Loading..!

ಮೆಸ್ಕಾಂ(MESCOM)ನಲ್ಲಿದೆ ನಿಮಗೊಂದು ಸುವರ್ಣಾವಕಾಶ : 200 ಹುದ್ದೆಗಳಿಗೆ ಅರ್ಜಿ ಆಹ್ವಾನ ಪರೀಕ್ಷೆ ಇಲ್ಲದೆ ನೇರ ಆಯ್ಕೆ!
Tags: Degree
Published by: Yallamma G | Date:28 ಜನವರಿ 2026
not found
ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಕನಸಿನೊಂದಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಒಂದಾದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (MESCOM) ವತಿಯಿಂದ 2025–26ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು,200 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮೆಸ್ಕಾಂ (MESCOM) 2025-26 ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಸಾಮಾನ್ಯ ಪದವೀಧರರು (BA, B.Sc, B.Com, etc) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 02-03-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.   

ಹುದ್ದೆಯ ವಿವರಗಳು, ಶೈಕ್ಷಣಿಕ ಅರ್ಹತೆ, ವಯೋಮಿತಿ, ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

📋 ನೇಮಕಾತಿ ವಿವರಗಳು (Recruitment Highlights):

ಸಂಸ್ಥೆಯ ಹೆಸರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (MESCOM
ಹುದ್ದೆಯ ಹೆಸರು: ಅಪ್ರೆಂಟಿಸ್ 
ಒಟ್ಟು ಹುದ್ದೆಗಳು: 200
ಉದ್ಯೋಗ ಸ್ಥಳ: ಮಂಗಳೂರು 
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:  02-03-2026 

🧑‍🎓 ಹುದ್ದೆಗಳ ವಿವರ : 
1 ಪದವೀಧರ ಅಪ್ರೆಂಟಿಸ್ (Graduate Apprentice) : 70
2 ತಾಂತ್ರಿಕ (ಡಿಪ್ಲೊಮಾ) ಅಪ್ರೆಂಟಿಸ್ : 65
3 ಸಾಮಾನ್ಯ ಪದವೀಧರ ಅಪ್ರೆಂಟಿಸ್ : 65

ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

🎓ಶೈಕ್ಷಣಿಕ ಅರ್ಹತೆ (Educational Qualification) : 
ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು:

🔹Graduate Apprentice: ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಪದವಿ (B.E / B.Tech) ಪಡೆದಿರಬೇಕು.

🔹Technician Apprentice: ಸಂಬಂಧಿತ ವಿಭಾಗದಲ್ಲಿ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಡಿಪ್ಲೊಮಾ (Diploma) ಹೊಂದಿರಬೇಕು.

🔹General Stream: ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ ಅಥವಾ ಬಿ.ಸಿ.ಎ ಪದವಿ ಮುಗಿಸಿರಬೇಕು.

🔹ಮುಖ್ಯ ಸೂಚನೆ: 2021, 2022, 2023, 2024 ಮತ್ತು 2025 ರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು

💼 ಆಯ್ಕೆ ಪ್ರಕ್ರಿಯೆ : 
* ಅಭ್ಯರ್ಥಿಗಳು ತಮ್ಮ ಪದವಿ ಅಥವಾ ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ (Merit Basis) ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
* ಆಯ್ಕೆಯಾದ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ ಮತ್ತು ಮಂಗಳೂರಿನಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ.

💰 ವೇತನ ಶ್ರೇಣಿ (Salary Details):
1 ಪದವೀಧರ ಅಪ್ರೆಂಟಿಸ್ (Graduate Apprentice) : ರೂ. 9,000/-
2 ತಾಂತ್ರಿಕ (ಡಿಪ್ಲೊಮಾ) ಅಪ್ರೆಂಟಿಸ್ : ರೂ. 8,000/-
3 ಸಾಮಾನ್ಯ ಪದವೀಧರ ಅಪ್ರೆಂಟಿಸ್ : ರೂ. 9,000/-

