Loading..!

ಕಲಬುರಗಿಯ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: PG MBBS
Published by: Yallamma G | Date:9 ಮಾರ್ಚ್ 2023
not found

ರಾಷ್ಟ್ರೀಯ ಆಯುಷ್‌ ಅಭಿಯಾನದಡಿ (ಸಿಎಸ್ಎಸ್) ಮೇಲ್ದರ್ಜೆಗೇರಿಸಲಾದ ಕಲಬುರಗಿಯ ಜಿಲ್ಲಾ ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಸಂಯುಕ್ತ ಆಸ್ಪತ್ರೆ ಹಾಗೂ ಸೇಡಂ, ಅಫಜಲಪೂರ, ಚಿತ್ತಾಪೂರದ ಸರ್ಕಾರಿ ಆರ್ಯುವೇದ ಆಸ್ಪತ್ರೆಗಳಲ್ಲಿ ಖಾಲಿ ಇರುವ 32 ಔಷದ ವಿತರಕರು, ಮಸಾಜಿಸ್ಟ್ ಮತ್ತು ಸ್ತ್ರೀರೋಗ ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ  ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 16/03/2023 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
* ಆಸಕ್ತ ಅಭ್ಯರ್ಥಿಗಳು ಜಿಲಾ ಆಯುಷ್ ಕಚೇರಿ, ಗಾಜಿಪೂರ ಕಲಬುರಗಿ ಇಲ್ಲಿ ಬೆಳ್ಳಿಗೆ 10:30 ಗಂಟೆಯಿಂದ ಸಾ. 5.00 ಯವರೆಗೆ ಅರ್ಜಿಗಳನ್ನು ನೀಡಲಾಗುವುದು. ಅರ್ಜಿಯನ್ನು ಭರ್ತಿಮಾಡಿ ದೃಢೀಕೃತ ಮೂಲದಾಖಲೆಗಳೊಂದಿಗೆ 16-03-2023 ರಂದು ಸಾ. 5.00 ಗಂಟೆಯ ಒಳಗಾಗಿ ಅರ್ಜಿಯನ್ನು ಕಚೇರಿಯ ಅವಧಿಯಲ್ಲಿ ಸಲ್ಲಿಸಬಹುದಾಗಿರುತ್ತದೆ. ನಂತರ ಬಂದ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. 

ಹುದ್ದೆಗಳ ವಿವರ : 32
ಆಯುಷ್ ತಜ್ಞ ವೈದ್ಯರು : 8
ಔಷಧ ವಿತರಕರು : 4
ಮಸಾಜಿಸ್ಟ್ : 8
ಕ್ಷಾರಸೂತ್ರ ಅಟೆಂಡರ್ : 4
ಸ್ತ್ರೀರೋಗ ಅಟೆಂಡರ್ (ಮಹಿಳೆ) : 4
ಮಲ್ಟಿಪರ್ಪಸ್ ವರ್ಕರ್ : 4

No. of posts:  32
Application Start Date:  9 ಮಾರ್ಚ್ 2023
Application End Date:  16 ಮಾರ್ಚ್ 2023
Work Location:  ಕಲಬುರಗಿ
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳುSSLC/ Diploma/ MS/ MD/ PG ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು 
- ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.

Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ 10300/- ರಿಂದ 40000/- ರೂಗಳವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Employment Type: FULL_TIME
Hiring Organization: KPSC Vaani https://www.kpscvaani.com
Job Location: ಕಲಬುರಗಿ, KA,
To Download Official Notification
Related Tags: PG MBBS

Comments