Loading..!

ಬೆಂಗಳೂರು ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ 297 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Hanamant Katteppanavar | Date:2 ಫೆಬ್ರುವರಿ 2021
not found
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಬೆಂಗಳೂರು (BAMUL) ಇಲ್ಲಿ ಖಾಲಿ ಇರುವ 297 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. 
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು, ಅರ್ಜಿ ಪ್ರಕ್ರಿಯೆಯು ಜನವರಿ 04, 2021 ರಂದು ಪ್ರಾರಂಭಗೊಂಡು ಫೆಬ್ರುವರಿ 03, 2021 ರಂದು ಕೊನೆಗೊಳ್ಳುತ್ತದೆ.
No. of posts:  297
Application Start Date:  4 ಜನವರಿ 2021
Application End Date:  3 ಫೆಬ್ರುವರಿ 2021
Selection Procedure: ವಿವಿಧ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ನೇರ ಆಯ್ಕೆಪಟ್ಟಿಯ ಮೂಲಕ ಆಯ್ಕೆ ಮಾಡಲಾಗುವುದು.
Qualification:
ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ ವಿವಿಧ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ, ಡಿಪ್ಲೋಮಾ, ಐಟಿಐ, ಬಿ.ಎ, ಬಿ.ಕಾಂ, ಎಂ.ಕಾಮ್, ಬಿ.ಎಸ್ಸಿ, ಎಂಬಿಎ, ಬಿ.ಬಿ.ಎ, ಇಂಜಿನಿಯರಿಂಗ್, ಎಂ.ಎಸ್ಸಿ ಮತ್ತು ಎಂ.ಸಿ.ಎ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee:

- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಶುಲ್ಕ ವಿವರ ಈ ಕೆಳಗಿನಂತಿದೆ.

* ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು 1000 /- ರೂ ಗಳು ಮತ್ತು 

* ಪ.ಜಾ ಮತ್ತು ಪ.ಪಂ ದ ಅಭ್ಯರ್ಥಿಗಳು 500/- ರೂ ಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕು.

Age Limit:

- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ- 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ- 35 ವರ್ಷ ವಯೋಮಿತಿಯೊಳಗಿನವರಾಗಿರಬೇಕು.

* ನೇಮಕಾತಿ ಅಧಿಸೂಚನೆಯಂತೆ ಮೀಸಲಾತಿಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆಯನ್ನು ನೀಡಲಾಗಿದೆ.

Pay Scale: ಹುದ್ದೆಗಳಿಗನುಗುಣವಾಗಿ ವಿವಿಧ ಶ್ರೇಣಿಯ ವೇತನವನ್ನು ನಿಗದಿಪಡಿಸಲಾಗಿದ್ದು, ಈ ಕುರಿತ ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಿ.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download the official notification
Related Tags: Degree ITI Diploma PG SSLC

Comments