ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ಖಾಲಿ ಇರುವ ಸನ್ನದು ಲೆಕ್ಕ ಸಹಾಯಕರು, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸಹಾಯಕರು ಮತ್ತು ಕಿರಿಯ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ವಿಳಾಸವನ್ನು ಈ ಕೆಳೆಗೆ ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹದ್ದೆಗಳಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 26/07/2024 ಸಾಯಂಕಾಲ 05:30 ದೊಳಗಾಗಿ ಕೊರಿಯರ್/ ರಿಜಿಸ್ಟರ್ಡ್ ಪೋಸ್ಟ್/ ಖುದ್ದಾಗಿ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ :
"ಸೌಹಾರ್ದ ಸಹಕಾರಿ ಸೌದ" 468,
ಒಂದನೇ ಮಹಡಿ, 18ನೇ ಅಡ್ಡರಸ್ತೆ,
ಮಾರ್ಗೋಸ ರಸ್ತೆ ಮಲ್ಲೇಶ್ವರ,
ಬೆಂಗಳೂರು-560055.
ಹುದ್ದೆಗಳ ವಿವರ : 39
ಸನ್ನದು ಲೆಕ್ಕಪರಿಶೋಧಕರು : 01
ಕಾನೂನು ಅಧಿಕಾರಿ : 02
ಮಾನವ ಸಂಪನ್ಮೂಲ ಅಧಿಕಾರಿ : 01
ತರಬೇತಿ ಅಧಿಕಾರಿ : 01
ಸೌಹಾರ್ದ ಅಭಿವೃದ್ಧಿ ಅಧಿಕಾರಿ : 11
ಸಹಾಯಕರು : 08
ಟೈಪಿಸ್ಟ್ ಕಂ ಸ್ಟೆನೋಗ್ರಾಫರ್ : 02
ಕಿರಿಯ ಸಹಾಯಕರು : 11
ಉಪ ಸಿಬ್ಬಂದಿ ಕಮ್ / ವಾಹನ ಚಾಲಕ : 02
ಅರ್ಜಿ ಶುಲ್ಕವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
- ಸನ್ನದು ಲೆಕ್ಕಪರಿಶೋಧಕರು, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ 500/- ರೂ
- ಸಹಾಯಕರು, ಟೈಪಿಸ್ಟ್ ಕಂ ಸ್ಟೆನೋಗ್ರಾಫರ್, ಕಿರಿಯ ಸಹಾಯಕರು, ಉಪ ಸಿಬ್ಬಂದಿ ಕಮ್ / ವಾಹನ ಚಾಲಕ ಹುದ್ದೆಗಳಿಗೆ 300/- ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ಸನ್ನದು ಲೆಕ್ಕಪರಿಶೋಧಕರು ಹುದ್ದೆಗಳಿಗೆ : 60,000/-
- ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ ಹುದ್ದೆಗಳಿಗೆ : 35000/-
- ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ : 28000/- ರೂ
- ಸಹಾಯಕರು, ಟೈಪಿಸ್ಟ್ ಕಂ ಸ್ಟೆನೋಗ್ರಾಫರ್ : 20000/-
- ಕಿರಿಯ ಸಹಾಯಕರು, ಉಪ ಸಿಬ್ಬಂದಿ ಕಮ್ / ವಾಹನ ಚಾಲಕ ಹುದ್ದೆಗಳಿಗೆ : 13000/- ರೂಗಳವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ವಿವರಗಳಿಗಾಗಿ ಈ ಕೆಳೆಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.





Comments