ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ | ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಅರಣ್ಯ ಇಲಾಖೆ 2023 - 24 ನೇ ಸಾಲಿನಲ್ಲಿ ಗ್ರೂಪ್ ಸಿ ವೃಂದದ 540 ಅರಣ್ಯ ರಕ್ಷಕರು (ಗಸ್ತು ಅರಣ್ಯಪಾಲಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರಣ್ಯ ಇಲಾಖೆಯು ಸರಕಾರ ಅನುಮತಿಸಿರುವ 506 ಹುದ್ದೆಗಳು ಮತ್ತು ಇಂಬಾಕಿ 34 ಹುದ್ದೆಗಳು ಒಟ್ಟು 540 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 30 ಡಿಸೆಂಬರ್ 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು.
ಹುದ್ದೆಗಳ ವಿವರ : 540
ಬೆಂಗಳೂರು - 49
ಬೆಳಗಾವಿ -12
ಬಳ್ಳಾರಿ - 29
ಚಾಮರಾಜನಗರ - 83
ಚಿಕ್ಕಮಗಳೂರು - 52
ಧಾರವಾಡ -05
ಹಾಸನ -18
ಕಲಬುರ್ಗಿ - 58
ಕೆನರಾ - 33
ಕೊಡಗು - 26
ಮಂಗಳೂರು -62
ಮೈಸೂರು - 47
ಶಿವಮೊಗ್ಗ - 66
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಕರ್ನಾಟಕ ಅರಣ್ಯ ಇಲಾಖೆಯ ನಿಯಮಾನುಸಾರದಂತೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕರ್ನಾಟಕ ಪದವಿ ಪೂರ್ವ ಶಿಕಃಸ್ನ ಮಂಡಳಿಯು ನಡೆಸುವ ಪಿ.ಯು.ಸಿ. ವಿದ್ಯಾರ್ಹತೆಯ ಅಥವಾ ಪಿ.ಯು.ಸಿ. ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗಿನಂತೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಸಾಮಾನ್ಯ/ OBC ಅಭ್ಯರ್ಥಿಗಳಿಗೆ 200 ರೂ + ಸೇವಾ ಶುಲ್ಕ 20 ಹಾಗೂ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ/ ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 100 ರೂ + ಸೇವಾ ಶುಲ್ಕ 20 ಹಾಗೂ
ಅಂಗವಿಕಲ ಅಭ್ಯರ್ಥಿಗಳಿಗೆ ಅಜಿ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು ಮತ್ತು ಈ ಕೆಳಗಿನಂತೆ ಗರಿಷ್ಠ ವಯೋಮಿತಿಯಿಯನ್ನು ಹೊಂದಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ : 27 ವರ್ಷ
2A, 2B, 3A, 3B, OBC ಅಭ್ಯರ್ಥಿಗಳು: 30 ವರ್ಷಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ - 1 ಅಭ್ಯರ್ಥಿಗಳು : 32 ವರ್ಷಗಳ ವಯೋಮಿತಿಯಲ್ಲಿ ಹೊಂದಿರಬೇಕು.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 23500-550-24600-600-27000-650-29600-750-32600-850-36000- 950-39800-1100-46400-1250-47650 ಮಾಸಿಕ ವೇತನ ನೀಡಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments