Loading..!

ಕರ್ನಾಟಕ ಸಹಕಾರ ಮಹಾಮಂಡಳ(KSCCF )ದಲ್ಲಿ 34 ಹುದ್ದೆಗಳ ಭರ್ತಿ; ಅರ್ಜಿ ಸಲ್ಲಿಸಲು ಫೆಬ್ರವರಿ 7 ಕೊನೆ ದಿನ
Tags: Degree
Published by: Yallamma G | Date:12 ಜನವರಿ 2026
not found
KSCCF Recruitment 2026: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ 34 ಹುದ್ದೆಗಳ ನೇಮಕಾತಿ - ಈಗಲೇ ಅರ್ಜಿ ಸಲ್ಲಿಸಿ!

ಬೆಂಗಳೂರು: ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ (KSCCF) ಭರ್ಜರಿ ಸಿಹಿಸುದ್ದಿ ನೀಡಿದೆ. ಮಹಾಮಂಡಳದಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 34 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ನೇಮಕಾತಿಯ ಮೂಲಕ ಔಷಧಿಕಾರ, ಪ್ರಥಮ ದರ್ಜೆ ಸಹಾಯಕ ಮತ್ತು ಮಾರಾಟ ಸಹಾಯಕ ಒಟ್ಟು 34 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದ್ದು, SSLC, PUC, ಡಿಪ್ಲೊಮಾ, ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 07-ಫೆಬ್ರವರಿ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯು ರಾಜ್ಯ ಮಟ್ಟದ ಉಳಿಕೆ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವಾಗಿದೆ. ಆಸಕ್ತರು ಈ ಕೆಳಗಿನ ಸಂಪೂರ್ಣ ವಿವರಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

📌 ನೇಮಕಾತಿ ವಿವರಗಳು (Highlights)

🏢 ಸಂಸ್ಥೆಯ ಹೆಸರು : Karnataka State Co-Operative Consumers Federation Ltd. (KSCCF)
📍ಹುದ್ದೆಯ ಸ್ಥಳ: ಬೆಂಗಳೂರು
📅 ಅಧಿಸೂಚನೆ ದಿನಾಂಕ: 08-01-2026
🖥️ ಅರ್ಜಿಯ ವಿಧಾನ: ಆನ್‌ಲೈನ್
🌐 ಅಧಿಕೃತ ವೆಬ್‌ಸೈಟ್: virtualofficeerp.com/ksccf2026
🧾 ನೇಮಕಾತಿ ವರ್ಷ: 2026

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

📍ಹುದ್ದೆಗಳ ವಿವರ : 
ಫಾರಾಸಿಸ್ಟ್ (Pharmacist): 07 ಹುದ್ದೆಗಳು
ಪ್ರಥಮ ದರ್ಜೆ ಗುಮಾಸ್ತರು (FDA): 10 ಹುದ್ದೆಗಳು
ಸಹಾಯಕರು / ವಿಕ್ರಯ ಸಹಾಯಕರು: 17 ಹುದ್ದೆಗಳು

🎓 ಅರ್ಹತಾ ಮಾನದಂಡ :
ಫಾರಾಸಿಸ್ಟ್: 
1. ಸರ್ಕಾರದ ಅಂಗೀಕೃತ ಸಂಸ್ಥೆಯಿಂದ ಡಿಪ್ಲೋಮಾ ಇನ್: ಫಾರಾಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
2. ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು.
3. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

ಪ್ರಥಮ ದರ್ಜೆ ಗುಮಾಸ್ತರು: 
1. ಭಾರತದ ಕಾನೂನಿನಡಿಯಲ್ಲಿ ವಿಶ್ವವಿದ್ಯಾಲಯದಿಂದ ತೇರ್ಗಡೆಯಾಗಿರಬೇಕು. ಸ್ಥಾಪನೆಯಾದ ಯಾವುದೇ ಪದವಿಯಲ್ಲಿ
2. ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು.
3. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

ವಿಕ್ರಯ ಸಹಾಯಕರು:
1. ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು.
2. ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು.
3. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

