ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:11 ಜನವರಿ 2020

ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (KRCL) ಇಲ್ಲಿ ಖಾಲಿ ಇರುವ CAD ಡಿಸೈನರ್ ಮತ್ತು ಎಂಜಿನಿಯರಿಂಗ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ದಿನಾಂಕ ಜನವರಿ 17, 2020 ರಂದು ನೇರ ಸಂದರ್ಶನ ನಡೆಯಲಿದೆ. ಈ ಹುದ್ದೆಗಳ ಸಂದರ್ಶನದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಇ/ಬಿಟೆಕ್ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡಿರಬೇಕು ಹಾಗೂ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಡಿಪ್ಲೊಮಾ ಅಭ್ಯರ್ಥಿಗಳಲ್ಲಿ ಆರು ವರ್ಷ ಮತ್ತು ಪದವೀಧರ ಅಭ್ಯರ್ಥಿಗಳಲ್ಲಿ ಎರಡು ವರ್ಷಗಳ ಸೇವಾನುಭವವನ್ನು ಹೊಂದಿರುವುದು ಕಡ್ಡಾಯವಾಗಿದೆ. ಸಂದರ್ಶನ ನಡೆಯುವ ಸ್ಥಳ ಈ ಕೆಳಗಿನಂತಿದೆ: office of Chief Electrical Engineer/USBRL, Flat No.806, 8th floor, Antriksh Bhawan, 22 Kasturba Gandhi Marg, New Delhi-110001 ಅಭ್ಯರ್ಥಿಗಳು ಈ ಅಧಿಸೂಚನೆ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ ಲೋಡ್ ಮಾಡಿಕೊಂಡು ಓದಬಹುದಾಗಿದೆ.
Application Start Date: 10 ಜನವರಿ 2020
Application End Date: 17 ಜನವರಿ 2020
Work Location: ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (KRCL)
Selection Procedure: ನೇರ ಸಂದರ್ಶನ
Age Limit: ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 32 ವರ್ಷ ನಿಗದಿಪಡಿಸಿದ್ದು, ಮೀಸಲಾತಿಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆ ನೀಡಲಾಗಿದೆ (ಅಧಿಸೂಚನೆ ಗಮನಿಸಿ)
Pay Scale: Rs. 44,900/- ಪ್ರತಿ ತಿಂಗಳು
Employment Type: FULL_TIME
Hiring Organization: KPSC Vaani https://www.kpscvaani.com
Job Location: ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (KRCL), KA,





Comments