Loading..!

ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ | ಕೂಡಲೇ ಅರ್ಜಿ ಸಲ್ಲಿಸಿ
Published by: Rukmini Krushna Ganiger | Date:16 ಜುಲೈ 2021
not found
- ಕರ್ನಾಟಕದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಮತ್ತು ನೀರಾವರಿ ಬೇಡಿಕೆಯನ್ನು ನೀಗಿಸುವ ಸಲುವಾಗಿ ಸ್ಥಾಪಿಸಲಾದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಸಂಪೂರ್ಣ ಸ್ವಾಮ್ಯ ಹೊಂದಿರುವ)ದಲ್ಲಿ ಖಾಲಿ ಇರುವ ಒಟ್ಟು 67 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. 

ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮುಖಾಂತರ  ದಿನಾಂಕ : 22/07/2021 ರೊಳಗೆ ಅರ್ಜಿ ಸಲ್ಲಿಸಬಹುದು.

 

ಹುದ್ದೆಗಳ ವಿವರ :

* ಡೆಪ್ಯುಟಿ ಮ್ಯಾನೇಜರ್ 

* ಸಿಸ್ಟಮ್ ಇಂಜಿನಿಯರ್ 

* ಸೀನಿಯರ್ ಅಕೌಂಟ್ಸ್ executive 

* ಅಕೌಂಟ್ ಅಸ್ಸಿಸ್ಟಂಟ್ಸ್ 

* ಆಫೀಸ್ ಅಸ್ಸಿಸ್ಟಂಟ್ಸ್ 

* ಪರ್ಸನಲ್ ಅಸ್ಸಿಸ್ಟಂಟ್ಸ್ 

* ಡೇಟಾ ಎಂಟ್ರಿ ಆಪರೇಟರ್ 

* ರೆಸೆಪ್ಟಿವ್ನಿಸ್ಟ್ ಕಮ್ ಟೆಲಿಫೋನ್ ಆಪರೇಟರ್

* ಡ್ರೈವರ್ 

* Attender 

* Peon 

ಇನ್ನು ಹೆಚ್ಚಿನ ಹುದ್ದೆಗಳು .....
No. of posts:  67
Application End Date:  22 ಜುಲೈ 2021
Work Location:  Karnataka
Selection Procedure: - ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವದು.
Qualification:
- ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ SSLC , PU (10+2),ಡಿಪ್ಲೊಮಾ ಹಾಗೂ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು ಜೊತೆಗೆ 2 - 3 ವರ್ಷದ ಸೇವಾನುಭವವನ್ನು ಹೊಂದಿರಬೇಕು.
Age Limit: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದನ್ವಯ ಕನಿಷ್ಠ 18 ವರ್ಷ ಆಗಿರಬೇಕು, ಗರಿಷ್ಠ 35 ವರ್ಷ ಮೀರಿರಬಾರದು. 
* ವರ್ಗಾವಾರು ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ನಿಯಮವು ಅನ್ವಯವಾಗಲಿದೆ.
Pay Scale: - ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನಾನ್ವಯ ವರ್ಗಾವಾರು ಹುದ್ದೆಗಳಿಗೆ ಸಂಬಂಧಿತ ವೇತನ  ಶ್ರೇಣಿಯನ್ನು ಪಡೆಯಲು ಅರ್ಹರಿರುತ್ತಾರೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
To Download the Official Notification
To Download the Official Application Format

Comments

Prakashgouda Goudar Sharanagouda ಜುಲೈ 16, 2021, 4:10 ಅಪರಾಹ್ನ
Manoj M ಜುಲೈ 16, 2021, 4:49 ಅಪರಾಹ್ನ