⏳ ವಯಸ್ಸಿನ ಮಿತಿ: 
ವಯೋಮಿತಿ ವಿವರ (ಒಂದು ಬಾರಿಯ ವಿಶೇಷ ಸಡಿಲಿಕೆಯೊಂದಿಗೆ): 
ಕರ್ನಾಟಕ ಸರ್ಕಾರದ ವಿಶೇಷ ಆದೇಶದನ್ವಯ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ:
ಸಾಮಾನ್ಯ ವರ್ಗ: ಕನಿಷ್ಠ 18 ವರ್ಷ, ಗರಿಷ್ಠ 38 ವರ್ಷ.
ಪ್ರವರ್ಗ 2ಎ, 2ಬಿ, 3ಎ, 3ಬಿ: ಗರಿಷ್ಠ 41 ವರ್ಷ.
ಪ.ಜಾತಿ, ಪ.ಪಂಗಡ, ಪ್ರವರ್ಗ-1: ಗರಿಷ್ಠ 43 ವರ್ಷ.
ವಿಕಲಚೇತನರು ಹಾಗೂ ವಿಧವೆಯರಿಗೆ ಹೆಚ್ಚುವರಿ 10 ವರ್ಷಗಳ ಸಡಿಲಿಕೆ ಇರುತ್ತದೆ.

💸 ಅರ್ಜಿ ಶುಲ್ಕ:
ಪ.ಜಾ, ಪ.ಪಂ, ಪ್ರ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ: ₹500/-
ಇತರೆ ವರ್ಗದ ಅಭ್ಯರ್ಥಿಗಳಿಗೆ: ₹1,000/-

💰 ವೇತನ : 
ಫಾರಾಸಿಸ್ಟ್ (Pharmacist): ವೇತನ ಶ್ರೇಣಿ: ₹25,800 - ₹52,650.
ಪ್ರಥಮ ದರ್ಜೆ ಗುಮಾಸ್ತರು (FDA): ವೇತನ ಶ್ರೇಣಿ: ₹21,400 - ₹45,300.
ಸಹಾಯಕರು / ವಿಕ್ರಯ ಸಹಾಯಕರು: ವೇತನ ಶ್ರೇಣಿ: ₹19,950 - ₹37,900.

💼 ಆಯ್ಕೆ ಪ್ರಕ್ರಿಯೆ :
ಅರ್ಹ ಅಭ್ಯರ್ಥಿಗಳಿಗೆ ಒಟ್ಟು 200 ಅಂಕಗಳ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ (15 ಅಂಕಗಳು) ಕರೆಯಲಾಗುವುದು. ಲಿಖಿತ ಪರೀಕ್ಷೆಯ ಅಂಕಗಳನ್ನು ಶೇ. 85ಕ್ಕೆ ಇಳಿಸಿ, ಸಂದರ್ಶನದ ಅಂಕಗಳನ್ನು ಸೇರಿಸಿ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

📝 ಅರ್ಜಿ ಸಲ್ಲಿಸುವ ವಿಧಾನ : 
=>  ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಮಹಾಮಂಡಳದ ಅಧಿಕೃತ ವೆಬ್‌ಸೈಟ್ https://virtualofficeerp.com/ksccf2026 ಗೆ ಭೇಟಿ ನೀಡಿ.

=> ನೋಂದಣಿ (Registration):
ವೆಬ್‌ಸೈಟ್‌ನಲ್ಲಿರುವ ಅಧಿಸೂಚನೆ ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಓದಿ.
 ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಂಡು 'NEW REGISTRATION' ಬಟನ್ ಒತ್ತಿ.
ನಿಮ್ಮ ಇಮೇಲ್ ಅಥವಾ ಮೊಬೈಲ್‌ಗೆ ಬರುವ Registration ID ಮತ್ತು Password ಅನ್ನು ಬರೆದಿಟ್ಟುಕೊಳ್ಳಿ.

=> ಅರ್ಜಿ ಭರ್ತಿ ಮಾಡಿ: ಸಂಬಂಧಪಟ್ಟ ಹುದ್ದೆಯನ್ನು ಆಯ್ಕೆ ಮಾಡಿ 'APPLY' ಬಟನ್ ಒತ್ತಿ ವಿವರಗಳನ್ನು ಭರ್ತಿ ಮಾಡಿ.
ವಿವರಗಳನ್ನು ಭರ್ತಿ ಮಾಡಿದ ನಂತರ 'PREVIEW' ಬಟನ್ ಒತ್ತಿ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ.
ಏನಾದರೂ ತಪ್ಪುಗಳಿದ್ದರೆ 'EDIT' ಬಟನ್ ಬಳಸಿ ಸರಿಪಡಿಸಬಹುದು.

