಫ್‌ಲೈನ್‌ ಮೂಲಕ ಅಪ್ಲಿಕೇಶನ್‌ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಕೆಳಗಿನ ವಿಳಾಸಕ್ಕೆ, ಅರ್ಜಿ ಸಲ್ಲಿಕೆಗೆ ನೀಡಲಾಗಿರುವ ಕೊನೆಯ ದಿನದೊಳಗೆ ತಲುಪುವಂತೆ ಕಳುಹಿಸಬೇಕು. ಅರ್ಜಿಯನ್ನು ಎನ್‌ಸಿಇಆರ್‌ಟಿ'ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಬಹುದು. ಅಥವಾ ಕೆಳಗೆ ನೀಡಲಾದ ಅಧಿಸೂಚನೆ ಲಿಂಕ್‌ ಮೇಲೆ ಕ್ಲಿಕ್ ಮಾಡಿ, ಅರ್ಜಿಯ ಫಾರ್ಮ್ಯಾಟ್‌ ನಲ್ಲಿ ಅಪ್ಲಿಕೇಶನ್‌ ಸಲ್ಲಿಸಬಹುದು. ಇತರೆ ಹೆಚ್ಚಿನ ಮಾಹಿತಿಗಾಗಿ ದಿನಾಂಕ 2-8 ನವೆಂಬರ್ ಎಂಪ್ಲಾಯ್‌ಮೆಂಟ್‌ ನ್ಯೂಸ್ ಪತ್ರಿಕೆ ಚೆಕ್‌ ಮಾಡಬಹುದು.

✍ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : ನವೆಂಬರ್ 24 ( ಅಧಿಸೂಚನೆ ಪ್ರಕಟಿಸಿದ ದಿನಾಂಕದಿಂದ 21 ದಿನಗಳ ಒಳಗಾಗಿ ಅರ್ಜಿ ತಲುಪಿಸಲು ತಿಳಿಸಲಾಗಿದೆ.)

✍ ಅಪ್ಲಿಕೇಶನ್‌ ತಲುಪಿಸಬೇಕಾದ ವಿಳಾಸ :
Under Secretary, E-III Section,
Room No-5, 2nd Floor,
Zakhir Hussain Khand, NCERT,
Sri Aurobindo Marg,
New Delhi-110016
No. of posts:  15
Application Start Date:  6 ನವೆಂಬರ್ 2019
Application End Date:  24 ನವೆಂಬರ್ 2019
Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಸ್ಕಿಲ್‌ ಟೆಸ್ಟ್‌ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
Qualification: ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ, ಡಿಪ್ಲೊಮ, ಪದವಿ, ಸ್ನಾತಕೋತ್ತರ ಪದವಿ ಮತ್ತು ಇತರೆ ವಿಶೇಷ ತರಬೇತಿಗಳನ್ನು ಪಡೆದಿರಬೇಕು. ಜೊತೆಗೆ ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ಕಾರ್ಯಾನುಭವ ಹೊಂದಿರಬೇಕು.
Fee: # ಅರ್ಜಿ ಶುಲ್ಕ: ರೂ.200
Age Limit: ಕನಿಷ್ಠ 30 ವರ್ಷ, ಗರಿಷ್ಠ 45 ವರ್ಷವನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದು, ವಯೋಮಿತಿ ಸಡಿಲಿಕೆ ಸರ್ಕಾರಿ ನಿಯಮದ ಪ್ರಕಾರ ಆಯಾ ಜಾತಿವಾರು ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
Pay Scale: ಲೆವೆಲ್ 11 ಮತ್ತು 12 ಹುದ್ದೆಗಳಿಗೆ ರೂ.15,600-ರೂ.39100 ವರೆಗೆ, ಗ್ರೇಡ್ 2 ಹುದ್ದೆಗಳಿಗೆ ರೂ.5200-ರೂ.20,200 ವರೆಗೆ ನೀಡಲಾಗುತ್ತದೆ.
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments