Loading..!

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Published by: Tajabi Pathan | Date:18 ಮಾರ್ಚ್ 2023
not found

ಕರ್ನಾಟಕ ಅರಣ್ಯ ಇಲಾಖೆಯು ಕೆಎಫ್‌ಡಿ ಯಲ್ಲಿ ಖಾಲಿ ಇರುವ ಆನೆ ಕಾವಾಡಿಗ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 29 ಏಪ್ರಿಲ್ 2023 ರೊಳಗಾಗಿ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 
ಹುದ್ದೆಗಳ ವಿವರ : 19
ಕೊಡಗು - 4
ಚಾಮರಾಜನಗರ - 6
ಮೈಸೂರು - 5
ಶಿವಮೊಗ್ಗ - 4 

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಳಾಸ : 
ಕೊಡಗು ಜಿಲ್ಲೆಯ ಅರ್ಜಿ ಸಲ್ಲಿಕೆ ವಿಳಾಸ : "ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ", ಕೊಡಗು ವೃತ್ತ, ಅರಣ್ಯ ಭವನ, ಮೈಸೂರು ರಸ್ತೆ, ಮಡಿಕೇರಿ - 571201, ಕೊಡಗು 

ಮೈಸೂರು ಜಿಲ್ಲೆಯ ಅರ್ಜಿ ಸಲ್ಲಿಕೆಯ ವಿಳಾಸ : "ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ", ಮೈಸೂರು ವೃತ್ತ, ಅರಣ್ಯ ಭವನ, ಅಶೋಕಪುರಂ, ಮೈಸೂರು - 570008 

ಶಿವಮೊಗ್ಗ ಜಿಲ್ಲೆಯ ಅರ್ಜಿ ಸಲ್ಲಿಕೆಯ ವಿಳಾಸ : ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಶಿವಮೊಗ್ಗ ವೃತ್ತ, ಶಿವಮೊಗ್ಗ.
ಹೊಳೆಹೊನ್ನೂರು ರಸ್ತೆ, ಸರ್ಕಾರಿ ಶ್ರೀಗಂಧ ಕೋಠಿ ಆವರಣ, ವಿದ್ಯಾನಗರ, ಶಿವಮೊಗ್ಗ - 577203 

ಚಾಮರಾಜ ನಗರ ಜಿಲ್ಲೆಯ ಅರ್ಜಿ ಸಲ್ಲಿಕೆಯ ವಿಳಾಸ :  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಚಾಮರಾಜ ವೃತ್ತ, ಸುಲ್ತಾನ್ ಷರೀಫ್ ವೃತ್ತ, ಸತ್ಯಮಂಗಲ ರಸ್ತೆ, ಚಾಮರಾಜನಗರ -571313 

No. of posts:  19
Application Start Date:  30 ಮಾರ್ಚ್ 2023
Application End Date:  29 ಎಪ್ರಿಲ್ 2023
Work Location:  ಕರ್ನಾಟಕ
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಕರ್ನಾಟಕ ಅರಣ್ಯ ಇಲಾಖೆಯ ನಿಯಮಾನುಸಾರದಂತೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. 

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನ್ನಡ ಮಾತನಾಡುವ ಹಾಗೂ ಅರ್ಥೈಸಿಕೊಳ್ಳುವ ಸಾಮರ್ಥ್ಯ ಮತ್ತು ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವದು ಕಡ್ಡಾಯವಾಗಿರುತ್ತದೆ. 

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷ ವಯೋಮಿತಿಯಿಯನ್ನು ಹೊಂದಿರಬೇಕು. 
2A, 2B, 3A, 3B, OBC ಅಭ್ಯರ್ಥಿಗಳು: 03 ವರ್ಷಗಳು
SC, ST ಅಭ್ಯರ್ಥಿಗಳು : 5 ವರ್ಷಗಳ ಕಾಲ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. 

Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,600/- ರೂ ಗಳಿಂದ 32,600/- ರೂ ಗಳ ವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Employment Type: FULL_TIME
Hiring Organization: KPSC Vaani https://www.kpscvaani.com
Job Location: ಕರ್ನಾಟಕ, KA,
To Download Official Notification

Comments