📝 ಅರ್ಜಿ ಸಲ್ಲಿಸುವುದು ಹೇಗೆ? (How to Apply):
ಹಂತ 1: NATS ಪೋರ್ಟಲ್‌ನಲ್ಲಿ ನೋಂದಣಿ (Registration/Enrollment)
ಅರ್ಜಿ ಸಲ್ಲಿಸಲು ಎಲ್ಲಾ ವಿದ್ಯಾರ್ಥಿಗಳು (ಹೊಸಬರು ಮತ್ತು ಹಳೆಯಬರು) https://nats.education.gov.in/ ಪೋರ್ಟಲ್ ಬಳಸಬೇಕು.
=> ಹೊಸ ವಿದ್ಯಾರ್ಥಿಗಳಿಗೆ (For Fresh Students):
https://nats.education.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
ಅಲ್ಲಿ "Student" ಮೇಲೆ ಕ್ಲಿಕ್ ಮಾಡಿ, ನಂತರ "Student Register" ಆಯ್ಕೆ ಮಾಡಿ.
ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ನೋಂದಣಿ ಆದ ನಂತರ ಲಾಗಿನ್ ಆಗಿ, ಪೂರ್ಣ ಅರ್ಜಿ ನಮೂನೆಯನ್ನು (Application form) ಭರ್ತಿ ಮಾಡಿ.
ಇದಾದ ನಂತರ ನಿಮಗೆ 12 ಅಂಕಿಯ ಅನನ್ಯ ಎನ್‌ರೋಲ್‌ಮೆಂಟ್ ಸಂಖ್ಯೆ (Unique Enrollment Number) ಸಿಗುತ್ತದೆ.
=> ಈಗಾಗಲೇ NATS 1.0 ನಲ್ಲಿ ನೋಂದಾಯಿತ ವಿದ್ಯಾರ್ಥಿಗಳಿಗೆ:
https://nats.education.gov.in/ ಗೆ ಹೋಗಿ "Student" ಕ್ಲಿಕ್ ಮಾಡಿ, ನಂತರ "Student Login" ಆಯ್ಕೆ ಮಾಡಿ.
"Forgot Password" ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಇಮೇಲ್ ಐಡಿ ನಮೂದಿಸಿ ಪಾಸ್‌ವರ್ಡ್ ರೀಸೆಟ್ (Reset Password) ಮಾಡಿಕೊಳ್ಳಿ.
ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ, ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ 12 ಅಂಕಿಯ ಎನ್‌ರೋಲ್‌ಮೆಂಟ್ ಸಂಖ್ಯೆಯನ್ನು ಪಡೆದುಕೊಳ್ಳಿ.

ಹಂತ 2: ಮೆಸ್ಕಾಂ ಹುದ್ದೆಗೆ ಅರ್ಜಿ ಸಲ್ಲಿಕೆ (Applying for MESCOM Vacancy)
ಎನ್‌ರೋಲ್‌ಮೆಂಟ್ ಸಂಖ್ಯೆ ಸಿಕ್ಕಿದ ನಂತರವೇ ನೀವು ಮೆಸ್ಕಾಂಗೆ ಅರ್ಜಿ ಸಲ್ಲಿಸಲು ಸಾಧ್ಯ.
NATS ಪೋರ್ಟಲ್‌ಗೆ (https://nats.education.gov.in/) ನಿಮ್ಮ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ (Student Login) ಆಗಿ.
ಅಲ್ಲಿ "Apply against advertised vacancies" ಎಂಬ ವಿಭಾಗದಲ್ಲಿ ಸರ್ಚ್ (Search) ಮಾಡಿ.
ಸರ್ಚ್ ಬಾಕ್ಸ್‌ನಲ್ಲಿ "Mangalore Electricity Supply Company Limited" ಎಂದು ಟೈಪ್ ಮಾಡಿ ಹುಡುಕಿ.
ಮೆಸ್ಕಾಂ ಅಧಿಸೂಚನೆ ಕಾಣಿಸಿದ ನಂತರ, ಅಲ್ಲಿರುವ "Apply" ಬಟನ್ ಮೇಲೆ ಕ್ಲಿಕ್ ಮಾಡಿ.
ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಮೇಲೆ "You have successfully applied for the vacancy" ಎಂಬ ಸಂದೇಶ ಬರುತ್ತದೆ.

📅 ಪ್ರಮಖ ದಿನಾಂಕಗಳು : 
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ದಿನಾಂಕಗಳನ್ನು ಗಮನದಲ್ಲಿಡಿ:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 30-01-2026
NATS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ: 24-02-2026
MESCOM ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026
ಶಾರ್ಟ್‌ಲಿಸ್ಟ್ ಪ್ರಕಟಣೆ ದಿನಾಂಕ: 06-03-2026
ದಾಖಲೆ ಪರಿಶೀಲನೆ ದಿನಾಂಕ: 17-03-2026 & 18-03-2026

ಉದ್ಯೋಗ ಸ್ಥಳ: ಮಂಗಳೂರು, ಕರ್ನಾಟಕ. ತರಬೇತಿ ಅವಧಿ: 01 ವರ್ಷ.
ಹೆಚ್ಚಿನ ಮಾಹಿತಿಗಾಗಿ: ಅಧಿಕೃತ ವೆಬ್‌ಸೈಟ್ ಅಥವಾ NATS ಪೋರ್ಟಲ್ ಅನ್ನು ಪರಿಶೀಲಿಸಿ.

ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಉದ್ಯೋಗದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!

📢 KPSC Vaani ವಿಶೇಷ : ಇಂತಹ ಇತ್ತೀಚಿನ ಸರ್ಕಾರಿ ಉದ್ಯೋಗ ಸುದ್ದಿಗಳು, ಅಧಿಸೂಚನೆ ವಿಶ್ಲೇಷಣೆ, ಮತ್ತು ಪರೀಕ್ಷಾ ಮಾರ್ಗದರ್ಶನಕ್ಕಾಗಿ KPSC Vaaniಯನ್ನು ನಿರಂತರವಾಗಿ ಅನುಸರಿಸಿ.
Application Start Date:  31 ಜನವರಿ 2026
Application End Date:  2 ಫೆಬ್ರುವರಿ 2026
To Download Official Notification

Comments