ಭಾರತೀಯ ತೈಲ ನಿಗಮ ನಿಯಮಿತ(IOCL) ನೇಮಕಾತಿ 2025: 523 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ತಮ್ಮ ವೃತ್ತಿ ಜೀವನವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL) ನಲ್ಲಿ ಪ್ರಾರಂಭಿಸಬಹುದಾಗಿದೆ. ಇದು ಭಾರತದೆಲ್ಲೆಡೆ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಆಗಸ್ಟ್ 2025 ರ IOCL ಅಧಿಕೃತ ಅಧಿಸೂಚನೆಯ ಮೂಲಕ537 ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಅಪ್ರೆಂಟಿಸ್ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು 2025ರ ಅಕ್ಟೋಬರ್ 11ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಉದ್ಯೋಗ ಪೋಸ್ಟಿಂಗ್‌ಗಳಿವೆ . ಈ ರಾಜ್ಯಗಳ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದು ಕೇವಲ ನೌಕರಿ ಮಾತ್ರವಲ್ಲ, ಸ್ಥಿರ ವೇತನ, ಪಿಂಚಣಿ ಸೌಲಭ್ಯಗಳು ಮತ್ತು ಉಜ್ವಲ ಭವಿಷ್ಯದ ಅವಕಾಶವಾಗಿದೆ. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಆಯ್ಕೆಯ ಪ್ರಕ್ರಿಯೆಯ ಕುರಿತು ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮ ಕನಸಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಿದ್ಧರಾಗಿ!
📌ನೇಮಕಾತಿ ಪ್ರಮುಖ ವಿವರಗಳು :
🏛️ಸಂಸ್ಥೆ ಹೆಸರು : ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL)
🧾ಒಟ್ಟು ಹುದ್ದೆಗಳ ಸಂಖ್ಯೆ : 523
👨💼ಹುದ್ದೆಯ ಹೆಸರು : ಅಪ್ರೆಂಟಿಸ್ (Apprentice)
📍 ಉದ್ಯೋಗ ಸ್ಥಳ : ಅಖಿಲ ಭಾರತ
Comments