=> ಭಾವಚಿತ್ರ ಮತ್ತು ಸಹಿ ಅಪ್‌ಲೋಡ್: ಬಿಳಿ ಕಾಗದದ ಮೇಲೆ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಅಂಟಿಸಿ, ಅದರ ಕೆಳಗೆ ಕಪ್ಪು ಮಾರ್ಕರ್ ಪೆನ್ನಿನಿಂದ ಸಹಿ ಮಾಡಿ ಸ್ಕ್ಯಾನ್ ಮಾಡಿಕೊಳ್ಳಿ.
ಫೈಲ್ ಗಾತ್ರ 10KB ಯಿಂದ 50KB ಒಳಗಿರಬೇಕು (JPG/JPEG ಫಾರ್ಮ್ಯಾಟ್).
ಭಾವಚಿತ್ರದ ಮೇಲೆ ಸಹಿ ಮಾಡಬಾರದು, ಅದರ ಕೆಳಗಿನ ಅಂಕಣದಲ್ಲಿ ಮಾತ್ರ ಸಹಿ ಇರಬೇಕು.

=> ದಾಖಲೆಗಳ ಅಪ್‌ಲೋಡ್:
  ವಿದ್ಯಾರ್ಹತೆಯ ಅಂಕಪಟ್ಟಿಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರಗಳನ್ನು ಸ್ವಯಂ ದೃಢೀಕರಿಸಿ (Self-Attestation) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.

=> ಅರ್ಜಿ ಶುಲ್ಕ ಪಾವತಿ:
  'PAYMENT GATEWAY' ಲಿಂಕ್ ಬಳಸಿ Net Banking, Debit/Credit Card ಅಥವಾ UPI ಮೂಲಕ ಶುಲ್ಕ ಪಾವತಿಸಿ.

=> ಶುಲ್ಕ: ಸಾಮಾನ್ಯ ಮತ್ತು ಇತರೆ ವರ್ಗಕ್ಕೆ ₹1,000/-, ಪ.ಜಾ/ಪ.ಪಂ/ಪ್ರ-1/ವಿಕಲಚೇತನರಿಗೆ ₹500/-.

=> ಅಂತಿಮ ಸಲ್ಲಿಕೆ ಮತ್ತು ಪ್ರಿಂಟ್: ಎಲ್ಲಾ ಪ್ರಕ್ರಿಯೆ ಮುಗಿದ ನಂತರ 'PRINT APPLICATION' ಬಟನ್ ಒತ್ತಿ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

📅 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 09/01/2026
ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07/02/2026 

⭐ ನೇಮಕಾತಿಗೆ ಅರ್ಹತೆಗಳು :
1. ಭಾರತೀಯ ನಾಗರೀಕನಾಗಿರತಕ್ಕದ್ದು,
2. ಅಭ್ಯರ್ಥಿಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಂತನಾಗಿರಬೇಕು. ದೈಹಿಕವಾಗಿ ಅನರ್ಹತೆ ಹೊಂದಿರುವ ಬಗ್ಗೆ ವೈದ್ಯಕೀಯ ಮಂಡಳಿ ವರದಿ ಆಧರಿಸಿ ಅನರ್ಹನೆಂದು ತಿರಸ್ಕರಿಸುವ ಅಧಿಕಾರವನ್ನು ಸಂಸ್ಥೆ ಕಾಯ್ದಿರಿಸಿಕೊಂಡಿದೆ.
3. ಅಭ್ಯರ್ಥಿಯು ನೇಮಕಾತಿ ಹೊಂದುವ ಹುದ್ದೆ ನಿರ್ವಹಿಸಲು ಸಮರ್ಥನಾಗಿರಬೇಕು.
4. ನಿಗದಿತ ಶೈಕ್ಷಣಿಕ ಅರ್ಹತೆಯ ಜೊತೆಗೆ ಮೇಲ್ಕಂಡ ಅರ್ಹತೆಗಳನ್ನು ಹೊಂದಿರತಕ್ಕದ್ದು.
No. of posts:  34
Application Start Date:  9 ಜನವರಿ 2026
Application End Date:  7 ಫೆಬ್ರುವರಿ 2026
Work Location:  ಬೆಂಗಳೂರು, ಕರ್ನಾಟಕ
To Download Official Notification

Comments